ಸಿದ್ದಾಪುರ, ನ. ೩: ಎಸ್.ಕೆ.ಎಸ್.ಎಸ್.ಎಫ್. ವಿಖಾಯ ಸಂಘಟನೆಯ ನೂರನೇ ಅಂತರರಾಷ್ಟಿçÃಯ ಸಮ್ಮೇಳನದ ಪ್ರಚಾರದ ಅಂಗವಾಗಿ ಕೊಡಗು ಜಿಲ್ಲಾ ವಿಖಾಯ ತಂಡದಿAದ ಸಿದ್ದಾಪುರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ಕಾರ್ಯಕ್ರಮದ ಅಂಗವಾಗಿ ವಿಖಾಯ ತಂಡದ ಕಾರ್ಯಕರ್ತರು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ಸುತ್ತಮುತ್ತಲಿನ ಗಿಡಗಂಟಿಗಳನ್ನು ಕಡಿದು ಸ್ವಚ್ಛಗೊಳಿಸಿದರು.
ಈ ಸಂದರ್ಭ ಮಾತನಾಡಿದ ಕೊಡಗು ಜಿಲ್ಲಾ ಎಸ್‌ಕೆಎಸ್‌ಎಸ್‌ಎಫ್ ವಿಖಾಯ ಸಂಘಟನೆಯ ಕೊಡಗು ಜಿಲ್ಲಾ ಚೇರ್ಮನ್ ಕರೀಂ ಮಾತನಾಡಿ, ವಿಖಾಯ ತಂಡವು ಸಾಮಾಜಿಕ ಕಳಕಳಿಯೊಂದಿಗೆ ಸದಾ ಸಮಾಜದ ಸಂಕಷ್ಟಕ್ಕೆ ಸ್ಪಂದಿಸುವ ಸಂಘಟನೆಯಾಗಿದೆ. ತರಬೇತಿ ಪಡೆದ ನುರಿತರು ಸಂಘಟನೆಯಲ್ಲಿದ್ದು, ಪ್ರಳಯ, ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಸೇನೆಯೊಂದಿಗೆ ಕೈಜೋಡಿಸುವ ಮೂಲಕ ಸಮಾಜದ ನೆರವಿಗೆ ನಿಂತಿದೆ.
ಎಸ್.ಕೆ.ಎಸ್.ಎಸ್.ಎಫ್. ವಿಖಾಯ ಸಂಘಟನೆಯ ಅಂತರರಾಷ್ಟಿçÃಯ ಸಮ್ಮೇಳನವು ಕಾಸರಗೋಡಿನಲ್ಲಿ ನಡೆಯಲಿದ್ದು, ಕಾರ್ಯಕ್ರಮದ ಪ್ರಚಾರಾಂದೋಲನ ನವೆಂಬರ್ ೨೯ ರಂದು ಮಡಿಕೇರಿಯ ಗಾಂಧಿ ಮೈದಾನದಲ್ಲಿ ನಡೆಯಲಿದೆ ಎಂದರು.
ಈ ಸಂದರ್ಭ ಎಸ್.ಕೆ.ಎಸ್.ಎಸ್.ಎಫ್. ವಿಖಾಯ ಕೊಡಗು ಜಿಲ್ಲಾ ಕನ್ವೀನರ್ ಶೌಕತ್ ಹಾಜಿ, ಸಂಘಟನೆಯ ಪ್ರಮುಖರಾದ ಷಂಶುದ್ದಿನ್, ಅಯ್ಯೂಬ್ ನಲ್ವತ್ತೆಕರೆ ಸೇರಿದಂತೆ ನೆಲ್ಲಿಹುದಿಕೇರಿ, ಸಿದ್ದಾಪುರ, ನಲ್ವತ್ತೆಕರೆ ವ್ಯಾಪ್ತಿಯ ವಿಖಾಯ ಸಂಘಟನೆಯ ಪ್ರಮುಖರು ಹಾಜರಿದ್ದರು.