ಮಡಿಕೇರಿ, ನ. ೩: ಸಮಸ್ತ ೧೦೦ ನೇ ವಾರ್ಷಿಕ ಅಂತರರಾಷ್ಟಿçÃಯ ಮಹಾಸಮ್ಮೇಳನದ ಪ್ರಯುಕ್ತ ನಡೆಸಲ್ಪಡುವ ಕೊಡಗು ಜಿಲ್ಲಾ ಸಮ್ಮೇಳನದ ಪ್ರಚಾರ ಕಾರ್ಯಕ್ರಮಕ್ಕೆ ಎಸ್‌ಕೆಎಸ್‌ಎಸ್‌ಎಫ್ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಎಮ್ಮೆಮಾಡು ಸೂಫೀ ಶಹೀದ್ ರ.ಅ ಝಿಯಾರತಿನೊಂದಿಗೆ ಅಧಿಕೃತ ಚಾಲನೆ ನೀಡಲಾಗಿದೆ.
ಉಮರ್ ಫೈಝಿ ರವರು ಜಿಲ್ಲಾ ಸಮಿತಿಗೆ ಸಮಸ್ತ ಧ್ವಜವನ್ನು ಹಸ್ತಾಂತರ ಮಾಡುವುದರ ಮೂಲಕ ಪ್ರಚಾರಕ್ಕೆ ಚಾಲನೆ ನೀಡಿದರು. ಎಮ್ಮೆಮಾಡು ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರಿನಲ್ಲಿ ಜಿಲ್ಲಾ ಸಮಿತಿ ಹಾಗೂ ಎಮ್ಮೆಮಾಡು ಶಾಖಾ ಕಾರ್ಯಕರ್ತರುಗಳ ಮುಲಾಖಾತ್ ಸಂಗಮ ನಡೆಯಿತು. ಜಿಲ್ಲಾ ಸಮಿತಿಯು ಅಯ್ಯಂಗೇರಿ ಹಾಗೂ ಗೋಣಿಕೊಪ್ಪ ಶಾಖೆಗಳಿಗೆ ತೆರಳಿ ಮುಲಾಖಾತ್ ಕಾರ್ಯಕ್ರಮ ನಡೆಸಿದರು. ಕಾರ್ಯಕ್ರಮದಲ್ಲಿ ಉಮರ್ ಫೈಝಿ, ತಮ್ಲೀಕ್ ದಾರಿಮಿ,ಸುಹೈಬ್ ಫೈಝಿ, ರಫೀಕ್ ಬಾಖವಿ,ಬಾಸಿತ್ ಹಾಜಿ,ಇಬ್ರಾಹಿಂ ಹಾಜಿ ಹಾಗೂ ಜಿಲ್ಲಾ ಸಮಿತಿ ಸರ್ವ ಸದಸ್ಯರು ಹಾಜರಿದ್ದರು.