ಮಡಿಕೇರಿ, ನ.೧೧: ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಎಂ.ಜಿ.ಮೋಹನ್ ದಾಸ್ ಅಧ್ಯಕ್ಷತೆಯಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ ಇತ್ತೀಚೆಗೆ ನಡೆಯಿತು.
ಕೊಡಗು ಜಿಲ್ಲೆಯಲ್ಲಿ ಜುಲೈ ತಿಂಗಳಿನಲ್ಲಿ ೧,೧೭,೦೮೦ ಫಲಾನುಭವಿಗಳಿಗೆ ರೂ.೨೩,೪೧,೬೦,೦೦೦.೦೦ಹಣ ಪಾವತಿಯಾಗಿದ್ದು, ಕೆವೈಸಿ ಮಾಡಿಸಲು ಬಾಕಿ ಉಳಿದಿರುವ ಫಲಾನುಭವಿಗಳ ಸಂಖ್ಯೆ ೧೬೬, ಐಟಿ, ಜಿಎಸ್ಟಿ ಪಾವತಿದಾರರು ಎಂದು ತಿರಸ್ಕೃತಗೊಂಡ ಫಲಾನುಭವಿಗಳ ಸಂಖ್ಯೆ ೭೮೪ ಆಗಿದೆ ಎಂದು ಅಧಿಕಾರಿಗಳು ತಿಳಿಸಿದರು. ರಾಜ್ಯ ಸರ್ಕಾರದಿಂದ ಅಕ್ಕ ಪಡೆ ಹಾಗೂ ಗೃಹಲಕ್ಷಿö್ಮ ಫಲಾನುಭವಿಗಳಿಗೆ ಸಾಲ ನೀಡುವ ಉದ್ದೇಶದಿಂದ ಗೃಹಲಕ್ಷಿö್ಮ ವಿವಿದ್ದೋದ್ದೇಶ ಸಂಘ ಜಾರಿಗೆ ತರಲಾಗುತ್ತಿದ್ದು ಸಂಘದ ಉದ್ಘಾಟನೆಯನ್ನು ನವೆಂಬರ್ ೧೯ ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಅವರು ಮಾಡಲಿದ್ದಾರೆ ಎಂದು ಶಿಶು ಅಭಿವೃದ್ದಿ ಅಧಿಕಾರಿ ಸೀತಾಲಕ್ಷಿö್ಮ ಅವರು ಸಭೆಗೆ ಮಾಹಿತಿ ನೀಡಿದರು.
ಶಕ್ತಿ ಯೋಜನೆಯಲ್ಲಿ ೨೦೨೫ ಅಕ್ಟೋಬರ್ ತಿಂಗಳಿಗೆ ಒಟ್ಟು ೧,೩೮,೪೬,೪೫೫ ವಯಸ್ಕ ಮಹಿಳಾ ಪ್ರಯಾಣಿಕರು ಮತ್ತು ೩,೨೮,೫೧೯ ಹೆಣ್ಣು ಮಕ್ಕಳು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿನಿಯರು ಸೇರಿ ಒಟ್ಟಾರೆ ೧,೪೧,೭೪,೯೭೪ ಜನ ಮಹಿಳಾ ಪ್ರಯಾಣಿಕರು ಸಂಸ್ಥೆಯ ವಾಹನದಲ್ಲಿ ಪ್ರಯಾಣಿಸಿ ಈ ಯೋಜನೆಯನ್ನು ಪಡೆದುಕೊಂಡಿರುತ್ತಾರೆ, ಸರಾಸರಿ ೧೬,೦೭೧ ಪ್ರಯಾಣಿಕರು ಒಂದು ದಿನಕ್ಕೆ ಸಂಸ್ಥೆಯ ವಾಹನದಲ್ಲಿ ಪ್ರಯಾಣಿಸಿರುತ್ತಾರೆ ಎಂದು ಸಭೆಗೆ ಕೆಎಸ್ಆರ್ಟಿಸಿ ಸಂಸ್ಥೆಯ ಸಿಬ್ಬಂದಿ ದಯಾನಂದ ಕೆ.ಆರ್. ಮಾಹಿತಿ ನೀಡಿದರು.
ಗ್ಯಾರಂಟಿ ಸಮಿತಿ ಸದಸ್ಯ ಪೆರುಮುಂಡ ಮನು ಮಾತನಾಡಿ, ಪೆರಾಜೆ ವ್ಯಾಪ್ತಿಯ ಸಾರ್ವಜನಿಕರಿಗೆ ಪೆರಾಜೆ ಗ್ರಾಮದಿಂದ ಸುಳ್ಯಕ್ಕೆ ತೆರಳಲು ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಸಭೆಗೆ ತಿಳಿಸಿದರು. ಅಧ್ಯಕ್ಷ ಎಂ.ಜಿ.ಮೋಹನ್ ದಾಸ್ ಮಾತನಾಡಿ ಪುತ್ತೂರು ಡಿಪೋ ಡಿಸಿಗೆ ಬಸ್ ವ್ಯವಸ್ಥೆ ಕಲ್ಪಿಸಲು ಪತ್ರ ಬರೆಯುವಂತೆ ಇಲಾಖಾಧಿಕಾರಿಯವರಿಗೆ ಸೂಚಿಸಿದರು. ಸದಸ್ಯೆ ಫ್ಯಾನ್ಸಿ ಪಾರ್ವತಿ ಮಾತನಾಡಿ ಮುಕ್ಕೋಡ್ಲು ಗ್ರಾಮಕ್ಕೆ ತೆರಳುವ ಬಸ್ ಮಡಿಕೇರಿ ಬಸ್ ನಿಲ್ದಾಣಕ್ಕೆ ಬರದೆ ಡಿಪೋದಿಂದ ನೇರವಾಗಿ ಮುಕ್ಕೋಡ್ಲು ಗ್ರಾಮಕ್ಕೆ ತೆರಳುತ್ತಿದ್ದು ಇದರಿಂದಾಗಿ ಬಸ್ ನಿಲ್ದಾಣದಲ್ಲಿರುವ ಸಾರ್ವಜನಿಕರಿಗೆ ಮುಕ್ಕೋಡ್ಲು ಗ್ರಾಮಕ್ಕೆ ತೆರಳಲು ಕಷ್ಟವಾಗುತ್ತಿರುವ ಬಗ್ಗೆ ಪ್ರಸ್ತಾಪಿಸಿದರು. ಮಡಿಕೇರಿ ಡಿಪೋ ವತಿಯಿಂದ ಪ್ರಯಾಣಿಕರ ಕುಂದುಕೊರತೆಯನ್ನು ಬಗೆಹರಿಸಲು ಹೆಲ್ಫ್ ಲೈನ್ ವ್ಯವಸ್ಥೆ ಮಾಡಬೇಕೆಂದು ಮೋಹನ್ ದಾಸ್ ಸೂಚಿಸಿದರು.
ಜಿಲ್ಲಾ ಉದ್ಯೋಗಾಧಿಕಾರಿ ಸಿ.ಬಿ.ಮಂಜುನಾಥ್ ಮಾತನಾಡಿ, ೨೦೨೩-೨೦೨೪ರಲ್ಲಿ ಪದವಿ ಮತ್ತು ಡಿಪ್ಲೋಮಾ ಉತ್ತೀರ್ಣರಾಗಿ ಕನಿಷ್ಟ ೬ ತಿಂಗಳ ಅವಧಿಯವರೆಗೆ ಸರ್ಕಾರಿ/ಖಾಸಗಿ ಉದ್ಯೋಗ ಹೊಂದಿಲ್ಲದವರು, ಸ್ವಯಂ ಉದ್ಯೋಗ ಹೊಂದಿಲ್ಲದವರು, ಉನ್ನತ ವಿದ್ಯಾಭ್ಯಾಸ ಮುಂದುವರಿಸದೇ ಇರುವವರು ಈ ಯೋಜನೆಗೆ ಅರ್ಹರಾಗಿರುತ್ತಾರೆ ಎಂದರು.
ಈ ಯೋಜನೆಯ ಪ್ರಯೋಜನ ಮುಂದುವರಿಸಬೇಕಾಗಿದ್ದಲ್ಲಿ ಪ್ರತಿ ತಿಂಗಳಿಗೊಮ್ಮೆ ಸ್ವಯಂ ಘೋಷಣೆ ಮಾಡಿಕೊಳ್ಳಬೇಕು. ಯುವನಿಧಿ ಯೋಜನೆಯಲ್ಲಿ ಅಕ್ಟೋಬರ್ ಮಾಹೆಯವರೆಗೆ ೫೧೨ ಜನ ನೋಂದಣಿಯಾಗಿದ್ದು, ಒಟ್ಟು ೪೨೯ ಫಲಾನುಭವಿಗಳು ಯುವನಿಧಿ ಯೋಜನೆಯ ಪ್ರಯೋಜನವನ್ನು ಪಡೆದುಕೊಂಡಿರುವ ಬಗ್ಗೆ ಸಭೆಗೆ ಮಾಹಿತಿ ನೀಡಿದರು.
ಕಾರ್ಯ ಮತ್ತು ಪಾಲನೆ ಉಪ ವಿಭಾಗದ ಸಹಾಯಕ ಎಂಜಿನಿಯರ್ (ತಾಂತ್ರಿಕ) ರಾಜೇಶ್ವರಿ ಕೆ.ಎ. ಮಾತನಾಡಿ ಮಡಿಕೇರಿ ತಾಲೂಕಿನಲ್ಲಿ ೫೨,೩೧೩ ಅರ್ಹ ವಿದ್ಯುತ್ ಸ್ಥಾವರಗಳಿದ್ದು, ಗೃಹಜ್ಯೋತಿ ಯೋಜನೆಯಡಿ ೫೧,೮೪೪ ನೋಂದಣಿಗೊAಡ ಅರ್ಜಿಗಳಾಗಿದ್ದು, ೪೬೯ ಬಾಕಿ ಇರುವ ಸ್ಥಾವರಗಳಿದ್ದು ಶೇ. ೯೯.೧೦ ಶೇಕಡವಾರು ಪ್ರಗತಿಯಾಗಿದ್ದು ಆಗಸ್ಟ್ ೨೦೨೫ ಹಾಗೂ ಸೆಪ್ಟೆಂಬರ್ -೨೦೨೫ ಮಾಹೆಗಳಲ್ಲಿ ೧೨೩೭ ಸ್ಥಾವರಗಳು ಹೊಸದಾಗಿ ಸಂಪರ್ಕಗೊAಡಿದ್ದು ಮಾಸಾಂತ್ಯದೊಳಗೆ ಗೃಹಜ್ಯೋತಿ ಯೋಜನೆಯಡಿ ನೋಂದಾಯಿಸಲ್ಪಡುತ್ತದೆ ಎಂದು ಸಭೆಗೆ ಮಾಹಿತಿ ನೀಡಿದರು.
ಆಹಾರ ನಿರೀಕ್ಷಕಿ ಯು.ಪಿ.ವೀಣಾ ಮಾತನಾಡಿ ಅನ್ನಭಾಗ್ಯ ಯೋಜನೆಗೆ ಸಂಬAಧಿಸಿದAತೆ ಮಡಿಕೇರಿ ತಾಲೂಕಿನಲ್ಲಿ ಒಟ್ಟು ೩೮,೩೩೮ ಪಡಿತರ ಚೀಟಿ ಇದ್ದು ೧,೨೧,೦೦೧ ಒಟ್ಟು ಫಲಾನುಭವಿಗಳಿರುತ್ತಾರೆ. ಅದರಲ್ಲಿ ೧,೯೬೫ ಎಎವೈ ಪಡಿತರ ಚೀಟಿ ಇದ್ದು ೭,೮೬೯ ಎಎವೈ ಫಲಾನುಭವಿಗಳು ಇರುತ್ತಾರೆ. ೨೨,೫೨೮ ಪಿಹೆಚ್ಹೆಚ್ ಪಡಿತರ ಚೀಟಿ ಇದ್ದು ೭೩,೧೮೦ ಫಲಾನುಭವಿಗಳು, ೧೩,೮೪೫ ಎನ್ಪಿಹೆಚ್ಹೆಚ್ ಪಡಿತರ ಚೀಟಿ ಇದ್ದು ೩೯,೯೫೨ ಫಲಾನುಭವಿಗಳಿದ್ದು, ಮಡಿಕೇರಿ ತಾಲೂಕಿನಲ್ಲಿ ಪತ್ತೆ ಹಚ್ಚಿರುವ ಅನರ್ಹ ಫಲಾನುಭವಿಗಳ ಸಂಖ್ಯೆ ೫೧೯ ಆಗಿರುತ್ತದೆ ಎಂದು ಸಭೆಗೆ ತಿಳಿಸಿದರು.
ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ಎಂ.ಜಿ.ಮೋಹನ್ ದಾಸ್ ಮಾತನಾಡಿ, ಮಡಿಕೇರಿ ತಾಲೂಕಿನಲ್ಲಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಗೊಳಿಸುವಲ್ಲಿ ಅನುಷ್ಠಾನ ಇಲಾಖೆಗಳು ಉತ್ತಮ ಪ್ರಗತಿಯನ್ನು ಸಾಧಿಸಿದ್ದು, ಮುಂದಿನ ದಿನಗಳಲ್ಲಿಯೂ ಸಹ ಸಮಿತಿಯ ಎಲ್ಲಾ ಸದಸ್ಯರು ಹಾಗೂ ಅಧಿಕಾರಿ ವರ್ಗದವರು ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಯನ್ನು ಎಲ್ಲಾ ಅರ್ಹ ಫಲಾನುಭವಿಗಳಿಗೆ ದೊರೆಯುವಂತೆ ಮಾಡಲು ಶ್ರಮಿಸಬೇಕು ಎಂದು ಸಭೆಯಲ್ಲಿ ತಿಳಿಸಿದರು.
ಗ್ಯಾರಂಟಿ ಸಮಿತಿ ಸದಸ್ಯರಾದ ಎಂ. ಇಬ್ರಾಹಿಂ, ಪ್ರಭಾಕರ ರೈ, ಮನು ಪೆರುಮುಂಡ, ರಘು ಹೆಚ್.ಪಿ., ಫ್ಯಾನ್ಸಿ ಪಾರ್ವತಿ, ರಾಜೇಶ್ವರಿ, ಸಿರಾಜುದ್ದಿನ್, ರಂಗಪ್ಪ ಇಲಾಖಾಧಿಕಾರಿಗಳಾದ ಟಿ.ಎಸ್. ಸೀತಾಲಕ್ಷಿö್ಮ, ಮಂಜುನಾಥ ಸಿ.ಬಿ., ದಯಾನಂದ, ರಾಜೇಶ್ವರಿ, ವೀಣಾ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯ ಕಾರ್ಯದರ್ಶಿ ಶೇಖರ್ ಹಾಗೂ ತಾಲೂಕು ಪಂಚಾಯಿತಿ ಸಿಬ್ಬಂದಿ ವರ್ಗದವರು ಹಾಜರಿದ್ದರು.