ಮಡಿಕೇರಿ, ನ. ೧: ಭಾರತೀಯ ರಾಷ್ಟಿçÃಯ ಮಜ್ದೂರ್ ಕಾಂಗ್ರೆಸ್ ಫೆಡರೇಷನ್‌ನ ಕರ್ನಾಟಕ ರಾಜ್ಯ ಕಾರ್ಯಾಧ್ಯಕ್ಷರಾಗಿ ಗಣೇಶ್ ನಾಯ್ಡು ಅವರು ನೇಮಕಗೊಂಡಿದ್ದಾರೆ.

ಮಜ್ದೂರ್ ಕಾಂಗ್ರೆಸ್ ಫೆಡರೇಷನ್‌ನ ರಾಷ್ಟಿçÃಯ ಅಧ್ಯಕ್ಷÀ ಸ್ವಾಮಿನಾಥ್ ಜೈಸ್ವಾಲ್ ಅವರ ಅನುಮೋದನೆ ಮತ್ತು ಫೆಡರೇಷನ್‌ನ ಕರ್ನಾಟಕ ರಾಜ್ಯಾಧ್ಯಕ್ಷ ನಂದಾ ಎನ್. ಅವರ ಆದೇಶದ ಮೇರೆಗೆ ಗಣೇಶ ನಾಯ್ಡು ಅವರನ್ನು ನೇಮಕ ಮಾಡಲಾಗಿದೆ.ಮಹಿಳೆಯರು, ಹಿಂದುಳಿದ ವರ್ಗ, ಪರಿಶಿಷ್ಟರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ವರ್ಗದ ಜನರನ್ನು ಪಕ್ಷದೆಡೆಗೆ ಸೆಳೆದು ಸದಸ್ಯತ್ವವನ್ನು ಹೆಚ್ಚಿಸಲಾಗುವುದು. ಪಕ್ಷದ ಮುಖಂಡರ ಮಾರ್ಗದರ್ಶನ ಹಾಗೂ ಸ್ಥಳೀಯ ನಾಯಕರ ಸಹಕಾರದೊಂದಿಗೆ ಕಾರ್ಯನಿರ್ವಹಿಸುವುದಾಗಿ ಅವರು ತಿಳಿಸಿದ್ದಾರೆ. ಮೂರ್ನಾಡುವಿನ ಗಣೇಶ್ ನಾಯ್ಡು ಅವರು ಶ್ರೀಯೋಗಿ ನಾರಾಯಣ ಕೊಡಗು ಬಲಿಜ ಸಮಾಜದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.