ಕುಶಾಲನಗರ, ನ. ೩: ಕೊಡಗು ಎಜುಕೇಶನಲ್ ಅಂಡ್ ಸೋಶಿಯಲ್ ಸರ್ವಿಸ್ ಟ್ರಸ್ಟ್ ಆಶ್ರಯದಲ್ಲಿ ರಕ್ಷಣಾ ಇಲಾಖೆ ಸೇರ್ಪಡೆಗೆ ಮತ್ತು ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನವೆಂಬರ್ ೨೩ ರಂದು ಕುಶಾಲನಗರದಲ್ಲಿ ಗುಡ್ಡಗಾಡು ಓಟ ಆಯೋಜಿಸಲಾಗಿದೆ.

ಪೊನ್ನಚಂಡ ನೀರಜ್ ಕುಶಾಲಪ್ಪ ಮೆಮೋರಿಯಲ್ ಕ್ರಾಸ್ ಕಂಟ್ರಿ ಓಟದಲ್ಲಿ ಯುವಕರಿಗೆ ೮ ಕಿಲೋಮೀಟರ್ ಹಾಗೂ ಯುವತಿಯರಿಗೆ ೫ ಕಿ.ಮೀ. ಓಟವನ್ನು ಆಯೋಜಿಸಲಾಗಿದೆ ಎಂದು ಟ್ರಸ್ಟ್ ಪ್ರಕಟಣೆ ತಿಳಿಸಿದೆ. ಸಂಸ್ಥೆಯ ಪ್ರಮುಖರಾದ ಕ್ಯಾಪ್ಟನ್ ಪಟ್ಟಡ ಎಸ್. ಕಾರ್ಯಪ್ಪ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಡಿಸೆಂಬರ್ ೧, ೨೦೦೫ರ ನಂತರ ಜನಿಸಿದವರು ಈ ಕ್ರೀಡಾಕೂಟದಲ್ಲಿ ಭಾಗವಹಿಸಬಹುದು.

ಆಸಕ್ತ ಯುವಕರು ಮತ್ತು ಯುವತಿಯರು ತಮ್ಮ ಜನ್ಮ ದಿನಾಂಕ ಮತ್ತು ಆಧಾರ್ ಕಾರ್ಡ್ ಪ್ರತಿ ತೋರಿಸಿ ನೋಂದಣಿ ಮಾಡುವಂತೆ ಅವರು ತಿಳಿಸಿದ್ದಾರೆ.

ಓಟದಲ್ಲಿ ವಿಜೇತ ಯುವಕರಿಗೆ ಪ್ರಥಮ ಬಹುಮಾನ ರೂ. ೧೦,೦೦೦ ದ್ವಿತೀಯ ರೂ. ೮,೦೦೦ ತೃತೀಯ ರೂ. ೬,೦೦೦ ಮತ್ತು ನಾಲ್ಕನೇ ಬಹುಮಾನ ರೂ. ೪,೦೦೦, ಐದನೇ ಬಹುಮಾನ ರೂ. ೩,೦೦೦ ಆರನೇ ಬಹುಮಾನವಾಗಿ ರೂ. ೨,೦೦೦ ನಗದು ನೀಡಲಾಗುವುದು. ವಿಜೇತ ಯುವತಿಯರಿಗೆ ಪ್ರಥಮ ರೂ. ೬,೦೦೦, ದ್ವಿತೀಯ ರೂ. ೫,೦೦೦, ತೃತೀಯ ರೂ. ೪,೦೦೦, ನಾಲ್ಕನೇ ಬಹುಮಾನ ರೂ. ೩,೦೦೦, ೫ನೇ ಬಹುಮಾನ ರೂ. ೨,೦೦೦ ಮತ್ತು ಆರನೇ ಬಹುಮಾನವಾಗಿ ರೂ. ೧,೦೦೦ ನಗದು ನೀಡಲಾಗುವುದು.

ನೋಂದಣಿಗಾಗಿ ೮೧೨೩೬೭೬೨೭೦, ೮೩೧೦೫೭೮೫೭೪ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ೯೪೪೯೪೭೫೫೦೨ ಸಂಪರ್ಕಿಸಬಹುದು. ನೋಂದಣಿ ಮಾಡಲು ನವೆಂಬರ್ ೧೫ ಕೊನೆಯ ದಿನವಾಗಿದೆ. ಭಾಗವಹಿಸಿದ ಎಲ್ಲರಿಗೂ ಬೆಳಗಿನ ತಿಂಡಿ - ಕಾಫಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಸ್ಪರ್ಧೆ ಬೆಳಿಗ್ಗೆ ೬ ಗಂಟೆಗೆ ಆರಂಭವಾಗಲಿದೆ. ಕುಶಾಲನಗರ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಸ್ಪರ್ಧಿಗಳು ಬೆಳಿಗ್ಗೆ ೬ ಗಂಟೆಯೊಳಗೆ ಸೇರುವಂತೆ ಕಾರ್ಯಕ್ರಮ ಸಂಯೋಜಕ ಆಮೆ ಜನಾರ್ಧನ್ ತಿಳಿಸಿದ್ದಾರೆ.