ಸೋಮವಾರಪೇಟೆ, ನ. ೧:: ನಾವು ಪ್ರತಿಷ್ಠಾನದ ವತಿಯಿಂದ ಶಾಲಾ ಆರೋಗ್ಯ ಮತ್ತು ವಿದ್ಯಾರ್ಥಿಗಳ ಯೋಗಕ್ಷೇಮ ಕಾರ್ಯಕ್ರಮ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಯಿತು. ಪ್ರತಿಷ್ಠಾನದ ಸ್ಥಾಪಕ ಗೌತಮ್ ಕಿರಗಂದೂರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರತಿಷ್ಠಾನದ ಕಾರ್ಯಕಾರಿ ಸಮಿತಿ ನಿರ್ದೇಶಕಿ ಸುಮನಾ ಮ್ಯಾಥ್ಯು ಮಾತನಾಡಿ, ರಾಷ್ಟಿçÃಯ ಆರೋಗ್ಯ ಮಿಷನ್‌ನಡಿ ೨೦೨೦ರಲ್ಲಿ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ. ವಿದ್ಯಾರ್ಥಿಗಳಿಗೆ ಉತ್ತಮ ಜೀವನಶೈಲಿ, ಆರೋಗ್ಯಕರ ನಡವಳಿಕೆ ಮುಂತಾದ ವಿಷಯಗಳ ಬಗ್ಗೆ ಮಕ್ಕಳಿಗೆ ಮಾಹಿತಿ ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮವಾಗಿದೆ ಎಂದರು.

ಇದರಲ್ಲಿ ಮಕ್ಕಳು ಮುಕ್ತವಾಗಿ ತಮ್ಮ ಬೇಕು ಬೇಡಿಕೆಗಳು ಮತ್ತು ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ. ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ ಬೆಂಗಳೂರು, ಯುನಿಸೆಫ್ ಜಂಟಿಯಾಗಿ ಕಾರ್ಯಕ್ರಮ ರೂಪಿಸುತ್ತಿದೆ. ನಾವು ಪ್ರತಿಷ್ಠಾನ ಕೊಡಗು ಜಿಲ್ಲೆಯ ಶಾಲೆಗಳ ಜವಾಬ್ದಾರಿ ತೆಗೆದುಕೊಂಡಿದೆ. ಪ್ರಸಕ್ತ ವರ್ಷ ಸೋಮವಾರಪೇಟೆ ತಾಲೂಕಿನ ಆಯ್ದ ೫ ಶಾಲೆಗಳಲ್ಲಿ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ಹೇಳಿದರು. ಸರ್ಕಾರಿ ಪ್ರೌಢಶಾಲೆಯ ಎಂಟನೇ ಮತ್ತು ಒಂಬತ್ತನೆ ತರಗತಿ ಮಕ್ಕಳಿಗೆ ಆರೋಗ್ಯಕರ ಬೆಳವಣಿಗೆ ವಿಷಯದ ಬಗ್ಗೆ ಮಾಹಿತಿ ನೀಡಲಾಯಿತು. ಶಾಲೆಯ ಮುಖ್ಯ ಶಿಕ್ಷಕಿ ಹೇಮಲತ, ಶಿಕ್ಷಕಿ ರಾಜರತ್ನ ಪ್ರತಿಷ್ಠಾನದ ಪ್ರೀತಿ, ವನಿತ ಇದ್ದರು.