ನವದೆಹಲಿ, ನ. ೧: ಸ್ವಾಯತ್ತ ಕೊಡವ ಲ್ಯಾಂಡ್ ಸೇರಿದಂತೆ ಕೊಡವ ಜನಾಂಗದ ವಿವಿಧ ಬೇಡಿಕೆಗಳ ಈಡೇರಿಕೆಗೆ ಹೋರಾಟ ನಡೆಸುತ್ತಿರುವ ಕೊಡವ ನ್ಯಾಷನಲ್ ಕೌನ್ಸಿಲ್ (ಸಿ.ಎನ್.ಸಿ) ಸಂಘಟನೆ ವತಿಯಿಂದ ಕನ್ನಡ ರಾಜ್ಯೋತ್ಸವದ ದಿನವಾದ ಇಂದು ನವದೆಹಲಿಯ ಸಂಸತ್ ಬೀದಿಯಲ್ಲಿರುವ ಜಂತರ್ ಮಂತರ್‌ನಲ್ಲಿ ಧರಣಿ ಸತ್ಯಾಗ್ರಹ ನಡೆಯಿತು.
ಕೊಡವ ಜನಾಂಗದ ಈ ಬೇಡಿಕೆಗಳು ಈಡೇರದೆ ರಾಜ್ಯೋತ್ಸವ ಆಚರಣೆ ಪರಿಪೂರ್ಣವಾಗುವುದಿಲ್ಲ ಎಂದು ಸಂಘಟನೆ ಈ ಹಿಂದಿನಿAದಲೂ ಪ್ರತಿಪಾದಿಸಿಕೊಂಡು ಬಂದಿದ್ದು, ರಾಜ್ಯ ಪುನರ್ ಸಂಘಟನಾ ದಿನವಾದ ಈ ದಿನದಂದು ರಾಷ್ಟçದ ರಾಜಧಾನಿ ನವದೆಹಲಿಯಲ್ಲಿ ಧರಣಿ ನಡೆಸಿ ಸಂಬAಧಿಸಿದವರಿಗೆ ಮನವಿಗಳನ್ನು ಸಲ್ಲಿಸಿ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿಕೊಂಡು ಬರುತ್ತಿದೆ. ಸಂಘಟನೆಯ ಅಧ್ಯಕ್ಷ ಎನ್.ಯು. ನಾಚಪ್ಪ ನೇತೃತ್ವದಲ್ಲಿ ಇಂದು ಧರಣಿ ನಡೆಸಲಾಯಿತು. ಎರಡನೇ ರಾಜ್ಯಗಳ ಪುನರ್ ಸಂಘಟನಾ ಆಯೋಗ ರಚನೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಡಲಾಗಿದೆ. ಸತ್ಯಾಗ್ರಹದ ನೇತೃತ್ವ ವಹಿಸಿ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಅವರು, ಖ್ಯಾತ ಅರ್ಥಶಾಸ್ತçಜ್ಞ ಡಾ.ಸುಬ್ರಮಣಿಯನ್ ಸ್ವಾಮಿ ಅವರ ಮೂಲಕ ಸಿಎನ್‌ಸಿ ಸಂಘಟನೆ ಹೈಕೋರ್ಟ್ನಲ್ಲಿ ಕಾನೂನು ಹೋರಾಟ ನಡೆಸುತ್ತಿದ್ದು, ಜಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೊಡವರ ಸಾಂಪ್ರದಾಯಿಕ ತಾಯ್ನಾಡು ‘ಸಿ’ ರಾಜ್ಯ ೧೯೫೬ ರ ನ.೧ ರಂದು ವಿಶಾಲ ಮೈಸೂರಿನಲ್ಲಿ ಈಗಿನ ಕರ್ನಾಟಕ ರಾಜ್ಯದಲ್ಲಿ ವಿಲೀನಗೊಂಡಿತು. ನಂತರದ ದಿನಗಳಲ್ಲಿ ಕೊಡವರ ಹಿತಾಸಕ್ತಿಗಳನ್ನು ರಕ್ಷಿಸಲು ಸಂವಿಧಾನದ ೭ನೇ ತಿದ್ದುಪಡಿಯಲ್ಲಿ ಪ್ರತಿಪಾದಿಸಲಾದ ರಾಜ್ಯಗಳ ಪುನರ್-ಸಂಘಟನಾ ಕಾಯ್ದೆ ೧೯೫೬ರ ಬದ್ಧತೆಯನ್ನು ರಾಜ್ಯವು ಪಾಲಿಸಿಲ್ಲ. ಕೊಡಗಿನ ವಿಲೀನದ ನಂತರ, ಕೊಡವರನ್ನು ರಾಜ್ಯದ ಎರಡನೇ ದರ್ಜೆಯ, ವರ್ಣಭೇದ ನೀತಿಯ ನಾಗರಿಕರಂತೆ ಪರಿಗಣಿಸಲಾಗಿದ್ದು, ಇದು ಸಾಂವಿಧಾನಿಕ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕೊಡವರು ಕೊಡವ ಪ್ರದೇಶದ ಮೂಲನಿವಾಸಿ ಆದಿಮಸಂಜಾತ ಬುಡಕಟ್ಟು ಜನಾಂಗದವರಾಗಿರುವುದರಿAದ, ಆಂತರಿಕ ರಾಜಕೀಯ ಸ್ವ-ನಿರ್ಣಯದ ಹಕ್ಕುಗಳು, ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ, ಸ್ವ-ಆಡಳಿತ ಮತ್ತು ಇತರ ೧೦ ಕಾನೂನುಬದ್ಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಹಕ್ಕೊತ್ತಾಯ ಮಂಡಿಸಿದರು.
ಹಕ್ಕೊತ್ತಾಯಗಳು
ಕೊಡವಲ್ಯಾAಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮತ್ತು ಆಂತರಿಕ ರಾಜಕೀಯ ಸ್ವ-ನಿರ್ಣಯದ ಹಕ್ಕುಗಳು, ಅಂತರರಾಷ್ಟಿçÃಯ ಕಾನೂನಿನಡಿಯಲ್ಲಿ ಆದಿಮಸಂಜಾತ ಏಕ-ಜನಾಂಗೀಯ ‘ಅನಿಮಿಸ್ಟಿಕ್’ ಕೊಡವ ಜನಾಂಗೀಯತೆಗೆ ವಿಶ್ವಸಂಸ್ಥೆಯ ಮಾನ್ಯತೆ ನೀಡಬೇಕು. ಮೂಲನಿವಾಸಿ ಆದಿಮಸಂಜಾತ ಕೊಡವ ಜನಾಂಗೀಯ ಸಮುದಾಯವನ್ನು ಸಂವಿಧಾನದ ಶೆಡ್ಯುಲ್ ಪಟ್ಟಿಯಲ್ಲಿ ಸೇರಿಸಬೇಕು.
ಕೊಡವ ಸಂಪ್ರದಾಯ ಧಾರ್ಮಿಕ “ಸಂಸ್ಕಾರ ಗನ್- ತೋಕ್” ಹಕ್ಕುಗಳನ್ನು ಸಿಖ್ “ಕಿಪಾರ್ಸಣ್” ಗೆ ಸಮಾನವಾಗಿ ಸಂವಿಧಾನದ ೨೫ ಮತ್ತು ೨೬ ನೇ ವಿಧಿಗಳ ಅಡಿಯಲ್ಲಿ ರಕ್ಷಿಸಬೇಕು.
ಕೊಡವ ಭಾಷೆಯನ್ನು ಸಂವಿಧಾನದ ೮ನೇ ಶೆಡ್ಯೂಲ್ ಗೆ ಸೇರಿಸಬೇಕು. ಸಂವಿಧಾನದ ೩೪೭, ೩೫೦, ೩೫೦ಂ, ಮತ್ತು ೩೫೦ಃ ವಿಧಿಗಳ ಅಡಿಯಲ್ಲಿ ಕೊಡವ ಭಾಷೆಯನ್ನು ಪಠ್ಯಕ್ರಮ ಮತ್ತು ಆಡಳಿತದಲ್ಲಿ ಪರಿಚಯಿಸಬೇಕು.
ಕೊಡವ ಜಾನಪದ ಪರಂಪರೆಯನ್ನು ಯುನೆಸ್ಕೋದ ಅಮೂರ್ತ ಸಾಂಸ್ಕöÈತಿಕ ಪರಂಪರೆಯ ಪಟ್ಟಿಯಲ್ಲಿ ಸೇರಿಸಬೇಕು. ಕೊಡವ ಜಾನಪದ ಪರಂಪರೆಯನ್ನು ಜೀವಂತಗೊಳಿಸಲು, ಸರ್ಕಾರವು ವಿಶ್ವ ಕೊಡವಾಲಜಿ ಸಂಶೋಧನಾ ಕೇಂದ್ರ ಮತ್ತು ಕೊಡವ ಸುಧಾರಿತ ಅಧ್ಯಯನ ಕೇಂದ್ರವನ್ನು ಸ್ಥಾಪಿಸಲು ಭೂಮಿಯನ್ನು ಒದಗಿಸಬೇಕು.
ಜೀವನದಿ ಕಾವೇರಿಗೆ “ಕಾನೂನುಬದ್ಧ ವ್ಯಕ್ತಿತ್ವ” ದೊಂದಿಗೆ ಜೀವಂತ ಅಸ್ತಿತ್ವದ ಸ್ಥಾನಮಾನ ನೀಡಬೇಕು. ಮತ್ತಿತರ ಬೇಡಿಕೆ ಮುಂದಿರಿಸಲಾಗಿದೆ. ಈ ಸಂದರ್ಭ ಧರಣಿನಿರತರು ಸಾಂಪ್ರದಾಯಿಕ ಧಿರಿಸಿನಲ್ಲಿ ಘೋಷಣೆಗಳೊಂದಿಗೆ ಗಮನ ಸೆಳೆದರು.
ಸತ್ಯಾಗ್ರಹದಲ್ಲಿ ನಂದೇಟಿರ ಕವಿತಾ ಸುಬ್ಬಯ್ಯ, ಬೊಜ್ಜಂಗಡ ನಕ್ಷಾ ಪೂವಣ್ಣ, ಅಂಜಪರವAಡ ಕೌಶಿ ನಿಖಿಲ್, ಜಮ್ಮಡ ಮೋಹನ್, ನಂದೇಟಿರ ರವಿ ಸುಬ್ಬಯ್ಯ, ಕುಲ್ಲೇಟಿರ ಅರುಣಾ ಬೇಬ, ಕಾಂಡೇರ ಸುರೇಶ್, ಪಾರ್ವಂಗಡ ನವೀನ್, ಅಪ್ಪೆಯಂಗಡ ಮಾಲೆ ಪೂಣಚ್ಚ, ಕರ್ತಂಡ ದಿಲನ್, ಬೊಜ್ಜಂಗಡ ಪೂವಣ್ಣ, ಅಂಜಪರವAಡ ನಿಖಿಲ್ ಕಾರ್ಯಪ್ಪ, ಮಾಚಿಮಂಡ ಶರತ್ ಸುಬ್ಬಯ್ಯ, ಮಾಚಿಮಾಡ ನಿಶಾನ್ ಮತ್ತಿತರರು ಪಾಲ್ಗೊಂಡಿದ್ದರು.