ವೀರಾಜಪೇಟೆ, ನ. ೧: ವೀರಾಜಪೇಟೆ ಪುರಸಭೆಯ ತಿಮ್ಮಯ್ಯ ಬಡಾವಣೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಎಸ್.ಎಫ್.ಸಿ. ಅನುದಾನದಲ್ಲಿ, ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಭೂಮಿಪೂಜೆ ನೆರವೇರಿಸಿದರು. ತಿಮ್ಮಯ್ಯ ಬಡಾವಣೆಯ ಸಜಿನಿ, ಟೋಮಿ ಅವರ ಮನೆಗಾಗಿ ಹಾದು ಹೋಗುವ ರಸ್ತೆ ಅಭಿವೃದ್ಧಿ, ಅಪ್ಪಯ್ಯ ಸ್ವಾಮಿ ರಸ್ತೆಯ ಬೂಪತಿ ಅಂಗಡಿಯ ಮುಂಭಾಗದಿAದ ಹನಿಸೊಸೈಟಿಯ ಮುಂಭಾಗವರೆಗೆ ಚರಂಡಿ ನಿರ್ಮಾಣ ಕಾಮಗಾರಿ. ರೂ. ೫ ಲಕ್ಷ, ಅಪ್ಪಯ್ಯ ಸ್ವಾಮಿ ರಸ್ತೆಯ ಎಸ್.ಎಸ್. ರಾಮಮೂರ್ತಿ ರಸ್ತೆಯ ಬೊಳ್ತಂಡ ಚೇತನ್‌ರವರ ಮನೆಯ ಮುಂಭಾಗದಿAದ ಆರ್ಮಿ ಆಸ್ಪತ್ರೆಗಾಗಿ ಆಂಜನೇಯ ದೇವಸ್ಥಾನದವರೆಗೆ ಚರಂಡಿ ನಿರ್ಮಾಣ ರೂ. ೭ ಲಕ್ಷ, ತಿಮ್ಮಯ್ಯ ಬಡಾವಣೆಯ ನ್ಯೂ ಎಕ್ಸ್ಟೆಂಕ್ಷನ್‌ನ ತಾತಂಡ ರೋಷನ್‌ರವರ ಮನೆಗೆ ಹೋಗುವ ರಸ್ತೆ ಅಭಿವೃದ್ಧಿ, ಕೀರ್ತಿ ಬಡಾವಣೆಯ ಸಿ.ಎಂ. ಗಂಗಾಧರ್‌ರವರ ಮನೆಯಿಂದ ಚೆರಿಯಾಟಂಡ ಮನೆಯವರೆಗೆ, ಕೀರ್ತಿ ಬಡಾವಣೆಯ ಮಾಳೇಟ್ಟಿರ ಮಿಟ್ಟುರವರ ಮನೆಯಿಂದ ಬಾಚೀರ ಡಾಲಿರವರ ಮನೆಯವರೆಗೆ, ತಿಮ್ಮಯ್ಯ ಬಡಾವಣೆಯ ಪೌರ ಕಾರ್ಮಿಕ ಸುಬ್ರಮಣಿ ಅವರ ಮನೆಗಾಗಿ ಹಾದು ಹೋಗುವ ರಸ್ತೆ ಅಭಿವೃದ್ಧಿಗೆ ರೂ. ೨೦ ಲಕ್ಷ ಹೀಗೆ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಪೊನ್ನಣ್ಣ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಮನೆಯಪಂಡ ದೇಚಮ್ಮ ಕಾಳಪ್ಪ, ಉಪಾಧ್ಯಕ್ಷೆ ಫಸಿಯಾ ತಬ್ಸುಂ, ಪುರಸಭೆ ಮುಖ್ಯಾಧಿಕಾರಿ ಪಟ್ಟಚೆರವಂಡ ನಾಚಪ್ಪ, ಅಭಿಯಂತರ ಹೇಮ ಕುಮಾರ್, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ನಗರ ಕಾಂಗ್ರೆಸ್ ಅಧ್ಯಕ್ಷ ಮಾದಂಡ ತಿಮ್ಮಯ್ಯ, ಸ್ಥಾಯಿ ಸಮಿತಿಯ ಅಧ್ಯಕ್ಷರು ಜಲೀಲ್, ಪೂರ್ಣಿಮಾ, ಪುರಸಭೆ ಸದಸ್ಯರಾದ ಎಸ್.ಹೆಚ್. ಮತೀನ್, ಮಹಮ್ಮದ್ ರಾಫಿ, ಅತಿಫ್ ಮನ್ನ, ಸಿ.ಬಿ. ರವಿ, ರಜಿನಿಕಾಂತ್, ಬೆನ್ನಿ ಆಗಸ್ಟಿನ್, ಹಮೀದ್, ಜೋಕಿಮ್, ನರೇಂದ್ರ ಕಾಮತ್, ದಿನೇಶ್ ನಂಬಿಯಾರ್, ಸ್ಥಳೀಯರಾದ ಪಟ್ಟಡ ಪೂವಣ್ಣ, ಅನಿಲ್ ಮಂದಣ್ಣ ಸೇರಿದಂತೆ ಪಕ್ಷದ ಪ್ರಮುಖರು, ಸ್ಥಳೀಯರು ಉಪಸ್ಥಿತರಿದ್ದರು.