ಮಡಿಕೇರಿ, ನ. ೧೧: ಕೊಡವರು ರಾಷ್ಟಿçÃಯ ಜನಗಣತಿಯ ಸಂದರ್ಭ ಸ್ವತಂತ್ರö್ಯವಾಗಿ ‘ಕೊಡವ’ ಎಂದು ಗುರುತಿಸಿಕೊಳ್ಳುವಂತೆ ಸಿಎನ್‌ಸಿ ಕರೆ ನೀಡಿದೆ. ಆದರೆ ಈ ಕರೆಗೆ ವಿರುದ್ಧವಾಗಿ ಕೆಲವು ಪಟ್ಟಭದ್ರಹಿತಾಸಕ್ತಿಗಳು ಈ ರೀತಿ ಪ್ರತ್ಯೇಕವಾಗಿ ಗುರುತಿಸಿಕೊಂಡರೆ ಕೊಡವರಿಗೆ ರಕ್ಷಣೆ ಇರುವುದಿಲ್ಲ ಎಂದು ಅಪಪ್ರಚಾರ ಮಾಡುವ ಮೂಲಕ ಕೊಡವರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು. ನಾಚಪ್ಪ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹುದಿಕೇರಿಯಲ್ಲಿ ಸಿಎನ್‌ಸಿ ವತಿಯಿಂದ ನಡೆದ ೧೯ನೇ ಕೊಡವ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕೊಡವರನ್ನು ನಿರಂತರವಾಗಿ ವಂಚಿಸುತ್ತಿರುವ ಕೆಲವು ಕೂಟಗಳ ಬಗ್ಗೆ ಕೊಡವರು ಎಚ್ಚರಿಕೆಯಿಂದ ಇರಬೇಕೆಂದು ಕರೆ ನೀಡಿದರು.
ಕೊಡವರು ಸಂವಿಧಾನದ ಭದ್ರತೆ ಬೇಕೆಂದು ಕೇಳುವ ಸಂದರ್ಭ ಕೆಲವು ಕೂಟ ಕೊಡವರನ್ನು ಸದಾಕಾಲ ವಂಚಿಸಲು ತೊಡಗಿದೆ. ಅವರ ಕಾರ್ಯಸೂಚಿ ಕೊಡವರಿಗೆ ಏನೇನು ದೊರಕಬಾರದು ಎಂಬುದಾಗಿದೆ. ನೀವು ದೇಶವನ್ನು ರಕ್ಷಣೆ ಮಾಡಿದ ಜನ, ಶೂರರು, ಧೀರರು ಎಂದು ಹೊಗಳಿ ಹೊನ್ನಶೂಲಕ್ಕೇರಿಸಿ ನಿಮಗೆ ಸಂವಿಧಾನದ ರಕ್ಷಣೆ ಯಾಕೆ ಬೇಕು ಎಂದು ಪ್ರಶ್ನಿಸುವ ಮೂಲಕ ಹಾದಿ ತಪ್ಪಿಸುತ್ತಿದ್ದಾರೆ. ಮತ್ತದೇ ಕೂಟ ಕೊಡವರು ಜನಗಣತಿಯ ಸಂದರ್ಭ ‘ಕೊಡವ’ ಎಂದು ಪ್ರತ್ಯೇಕವಾಗಿ ಗುರುತಿಸಿಕೊಳ್ಳದಂತೆ ನೋಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಆದಿಮಸಂಜಾತ ಏಕ ಜನಾಂಗೀಯ ಆ್ಯನಿಮಿಸ್ಟಿಕ್ ನಂಬಿಕೆಯ ಕೊಡವರು ಯಾವುದೇ ಜಾತಿ, ಧರ್ಮದ ಬಂಧನ ಅಥವಾ ಕಳಂಕವಿಲ್ಲದೆ ಸ್ವತಂತ್ರವಾಗಿ ಬದುಕಿದ ಮತ್ತು ಬದುಕುತ್ತಿರುವ ಅತೀ ಅಪರೂಪದ ಸೂಕ್ಷö್ಮ ಜನಾಂಗಕ್ಕೆ ಸೇರಿದವರಾಗಿದ್ದಾರೆ. ಕೊಡವ ನೆಲ ಬಿಟ್ಟರೆ ಬೇರೆ ಎಲ್ಲೂ ಕೊಡವರಿಗೆ ಸ್ವಂತ ಸ್ಥಳವಿಲ್ಲ. ಇಂದಿನ ಕಾಲಮಾನದಲ್ಲಿ ಕೊಡವರ ರಕ್ಷಣೆಯಾಗಬೇಕಾಗಿದೆ ಮತ್ತು ಸಂಪೂರ್ಣ ಸಬಲೀಕರಣವಾಗಬೇಕಾಗಿದೆ. ಇದು ದೇಶದ ಸಂವಿಧಾನದಿAದ ಮಾತ್ರ ಸಾಧ್ಯ ಎಂದು ವಿವರಿಸಿದರು.
ಕೊಡವಲ್ಯಾಂಡ್ ಭೂ ರಾಜಕೀಯ ಸ್ವಯಂ ಆಡಳಿತ, ಕೊಡವರಿಗೆ ವಿಶ್ವರಾಷ್ಟç ಸಂಸ್ಥೆಯ ಇಂಡಿಜಿನಸ್ ಪೀಪಲ್ಸ್ ರೈಟ್ಸ್, ಎಸ್.ಟಿ. ಪಟ್ಟಿಯಲ್ಲಿ ವರ್ಗೀಕರಣ, ಸಿಕ್ಕಿಂನ "ಸಂಘ" ಮತಕ್ಷೇತ್ರದಂತೆ ಕೊಡವರಿಗೆ ಪಾರ್ಲಿಮೆಂಟ್ ಮತ್ತು ಎಸೆಂಬ್ಲಿಯಲ್ಲಿ ವಿಶೇಷ ಪ್ರಾತಿನಿಧ್ಯ ಸಿಗಬೇಕಾದರೆ, ಕೊಡವರ ಪೂರ್ವರ್ಜಿತ ಭೂ ಹಕ್ಕು ಮತ್ತು ಕೊಡವರ ಧಾರ್ಮಿಕ ಸಂಸ್ಕಾರ ತೋಕ್-ಗನ್ ಹಕ್ಕು ಚಿರಸ್ಥಾಯಿಯಾಗಿ ಮುಂದುವರೆಯಬೇಕಾದರೆ ಕೊಡವರ ಪ್ರತ್ಯೇಕ ಗುರುತು ರಾಷ್ಟಿçÃಯ ಜನಗಣತಿಯ ಸಂದರ್ಭ ‘ಕೊಡವ’ ಎಂದು ದಾಖಲೀಕರಣವಾಗಬೇಕು. ಹೀಗೆ ಮಾಡಿದಾಗ ಮಾತ್ರ ನಮಗೆ ಸಂವಿಧಾನ ಬದ್ಧ ಹಕ್ಕು ದೊರೆಯಲಿದೆ ಎಂದರು.
೨೦೨೬-೨೭ ರಲ್ಲಿ ನಡೆಯಲಿರುವ ೧೬ನೇ ರಾಷ್ಟಿçÃಯ ಜನಗಣತಿಯೊಂದಿಗೆ ಜನಾಂಗವಾರು ಮಾಹಿತಿ ಕಲೆಹಾಕುವ ಸಂದರ್ಭ ಆದಿಮ ಸಂಜಾತ ಏಕ-ಜನಾಂಗೀಯ (ಆನಿಮಿಸ್ಟಿಕ್) ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಮ್ ನ್ನು ಅಳವಡಿಸಬೇಕು. ಇದರ ಆಧಾರದಡಿ ಮುಂದೆ ಜನಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕ್ಷೇತ್ರ ಪುನರ್ ವಿಂಗಡಣೆಗೆ ಮಾನದಂಡವಾಗಲಿರುವ ಈ ಜನಗಣತಿಯು ಕೊಡವರ ರಾಜಕೀಯ ಸಬಲೀಕರಣ, ಸ್ವಯಂ ನಿರ್ಧಾರದ ಹಕ್ಕು ಸ್ಥಾಪಿಸಲು ಮೆಟ್ಟಿಲಾಗಲಿದೆ. ಅಲ್ಲದೆ ಕೊಡವರ ಧಾರ್ಮಿಕ ಸಂಸ್ಕಾರ ತೋಕ್-ಗನ್ ಹಕ್ಕು ಚಿರಸ್ಥಾಯಿಯಾಗಿ ಮುಂದುವರಿಯಲು ಪೂರಕವಾಗಲಿದೆ ಎಂದರು.
ತಾ. ೧೮ ರಂದು ಕುಟ್ಟದಲ್ಲಿ ಜನಜಾಗೃತಿ
೨೦ನೇ ಕೊಡವ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ ತಾ. ೧೮ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಕುಟ್ಟದಲ್ಲಿ ನಡೆಯಲಿದೆ ಎಂದು ಇದೇ ಸಂದರ್ಭ ಎನ್.ಯು. ನಾಚಪ್ಪ ತಿಳಿಸಿದರು.
ಕಾರ್ಯಕ್ರಮದಲ್ಲಿ ಅಜ್ಜಮಾಡ ಕವಿತಾ, ಅಂಜಿಗೇರಿ ನಾಡ ತಕ್ಕ ಚೆಕ್ಕರೆ ರಾಜೇಶ್, ಚಂಗುಲAಡ ಸೂರಜ್, ಕೋಳೆರ ರಾಜ ನರೇಂದ್ರ, ಇಟ್ಟಿರ ಲಾಲಪ್ಪ ಮಂಡAಗಡ ಯೋಗೇಶ್, ಬೊಳ್ಳಜಿರ ಕಿಶೋರ್, ಚೊಟ್ಟೆಯಂಡಮಾಡ ಬಿಪಿನ್, ಬೊಜ್ಜಂಗಡ ದೀಪು ತಿಮ್ಮಯ್ಯ, ಅಣ್ಣಾಳಮಾಡ ಶಂಕರಿ, ಕಳಕಂಡ ಲವ, ಕೊಡಾಂಗಡ ರೋಶನ್, ನೂರೆರ ರಮೇಶ್, ಕಿರಿಯಮಾಡ ಪೊನ್ನಪ್ಪ, ಕಿರಿಯಮಾಡ ಶಾಂತ ತಮ್ಮಯ್ಯ, ಬಾಚರಣಿಯಂಡ ಉತ್ತಪ್ಪ, ಕಟ್ಟೆರ ಕಿಶೋರ್, ಚಂಗುಲAಡ ಕಾರ್ಯಪ್ಪ, ಬಲ್ಯಮಾಡ ಕಾರ್ಯಪ್ಪ, ಚೆಕ್ಕೆರ ತಮ್ಮಯ್ಯ, ಬಯವಂಡ ಮಾಚಯ್ಯ, ಕುಪ್ಪಣಮಾಡ ವಾಸು, ಕುಪ್ಪಣಮಾಡ ಸುಬ್ಬಯ್ಯ, ಅಜ್ಜಿಕುಟ್ಟಿರ ರಮೇಶ್, ಚೆಕ್ಕೆರ ವಿಠಲ್, ಚೆಕ್ಕೆರ ಸುಬ್ಬಯ್ಯ, ಚಂಗುಲAಡ ಅನು, ಕೆಚಮಾಡ ಧ್ರುವ, ಕುಪ್ಪಣಮಾಡ ಮೊಣ್ಣಪ್ಪ, ಕುಪ್ಪಣಮಾಡ ಗಣೇಶ್, ಕೆಚಮಾಡ ಶಿವು ನಾಚಪ್ಪ, ಕಿರಿಯಮಾಡ ದತ್ತಾತ್ರೇಯ, ಕಿರಿಯಮಾಡ ಮಿಲನ್, ಕುಪ್ಪಣಮಾಡ ಚಾಮಿ, ಚಂಗುಲAಡ ಚಂಗಪ್ಪ, ಚೆಂಗುಲAಡ ಅರುಣ, ಚಂಗುಲAಡ ಈಶ, ಅಯ್ಯಪ್ಪ, ಮಾರಮಾಡ ಸುಗಂಧ, ಮಾರಮಾಡ ಮದನ್ ಮಂದಣ್ಣ, ನೂರೇರ ಚಿಟ್ಟಿಯಪ್ಪ, ಚೆಕ್ಕೆರ ಅಶ್ವಥ್, ನೂರೇರ ಕುಟ್ಟಪ್ಪ, ಚಿಯನಮಾಡ ರಾಮು, ಚೆಂಗುಲAಡ ಅಯ್ಯಪ್ಪ, ಚೆಂಗುಲAಡ ತಿಮ್ಮಯ್ಯ, ಕೆಚಮಾಡ ಹರ್ಷ, ಬೊಳ್ಳಜಿರ ಕಾವೇರಪ್ಪ, ಚೆಕ್ಕೆರ ಸಚಿನ್, ಮಾದಿರ ಪೆಮ್ಮಯ್ಯ, ಕೊಡಾಂಗಡ ಅಣ್ಣಯ್ಯ, ಐಪುಮಾಡ ರಾಯ್, ಕಿರಿಯಮಾಡ ಶಶಿ ವಿಶ್ವನಾಥ್, ಬಲ್ಯಮಿದೇರಿರ ಪ್ರಕಾಶ್, ಐಪುಮಾಡ ದೇವಯ್ಯ, ಬೊಟ್ಟಂಗಡ ಜಪ್ಪು, ಬಲ್ಯಮಿದೇರಿರ ಪ್ರಕಾಶ್, ಬಯವಂಡ ಕಾಳಪ್ಪ, ಚೆಪುö್ಪಡಿರ ರಾಜೇಶ್, ಅಜ್ಜಿಕುಟ್ಟೀರ ಮುತ್ತು, ಚಂಗುಲAಡ ಚಿಪ್ಪ ನವೀನ್, ಮಲ್ಲಂಡ ನಾಚಪ್ಪ, ಮಲ್ಲಂಡ ದಿನೇಶ್, ಮಿದೇರಿರ ಸವೀನ, ಚೆಕ್ಕೆರ ಸಂಜು, ಚಂಗುಲAಡ ಮಾದಯ್ಯ, ದೇಕಮಾಡ ಮಧು, ಚೆಕ್ಕೆರ ತಿಮ್ಮಯ್ಯ, ಚೆಕ್ಕೆರ ರಮೇಶ್, ನೂರೆರ ಕರುಂಬಯ್ಯ, ನೂರೆರ ಪ್ರತಾಪ್, ನೂರೆರ ವಿಜಯ, ಮಾಣಿರ ಸಂಜು ಸೋಮಯ್ಯ, ಬೊಳಂದAಡ ಕಾವೇರಪ್ಪ, ಕಿರಿಯಮಾಡ ಶೆರಿನ್, ಅಪ್ಪೆಯಂಗಡ ಮಾಲೆ ಪೂಣಚ್ಚ, ಅಜ್ಜಿಕುಟ್ಟಿರ ಲೋಕೇಶ್, ಬೊಟ್ಟಂಗಡ ಗಿರೀಶ್ ಪಾಲ್ಗೊಂಡಿದ್ದರು.