ಮಡಿಕೇರಿ, ನ. ೧೬: ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರ ಕುರಿತು ಅವಹೇಳನಕಾರಿ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದ ಆರೋಪಿಯನ್ನು ಮಡಿಕೇರಿ ನಗರ ಪೋಲೀಸರು ಬಂಧಿಸಿದ್ದಾರೆ.

ಚನ್ನಪಟ್ಟಣ ತಾಲೂಕಿನ ಹೊಟ್ಟಿಗನ ಹೊಸಹಳ್ಳಿ ಗ್ರಾಮದ ನಿವಾಸಿ ಎಳನೀರು ವ್ಯಾಪಾರಿ ಶರತ್ (೩೭) ಎಂಬಾತನೆ ಆರೋಪಿಯಾಗಿದ್ದು, ಈತನನ್ನು ಚನ್ನಪಟ್ಟಣದಲ್ಲಿ ಬಂಧಿಸಲಾಗಿದೆ.

ಬಿಹಾರ ಚುನಾವಣೆಯಲ್ಲಿ ಫಲಿತಾಂಶ ಸಂಬAಧ ಪೊನ್ನಣ್ಣ ಅವರು ಮಾಧ್ಯಮವೊಂದರಲ್ಲಿ ನೀಡಿದ್ದ ಹೇಳಿಕೆಗೆ ಸಂಬAಧಿಸಿದAತೆ ಶರತ್ ಅವಹೇಳನಕಾರಿ ಸಂದೇಶವನ್ನು ಹರಿಯಬಿಟ್ಟಿದ್ದು, ಈತನನ್ನು ಬಂಧಿಸುವಲ್ಲಿ ಮಡಿಕೇರಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.