ಮಡಿಕೇರಿ: ಭಾರೀ ಕುತೂಹಲ ಮೂಡಿಸಿದ್ದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಭರ್ಜರಿ ಗೆಲುವು ದಾಖಲಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ಜಿಲ್ಲಾ ಕೇಂದ್ರ ಮಡಿಕೇರಿಯ ಇಂದಿರಾಗಾAಧಿ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು. ಜಿಲ್ಲಾಧ್ಯಕ್ಷ ರವಿಕಾಳಪ್ಪ, ಮಾಜಿ ಅಧ್ಯಕ್ಷ ರಾಬಿನ್ ದೇವಯ್ಯ, ಬಿ.ಕೆ. ಅರುಣ್ ಕುಮಾರ್, ಅರುಣ್ ಶೆಟ್ಟಿ, ಮನು ಮಂಜುನಾಥ್, ಕಾಂಗೀರ ಅಶ್ವಿನ್, ಅನಿತಾ ಪೂವಯ್ಯ, ಸಬಿತಾ, ಸವಿತಾ ರಾಖೇಶ್, ಡೀನ್ ಬೋಪಣ್ಣ, ಕನ್ನಿಕೆ, ಅಪ್ಪಣ್ಣ, ಶಜೀಲ್ ಕೃಷ್ಣನ್, ಕೆ.ಎಸ್. ರಮೇಶ್ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.ಸುAಟಿಕೊಪ್ಪ: ಎನ್‌ಡಿಎ ಮೈತ್ರಿಕೂಟವು ಭರ್ಜರಿ ಜಯಗಳಿಸಿರುವುದನ್ನು ಸುಂಟಿಕೊಪ್ಪ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ಕನ್ನಡವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಜಮಾವಣೆಗೊಂಡು ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್‌ಶಾ, ಅವರುಗಳಿಗೆ ಜೈಕಾರ ಕೂಗುತ್ತಾ ಪಟಾಕಿ ಸಿಡಿಸಿ ವಿಜಯೋತ್ಸವವನ್ನು ಆಚರಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್. ಸುನಿಲ್‌ಕುಮಾರ್ ಮಾತನಾಡಿ, ಮತಚೋರಿ ಮಹಾಘಟ್ ಬಂಧನ್ ಬಿಹಾರ ಜನತೆಯು ತಿರಸ್ಕರಿಸಿದ್ದು, ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲೂ ೨೦೨೮ರಲ್ಲಿ ಬಿಜೆಪಿ ಪಕ್ಷವೂ ಬಹುಮತದೊಂದಿಗೆ ಅಧಿಕಾರದ ಹಿಡಿಯಲಿದೆ. ಮುಂದಿನ ದಿನಗಳಲ್ಲಿ ಸ್ಥಳೀಯ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳ ಚುನಾವಣೆಯಲ್ಲಿ ತಮ್ಮ ಪಕ್ಷವು ಅಧಿಕಾರ ಹಿಡಿಯಲಿದೆ ಆ ನಿಟ್ಟಿನಲ್ಲಿ ಕಾರ್ಯಕರ್ತರು ಕಾರ್ಯನಿರ್ವಹಿಸುವ ಮೂಲಕ ರಾಜ್ಯದ ಚುಕ್ಕಾಣಿಯನ್ನು ಹಿಡಿಯುವಂತಾಗಬೇಕೆAದರು.

ಈ ಸಂದರ್ಭ ನಗರ ಬಿಜೆಪಿ ಅಧ್ಯಕ್ಷ ಧನು ಕಾವೇರಪ್ಪ, ತಾಲೂಕು ಬಿಜೆಪಿ ಸದಸ್ಯ ಬಿ.ಕೆ.ಪ್ರಶಾಂತ್, ವಿ.ಎ.ಸಂತೋಷ್, ಗ್ರಾ.ಪಂ. ಬಿ.ಎಂ.ಸುರೇಶ್, ವಸಂತಿ, ಬಿಜೆಪಿ ಕಾರ್ಯಕರ್ತ ಬಿ.ಎಸ್.ಆಶೋಕ, ಲೀಲಾ ಮೇದಪ್ಪ, ಸಹನಾ, ಪ್ರಾ.ಕೃ.ಪ.ಸ.ಸಂ. ನಿರ್ದೇಶಕ ದಯಾನಂದ, ನಿಖಿಲ್, ಪಾಂಡ್ಯನ್ ಮತ್ತಿತರರು ಇದ್ದರು. ವೀರಾಜಪೇಟೆ: ಶುಕ್ರವಾರ ಬಿಹಾರ ಚುನಾವಣೆಯ ಫಲಿತಾಂಶದಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಐತಿಹಾಸಿಕ ಗೆಲುವು ದೊರೆತ ಹಿನ್ನಲೆಯಲ್ಲಿ ನಗರ ಬಿಜೆಪಿ ಪಕ್ಷದ ವತಿಯಿಂದ ವಿರಾಜಪೇಟೆ ನಗರ ಬಿಜೆಪಿ ಅಧ್ಯಕ್ಷ ಅನಿಲ್ ಮಂದಣ್ಣ ಅವರ ನೇತೃತ್ವದಲ್ಲಿ ಸಂಭ್ರಮಾಚರಣೆ ನಡೆಯಿತು.

ವೀರಾಜಪೇಟೆ ನಗರದ ಗಡಿಯಾರ ಕಂಬದ ಬಳಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ಈ ಸಂದರ್ಭ ಮಾತನಾಡಿದ ರಾಜ್ಯ ಮಹಿಳಾ ಘಟಕದ ಬಿಜೆಪಿ ಸದಸ್ಯರಾದ ಪಟ್ಟಡ ರೀನಾ ಪ್ರಕಾಶ್ ಅವರು, ಬಿಜೆಪಿ ಮತಗಳ್ಳತನ ಮಾಡಿದೆ ಎಂಬ ರಾಹುಲ್ ಗಾಂಧಿ ಆರೋಪಕ್ಕೆ ಬಿಹಾರಿನ ಪ್ರಜ್ಞಾವಂತ ಮತದಾರರು ತಕ್ಕ ಪಾಠ ಕಲಿಸುವ ಮೂಲಕ ಇತಿಹಾಸಕ್ಕೆ ಮುನ್ನುಡಿ ಬರೆದಿದ್ದಾರೆ. ಮೋದಿ ಜನಪ್ರಿಯತೆಗೆ ಇದೇ ಸಾಕ್ಷಿ. ಇದೇ ಮೊದಲ ಬಾರಿಗೆ ಬಿಹಾರದಲ್ಲಿ ಎನ್‌ಡಿಎ ಮೈತ್ರಿಗೆ ೨೦೦ ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ದೊರೆತಿದ್ದು ಮೋದಿ ಜನಪ್ರೀಯತೆಗೆ ಸಾಕ್ಷಿಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಜನ ಮೆಚ್ಚಿದ ಕಾರ್ಯಕ್ರಮಗಳು ಬಿಹಾರ ಜನತೆಗೆ ವರದಾನವಾಗಿದೆ.

ಮುಂದಿನ ದಿನಗಳಲ್ಲಿ ದೇಶದ ಎಲ್ಲಾ ಕಡೆಗಳಲ್ಲಿ ಬಿಜೆಪಿ ಪಕ್ಷದ ಸದಸ್ಯರು ಹೆಚ್ಚಿನ ಮತಗಳ ಅಂತರದಿAದ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದರು.

ಬಿಜೆಪಿ ಒಬಿಸಿ ಅಧ್ಯಕ್ಷ ಸುರೇಶ್, ಮುಖಂಡರಾದ ರಘು ನಾಣಯ್ಯ, ಬಿ.ಡಿ. ಸುನೀತಾ, ಸಾಯಿನಾಥ್ ನಾಯ್ಕ್, ಆನಂದ ನಂಜಪ್ಪ, ಶಿವು, ಸಚಿನ್ ಕುಟ್ಟಯ್ಯ, ಪ್ರದೀಪ್ ರೈ, ಉಣ್ಣಿ, ಯತಿರಾಜ್, ಸಂಪಿ ಪೂಣಚ್ಚ, ಯತಿರಾಜ್, ಅನುಪಮ ಕಿಶೋರ್, ಶಿನೋಜ್, ದಿವಾಕರ್ ಶೆಟ್ಟಿ, ಶಂಕರ್ ಶೆಟ್ಟಿ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಸೋಮವಾರಪೇಟೆ: ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು, ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.

ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ಸೇರಿದ ಕಾರ್ಯಕರ್ತರು, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ ಸೇರಿದಂತೆ ನಾಯಕರುಗಳಿಗೆ ಜಯಕಾರ ಕೂಗಿದರು.

ಈ ಸಂದರ್ಭ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಅವರು, ಭಾರತೀಯ ಜನತಾ ಪಾರ್ಟಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಗೆಲುವಿನೊಂದಿಗೆ ಬಿಜೆಪಿ ಪರ ಜನರ ವಿಶ್ವಾಸ ಇರುವುದು ಮತ್ತೋಮ್ಮೆ ಸಾಬೀತಾಗಿದೆ. ಮೋದಿ ನಾಯಕತ್ವದಲ್ಲಿ ಭಾರತ ಅಭಿವೃದ್ಧಿಯಾಗುತ್ತಿದೆ.

ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ಸುಳ್ಳು ಆರೋಪಗಳಿಗೆ ಬಿಹಾರದ ಮತದಾರ ತಕ್ಕ ಪಾಠ ಕಲಿಸಿದ್ದಾರೆ ಎಂದರು.

ಕಾAಗ್ರೆಸ್ ಆಡಳಿತದಿಂದ ರಾಜ್ಯದ ಜನರು ರೋಸಿ ಹೋಗಿದ್ದಾರೆ. ಮುಂದಿನ ೨೦೨೮ರಲ್ಲಿ ಕರ್ನಾಟಕದಲ್ಲಿ ನಡೆಯುವ ಚುನಾವಣೆಯಲ್ಲೂ ಕಾಂಗ್ರೆಸ್‌ಗೆ ಜನರು ಪಾಠ ಕಲಿಸಲಿದ್ದಾರೆ ಎಂದರು.

ಈ ಸಂದರ್ಭ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಮಹೇಶ್ ತಿಮ್ಮಯ್ಯ, ಬಿಜೆಪಿ ಮುಖಂಡರಾದ ಮನುಕುಮಾರ್ ರೈ, ಬಿ.ಜೆ. ದೀಪಕ್, ದರ್ಶನ್ ಜೋಯಪ್ಪ, ಎಸ್.ಆರ್. ಸೋಮೇಶ್, ಪ್ರೇಮ್‌ಸಾಗರ್, ಶರತ್‌ಚಂದ್ರ, ಕಿಬ್ಬೆಟ್ಟ ಮಧು, ಶ್ರೀಕಾಂತ್, ಪ್ರಸನ್ನ ನಾಯರ್, ರಮೇಶ್, ಕಿಬ್ಬೆಟ್ಟ ಆನಂದ್ ಸೇರಿದಂತೆ ಇತರರು ಇದ್ದರು.ಕೊಡ್ಲಿಪೇಟೆ: ಬಿಹಾರ ರಾಜ್ಯದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಪಕ್ಷ ಅಭೂತಪೂರ್ವ ಜಯ ದಾಖಲಿಸಿದ ಹಿನ್ನೆಲೆ ಕೊಡ್ಲಿಪೇಟೆ ಹೋಬಳಿ ಕೇಂದ್ರದಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಸಂಭ್ರಮಾಚರಣೆ ನಡೆಯಿತು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ ಸಿಹಿ ವಿತರಿಸಿ ಸಂಭ್ರಮಿಸಿದರು. ಈ ಸಂದರ್ಭ ಮಾತನಾಡಿದ ಬಿಜೆಪಿ ಮುಖಂಡ ಭಗವಾನ್, ಈ ಐತಿಹಾಸಿಕ ಗೆಲುವು ಮುಂಬರುವ ಕರ್ನಾಟಕದ ವಿಧಾನಸಭಾ ಚುನಾವಣೆಯ ಮೇಲೂ ಪ್ರಭಾವ ಬೀರಲಿದೆ. ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಜಯಗಳಿಸಲಿದೆ ಎಂದರು.

ಈ ಸಂದರ್ಭ ಎನ್‌ಡಿಎ ಪಕ್ಷದ ಮುಖಂಡರಾದ ಬಾಬು ರಾಜೇಂದ್ರ ಪ್ರಸಾದ್, ನಾಗರಾಜ್, ಶಿವಕುಮಾರ್, ಹರೀಶ್, ನಾಗೇಶ್, ಶರತ್, ಕೆಂಚೇಶ್ವರ, ಗೋವಿಂದ್ ರಾಜ್, ನಾಗೇಶ್, ಸಿದ್ದೇಶ್, ಮಣಿ ಶಂಕರ್, ರಾಜೇಶ್, ಮೇನಕ, ಶೇಖರ್, ರಾಜು ಸೇರಿದಂತೆ ಇತರರು ಇದ್ದರು.ಕೂಡಿಗೆ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿ ಕೂಟ ಭರ್ಜರಿ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಕೂಡಿಗೆ- ಕೂಡುಮಂಗಳೂರು ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಕೂಡಿಗೆ ಡೈರಿ ಸರ್ಕಲ್, ಕೂಡಿಗೆ ಸರ್ಕಲ್ ಬಸ್ ನಿಲ್ದಾಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಟಿ. ಗಿರೀಶ್, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯ ದಿನೇಶ್, ಕೆ.ಕೆ. ಭೋಗಪ್ಪ, ವಿವಿಧ ಘಟಕದ ಪ್ರಮುಖರಾದ ಕೆ. ವರದ, ಪ್ರಭಾಕರ್, ಎಸ್.ಎಸ್.ಕೃಷ್ಣ, ಕುಶಾಲನಗರ ಕೊಡವ ಸಮಾಜ ಅಧ್ಯಕ್ಷ ವಾಂಚಿರ ಮನು ನಂಜುAಡ, ಮಹಿಳಾ ಘಟಕದ ಪ್ರಮುಖರಾದ ಕೆ. ಕನಕ ಸೇರಿದಂತೆ ಕೂಡುಮಂಗಳೂರು, ಕೂಡಿಗೆ ಗ್ರಾಮ ಪಂಚಾಯಿತಿ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.

ಸಿದ್ದಾಪುರ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿ ಕೂಟ ಭರ್ಜರಿ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಸಿದ್ದಾಪುರದ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿ ವಿಜಯೋತ್ಸವ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಸಿದ್ದಾಪುರ ಶಕ್ತಿ ಕೇಂದ್ರದ ಪ್ರಮುಖ್ ರೂಪೇಶ್, ಡಿಜಿತ್, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಸುಳ್ಯಕೊಡಿ ಜಯಂತ್, ಮಹೇಶ್, ತುಳಸಿ, ಬಿಜೆಪಿ ಪಕ್ಷದ ಪ್ರಮುಖರಾದ ರದೀಶ್.ಎನ್.ಕೆ. ಸುರೇಶ್., ಅನಿಲ್, ಸತೀಶ್, ಜಯರಾಮ್, ಭರತ್ ಇನ್ನಿತರರು ಹಾಜರಿದ್ದರು.

ಕುಶಾಲನಗರ: ಬಿಹಾರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಗಳಿಸಿದ ಹಿನ್ನೆಲೆ ಕುಶಾಲನಗರದಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ಕುಶಾಲನಗರ ಗಣಪತಿ ದೇವಾಲಯ ಬಳಿ ಸೇರಿದ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು. ಬಿಜೆಪಿ ನಗರ ಅಧ್ಯಕ್ಷ ಎಂ.ಎA. ಚರಣ್, ಪ್ರಧಾನ ಕಾರ್ಯದರ್ಶಿ ಮಧುಸೂದನ್ ಮತ್ತಿತರರು ಇದ್ದರು.ಕೂಡಿಗೆ: ಬಿಹಾರ ವಿಧಾನಸಭೆ ಚುನಾವಣಾ ಫಲಿತಾಂಶ ಅಂಗವಾಗಿ ಕೂಡಿಗೆಯಲ್ಲಿ ಬಿ.ಜೆ.ಪಿ ಕಾರ್ಯಕರ್ತರಿಂದ ವಿಜಯೋತ್ಸವ ನಡೆಯಿತು.