ಕೊಡಗು ಸುಂದರ ಪರಿಸರದಿಂದ ಕೂಡಿರುವ ಖಣಜ. ಇಲ್ಲಿ ಪ್ರವಾಸೋದ್ಯಮ ಪ್ರಮುಖ ಉದ್ಯೋಗವಾಗಿ ಪರಿವರ್ತಿತಗೊಂಡಿದೆ. ಹೋಂಸ್ಟೇ, ಲಾಡ್ಜ್, ಹೊಟೇಲ್ ಅಂತಹ ಅತಿಥ್ಯ ಕೇಂದ್ರಗಳು, ಇನ್ನಿತರ ವ್ಯಾಪಾರೋದ್ಯಮಗಳು ಕೂಡ ಪ್ರವಾಸೋದ್ಯಮವನ್ನೇ ಬಹುಪಾಲು ಅವಲಂಬಿಸಿಕೊAಡಿವೆ. ಕೃಷಿಯನ್ನು ಕೂಡ ಇಲ್ಲಿನ ಜನ ಕಾಯಕವನ್ನಾಗಿ ಮಾಡಿಕೊಂಡಿದ್ದಾರೆ. ಆದರೆ, ಕೈಗಾರಿಕೋದ್ಯಮ ಕೊಡಗಿನ ಪಾಲಿಗೆ ಗಗನ ಕುಸುಮವೇ ಸರಿ. ಕೃಷಿ ಸಂಬAಧಿತ ಕೈಗಾರಿಕೆಗಳು, ಅಲ್ಪ ಪ್ರಮಾಣದ ಗುಡಿ ಕೈಗಾರಿಕೆಯನ್ನು ಹೊರತುಪಡಿಸಿ ಜಿಲ್ಲೆಯಲ್ಲಿ ದೊಡ್ಡ ಮಟ್ಟದ ನವೋದ್ಯಮಗಳು ಆರಂಭಿಸುವುದು ಸ್ವಲ್ಪ ಕಷ್ಟ ಸಾಧ್ಯ. ಆದರೆ, ಇಲ್ಲೊಂದು ಸಂಸ್ಥೆ ನವೋದ್ಯಮದ ಮೂಲಕ ಜಿಲ್ಲೆಯಲ್ಲಿ ಕ್ರಾಂತಿ ಸೃಷ್ಟಿಸಲು ತಯಾರಿ ನಡೆಸುತ್ತಿದೆ. ನೂರಾರು ಮಹಿಳೆಯರಿಗೆ ಉದ್ಯೋಗ ಸೃಷ್ಟಿಸುವುದರೊಂದಿಗೆ ಲಾಭದಾಯಕ ಉದ್ಯಮವನ್ನಾಗಿಸುವ ಗುರಿಯೊಂದಿಗೆ ಸಾಗುತ್ತಿದೆ ‘ಲಾಲಿ ಅಪರೆಲ್ಸ್’ ಎಂಬ ಜವಳಿ ಕಾರ್ಖಾನೆ.

ಹೌದು..ಮಂಜಿನ ನಗರಿ ಮಡಿಕೇರಿಯಲ್ಲಿ ಲಾಲಿ ಅಪರೆಲ್ಸ್ ಎಂಬ ಬೃಹತ್ ಗಾರ್ಮೆಂಟ್ಸ್ ಆರಂಭಗೊAಡಿದ್ದು, ಇಲ್ಲಿ ಈಗಾಗಲೇ ೬೦ ಮಹಿಳೆಯರಿಗೆ ಉದ್ಯೋಗ ದೊರೆತ್ತಿದ್ದು, ಒಟ್ಟು ೨೦೦ ಮಹಿಳೆಯರನ್ನು ಪ್ರಥಮ ಹಂತದಲ್ಲಿ ನೇಮಿಸಿಕೊಳ್ಳುವ ಅಭಿಲಾಷೆಯನ್ನು ಗಾರ್ಮೆಂಟ್ಸ್ ಮಾಲೀಕರು ಹೊಂದಿದ್ದಾರೆ. ನಗರಸಭಾ ಮಾಜಿ ಅಧ್ಯಕ್ಷ, ಉದ್ಯಮಿ ಹೆಚ್.ಎಂ. ನಂದಕುಮಾರ್ ಈ ಸಾಹಸಕ್ಕೆ ಕೈ ಹಾಕಿದ್ದು, ಸುಮಾರು ೩ ಕೋಟಿಯಷ್ಟು ಹಣವನ್ನು ಈ ಉದ್ಯಮಕ್ಕಾಗಿ ಹೂಡಿಕೆ ಮಾಡಿ ಬೃಹತ್ ನಗರದಲ್ಲಿರುವಂತಹ ಗಾರ್ಮೆಂಟ್ಸ್ ಇಲ್ಲಿಯೂ ಆಗಬೇಕೆಂಬ ಮಹದಾಸೆಯನ್ನು ಹೊತ್ತು ತನ್ನ ತಂಡದೊAದಿಗೆ ಕಾರ್ಯೋನ್ಮುಖಗೊಂಡಿದ್ದಾರೆ.

ಮಡಿಕೇರಿಯ ಚೈನ್‌ಗೇಟ್ ಬಳಿ ೨ ಅಂತಸ್ತಿನ ಬೃಹತ್ ಕಟ್ಟಡದಲ್ಲಿ ಆರಂಭವಾದ ಫ್ಯಾಕ್ಟರಿ ಅನ್ನು ನಿರ್ಮಾಣವಾಗಿ ಅ. ೧೨ ರಂದು ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹಾದೇವಪ್ಪ ಅವರು ಉದ್ಘಾಟಿಸಿದ್ದಾರೆ. ಪ್ರಾಯೋಗಿಕವಾಗಿ ಇದೀಗ ಬಟ್ಟೆ ಉತ್ಪಾದನೆಯನ್ನು ಮಾಡಲಾಗುತ್ತಿದೆ.

ಕೋಟ್ಯಂತರ ರೂಪಾಯಿ ಹೂಡಿಕೆ

ಉದ್ಯಮಿ ನಂದಕುಮಾರ್ ಅವರು ಕಾರ್ಖಾನೆ ಆರಂಭಿಸಲು ೩ ಕೋಟಿಗೂ ಹೆಚ್ಚಿನ ಹಣವನ್ನು ಹೂಡಿಕೆ ಮಾಡಿ ಕೊಡಗಿನಲ್ಲಿ ನವೋದ್ಯಮಕ್ಕೆ ಮುನ್ನುಡಿ ಇಟ್ಟಿದ್ದಾರೆ. ಇದೊಂದು ಸವಾಲಿನ ಕ್ಷೇತ್ರವಾಗಿದೆ. ಆದರೆ, ಸಮರ್ಪಕವಾಗಿ ಬಳಸಿಕೊಂಡು ಶ್ರಮವಹಿಸಿದರೆ ಲಾಭದೊಂದಿಗೆ ಸಾಧನೆಯೂ ಸಾಧ್ಯ ಎಂಬ ಮಾತನ್ನು ನಂದಕುಮಾರ್ ವಿಶ್ವಾಸದೊಂದಿಗೆ ‘ಶಕ್ತಿ’ಯೊಂದಿಗೆ ಹೇಳಿಕೊಂಡರು.

ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ದೊರೆತ ಬೆಂಬಲದಿAದ ಕಾರ್ಖಾನೆ ಆರಂಭಿಸಲು ಪ್ರೇರೇಪಣೆ ದೊರೆಯಿತು. ಇದೇ ದುಡ್ಡನ್ನು ಬೇರೆ ಉದ್ಯಮಕ್ಕೆ ಹೂಡಿಕೆ ಮಾಡಿದ್ದರೆ, ಕೆಲ ವರ್ಷದಲ್ಲಿ ಹತ್ತು ಪಟ್ಟು ದುಡಿಯುತ್ತಿದ್ದೆ. ಆದರೆ, ಸ್ಥಳೀಯರಿಗೆ ಉದ್ಯೋಗ ಸಿಗಬೇಕೆಂಬ ಕನಸಿನೊಂದಿಗೆ ಲಾಲಿ ಅಪ್ಪರೆಲ್ಸ್ ಆರಂಭಿಸಲಾಗಿದೆ. ಶೇ. ೬೦ ಸಬ್ಸಿಡಿಯೂ ನಿಗಮದಿಂದ ದೊರೆತ್ತಿದ್ದು, ಇದು ಕೂಡ ಉದ್ಯಮ ಆರಂಭಕ್ಕೆ ನೆರವಾಗಿದೆ. ಅಲ್ಲದೆ ಮಾರುಕಟ್ಟೆ ಸೃಷ್ಟಿಯ ಬಗ್ಗೆಯೂ ಸಹಾಯವನ್ನು ನಿಗಮ ಮಾಡಲಿದೆ. ಶ್ರಮವಹಿಸಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯನಿರ್ವಹಣೆ ಹೇಗೆ?

ಸದ್ಯ ಪ್ರಾಯೋಗಿಕ ಕಾರ್ಯಗಳು ಕಾರ್ಖಾನೆಯಲ್ಲಿ ನಡೆಯುತ್ತಿದ್ದು, ಶರ್ಟ್, ಪ್ಯಾಂಟ್ ತಯಾರಿಕೆಯನ್ನು ಸಿಬ್ಬಂದಿಗಳ ಮೂಲಕ ಮಾಡಿಸಲಾಗುತ್ತಿದೆ. ೬೦ ಸಿಬ್ಬಂದಿಗಳನ್ನು ಪ್ರಥಮ ಹಂತದಲ್ಲಿ ನೇಮಿಸಿಕೊಳ್ಳಲಾಗುತ್ತಿದ್ದು, ಈ ಪೈಕಿ ಕೆಲವರಿಗೆ ಕೆಲಸ ತಿಳಿದಿದೆ. ಇನ್ನೂ ಕೆಲವರಿಗೆ ಹೊಲಿಗೆಯ ಬಗ್ಗೆ ಜ್ಞಾನವಿದೆ. ಹಲವರು ಈ ಕೆಲಸಕ್ಕೆ ಹೊಸಬರಾಗಿದ್ದು, ಅವರಿಗೆ ವೇತನ ಸಹಿತ ತರಬೇತಿಯನ್ನು ನೀಡಿ ಸಜ್ಜುಗೊಳಿಸುವ ಕೆಲಸವನ್ನು ಮಾಡಲಾಗುತ್ತಿದೆ.

ರೂ. ೧.೮೦ ಕೋಟಿ ವೆಚ್ಚದ ಯಂತ್ರೋಪಕರಣಗಳು ಬಟ್ಟೆ ತಯಾರಿಗಾಗಿ ಇವೆ. ಒಂದು ಶರ್ಟ್ ತಯಾರು ಮಾಡಲು ೨೪ ಮಂದಿ ಕೆಲಸ ಮಾಡುತ್ತಾರೆ. ಒಬ್ಬರೆ ಒಂದು ಶರ್ಟ್ ಪೂರ್ಣಗೊಳಿಸಬೇಕಾಗಿಲ್ಲ. ಒಬ್ಬರು ಕಾಲರ್, ಒಬ್ಬರ್ ಹ್ಯಾಂಡ್, ಇನ್ನೊಬ್ಬರು ಜೇಬು, ಮತ್ತೊಬ್ಬರು ಬಟನ್ ಹಾಕುವುದು ಹೀಗೆ ಒಂದೊAದು ಕೆಲಸವನ್ನು ನೈಪುಣ್ಯಗೊಳಿಸಿ ದಿನಕ್ಕೆ ೬೦೦ ಶರ್ಟ್ಗಳನ್ನು ಸದ್ಯಕ್ಕೆ ಉತ್ಪಾದಿಸುವ ಗುರಿಯನ್ನು ಇಡಲಾಗಿದೆ. ಒಟ್ಟು ೨೦೦ ಸಿಬ್ಬಂದಿಗಳ ಅಗತ್ಯತೆ ಇದ್ದು, ಮುಂದಿನ ದಿನಗಳಲ್ಲಿ ನೇಮಿಸಿಕೊಂಡು ಮುನ್ನಡೆಯಲಾಗುವುದು. ಮುಂದಿನ ತಿಂಗಳಿನಿAದ ಕೆಲಸವನ್ನು ಆರಂಭಿಸಲಾಗುವುದು. ಉತ್ಪಾದನೆಯನ್ನು ಕೈಗೊಂಡು ಮಾರುಕಟ್ಟೆಗೆ ತರಲಾಗುವುದು. ಸಿಬ್ಬಂದಿಗಳಿಗೆ ಇಎಸ್‌ಐ, ಪಿಎಫ್ ಸೌಲಭ್ಯವನ್ನು ಒದಗಿಸಲಾಗುತ್ತದೆ. ಜೊತೆಗೆ ವೈದ್ಯಕೀಯ ನೆರವು, ವಾರ್ಷಿಕ ಬೋನಸ್ ಕೂಡ ನೀಡಿ ಉದ್ಯೋಗಿಗಳನ್ನು ಸ್ವಾವಲಂಬಿಗೊಳಿಸುವ ಪ್ರಯತ್ನವನ್ನು ನಡೆಸುತ್ತೇನೆ ಎಂದು ನಂದಕುಮಾರ್ ವಿವರಿಸಿದರು.

ಮಾರುಕಟ್ಟೆ ಸೃಷ್ಟಿಯೊಂದಿಗೆ ಸವಾಲು

ಜವಳಿ ಉದ್ಯಮ ಸುಲಭದ ಕ್ಷೇತ್ರವಲ್ಲ. ಸವಾಲಿನೊಂದಿಗೆ ಎದುರಿಸಿದರೆ ಮಾತ್ರ ಯಶಸ್ಸು ಸಿಗುತ್ತದೆ. ಮಾರುಕಟ್ಟೆಯನ್ನು ಸೃಷ್ಟಿಸುವ ಸವಾಲು ಮುಂದಿರುತ್ತದೆ. ಮಾರಾಟಗಾರರನ್ನು ಪತ್ತೆಹಚ್ಚಿ ಗುಣಮಟ್ಟದ ಬಗ್ಗೆ ವಿವರಿಸಿ ಅವರ ಅಗತ್ಯ ಹಾಗೂ ಬೆಲೆಗೆ ತಕ್ಕ ಬಟ್ಟೆಯನ್ನು ಉತ್ಪಾದಿಸುವ ಕೆಲಸವನ್ನು ಸದ್ಯಕ್ಕೆ ಲಾಲಿ ಅಪರೆಲ್ಸ್ ಮಾಡಲಿದೆ.

ಉದ್ಯಮಕ್ಕೆ ಕೋಟ್ಯಂತರ ರೂಪಾಯಿ ವೆಚ್ಚ ತಗುಲಿರುವ ಕಾರಣ ಸಹಜವಾಗಿ ಮಾರುಕಟ್ಟೆಯಲ್ಲಿರುವ ಬೇಡಿಕೆಯನ್ನು ಪೂರೈಸಲೇಬೇಕು. ಆಗ ಮಾತ್ರ ಆರ್ಥಿಕವಾಗಿ ಲಾಭಗಳಿಸಲು ಸಾಧ್ಯವಾಗುತ್ತದೆ. ಮಹಾನಗರಿಗಳಲ್ಲಿ ಈಗಾಗಲೇ ಅನೇಕ ಗಾರ್ಮೆಂಟ್ಸ್ಗಳಿದ್ದು, ಬಟ್ಟೆ ಜನರಿಗೆ ಅತ್ಯವಶ್ಯಕ ವಸ್ತುವಾಗಿರುವ ಕಾರಣ ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದೇ ಇರುತ್ತದೆ. ಇದನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಜಾಣ್ಮೆ ಇರಬೇಕು. ಮಾರುಕಟ್ಟೆಯ ಅಧ್ಯಯನದೊಂದಿಗೆ ಸರಿಯಾದ ಸಮಯಕ್ಕೆ ಉತ್ಪಾದನೆ ನಡೆಸಿ ಮಾರಾಟಗಾರರಿಗೆ ನೀಡಲೇಬೇಕು. ಇಲ್ಲದಿದ್ದಲ್ಲಿ ಸೋಲಿಗೆ ಶರಣಾಗಬೇಕಾಗುತ್ತದೆ ಎಂದು ನಂದಕುಮಾರ್ ಹೇಳುತ್ತಾರೆ.

ಇವೆಲ್ಲದರ ನಡುವೆ ಮಡಿಕೇರಿ ಶೀತಪೀಡಿತ ಪ್ರದೇಶವಾಗಿರುವ ಕಾರಣ ಬಟ್ಟೆಗಳಿಗೆ ‘ಫಂಗಸ್’ ಹಿಡಿಯುವ ಭಯವೂ ಇರುತ್ತದೆ. ಇದಕ್ಕೆ ಸೂಕ್ತ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಬಟ್ಟೆ ಹಾಳಾಗದಂತೆ ಕ್ರಮವಹಿಸಲಾಗುವುದು ಎಂದು ಮಾಹಿತಿ ನೀಡಿದರು. - ಹೆಚ್.