ಮಡಿಕೇರಿ, ನ. ೧೧: ನಗರದ ಐತಿಹಾಸಿಕ ಓಂಕಾರೇಶ್ವರ ದೇವಾಲಯದಲ್ಲಿನ ಶಿವಲಿಂಗಕ್ಕೆ ಚೆನ್ನೆöÊ ಮೂಲದ ರಮೇಶ್ ಪ್ರಕಾಶ್ ಮತ್ತು ಕುಟುಂಬದವರು ೪೫೬.೫ ಗ್ರಾಂ ಬೆಳ್ಳಿ ಕವಚವನ್ನು ಸಮರ್ಪಿಸಿದರು. ಈ ಸಂದರ್ಭ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚುಮ್ಮಿ ದೇವಯ್ಯ, ಕಾರ್ಯನಿರ್ವಹಣಾಧಿಕಾರಿ ದೇವರಾಜ್, ಸದಸ್ಯರಾದ ವಿಶಾಲ್ ನಂದಕುಮಾರ್, ಅಂಬೆಕಲ್ಲು ಕುಶಾಲಪ್ಪ, ಪ್ರಕಾಶ್ ಆಚಾರ್ಯ, ಅರ್ಚಕ ಸಂತೋಷ್ ಭಟ್, ಶಂಕರಗೌಡ, ಸಿಬ್ಬಂದಿ ಹಾಗೂ ಭಕ್ತಾದಿಗಳು ಹಾಜರಿದ್ದರು.