ವೀರಾಜಪೇಟೆ, ನ. ೧೧: ತೋಟದ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಕಾಡಾನೆಯೊಂದು ಧಾಳಿ ನಡೆಸಿರುವ ಘಟನೆ ಬಿಳುಗುಂದ ಹೊಸಕೋಟೆ ಗ್ರಾಮದಲ್ಲಿ ನಡೆದಿದೆ.
ವೀರಾಜಪೇಟೆ ತಾಲೂಕು ಅಮ್ಮತ್ತಿ ಹೋಬಳಿ, ಬಿಳುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಕೋಟೆ ಗ್ರಾಮದ ಮುದ್ದಿನಕಾಡ್ ಕಾಣತಂಡ ಸಂತೋಷ್ ಎಂಬುವವರ ತೋಟದಲ್ಲಿ ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸುತಿದ್ದ ಬೆಲ್ಲು ಪೂಣಚ್ಚ (೬೦) ಕಾಡಾನೆ ಧಾಳಿಗೆ ಒಳಗಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದ ವ್ಯಕ್ತಿ.ತಾ.೯ ರಂದು ಕಾಫಿ ತೋಟದಲ್ಲಿ ಕಾರ್ಮಿಕರೊಂದಿಗೆ ಕೆಲಸ ಮುಗಿಸಿ ಸಂಜೆ ೬ ಗಂಟೆ ವೇಳೆಗೆ ಲೈನ್ ಮನೆಗೆ ಹಿಂದಿರುಗುತಿದ್ದ ವೇಳೆ ಎರಡು ಕಾಡಾನೆಗಳು ಎದುರಿನಿಂದ ಧಾಳಿ ನಡೆಸಿವೆ. ಬೆಲ್ಲು ಅವರೊಂದಿಗೆಯಿದ್ದ ಕಾರ್ಮಿಕನೋರ್ವ ಜೀವ ಭಯದಿಂದ ಸ್ಥಳದಿಂದ ಓಡಿಹೊಗಿದ್ದಾನೆ. ಕಾಡಾನೆ ತನ್ನ ಸೊಂಡಿಲಿನಿAದ ಬೆಲ್ಲು ಅವರನ್ನು ಎತ್ತಿ ತೋಟಕ್ಕೆ ಎಸೆದಿದೆ. ಪರಿಣಾಮ ಬೆಲ್ಲು ಅವರ ಬೆನ್ನು ಮೂಳೆ ಮುರಿದಿದೆ.
ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಅರಣ್ಯ ವಲಯಾಧಿಕಾರಿ ಶಿವರಾಂ, ಸಿಬ್ಬಂದಿ ಭೇಟಿ ನೀಡಿ ಮಾಹಿತಿ ಪಡೆದು ಮುಂದಿನ ಕ್ರಮಕೈಗೊಂಡಿದ್ದಾರೆ.