ಮಡಿಕೇರಿ, ನ.೧: ಮಧ್ಯ ಪ್ರದೇಶದ ಭೂಪಾಲ್‌ನಲ್ಲಿ ನಡೆ ಯಲಿರುವ ೬೮ನೇ ರಾಷ್ಟಿçÃಯ ರೈಫಲ್ ಶೂಟಿಂಗ್ ಚಾಂಪಿಯನ್‌ಶಿಪ್ ಸ್ಪರ್ಧೆಯ ೧೦ ಮೀ ಏರ್ ರೈಫಲ್ ಕಿರಿ ಯರ ವಿಭಾಗದಲ್ಲಿ ಸ್ಪರ್ಧಿಸಲು ಜಿಲ್ಲೆಯ (ಮೊದಲ ಪುಟದಿಂದ) ನಂದಿನೆರವAಡ ಮಹಿಮ್ ಮುದ್ದಯ್ಯ ಆಯ್ಕೆಯಾಗಿದ್ದಾನೆ. ಭೂಪಾಲ್‌ನಲ್ಲಿ ನಡೆದ ೨೪ನೇ ಅಖಿಲ ಭಾರತ ಜಿ.ವಿ. ಮೌಲಾಂಕರ್ ಶೂಟಿಂಗ್ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಭಾಗವಹಿಸಿದ ಮಹಿಮ್ ೩೭೫/೪೦೦ ಅಂಕಗಳೊAದಿಗೆ ರಾಷ್ಟಿçÃಯ ಸ್ಪರ್ಧೆಗೆ ಆಯ್ಕೆಯಾಗಿರುತ್ತಾನೆ. ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ನವದೆಹಲಿಯಲ್ಲಿ ನಡೆದ ಅಖಿಲ ಭಾರತ ತಲ್ ಸೈನಿಕ್ ಶಿಬಿರದಲ್ಲಿ ೨೫ ಮೀ .೨೨ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಕೂಡಾ ಮಹಿಮ್ ಭಾಗವಹಿಸಿರುತ್ತಾನೆ. ಮೈಸೂರಿನ ಮಾನಸಸರೋವರ ಪುಷ್ಕರಿಣಿ ವಿದ್ಯಾಶ್ರಮದಲ್ಲಿ ೯ ನೇ ತರಗತಿ ವ್ಯಾಸಂಗ ಮಾಡುತ್ತಿರುವ ಮಹಿಮ್ ಮಡಿಕೇರಿ ಬಳಿಯ ಇಬ್ನಿವಳವಾಡಿ ಗ್ರಾಮದ ನಿವಾಸಿಗಳಾದ ಜಿಲ್ಲಾ ಪೊಲೀಸ್ ಕಚೇರಿಯ ಗಣಕ ವಿಭಾಗದ ಸಿಬ್ಬಂದಿ ನಂದಿನೆರವAಡ ತಿಮ್ಮಯ್ಯ ಮತ್ತು ಮೈಸೂರಿನ ಎನ್.ಪಿ.ಎಸ್. ಇಂಟರ್‌ನ್ಯಾಷನಲ್ ಶಾಲೆಯ ಶಿಕ್ಷಕಿ ಕಾವ್ಯ ಇವರ ಪುತ್ರ.