ಬೆಂಗಳೂರು, ನ. ೧ : ಭಾರತದ ಖ್ಯಾತ ಟೆನ್ನಿಸ್ ಆಟಗಾರ ರೋಹನ್ ಬೋಪಣ್ಣ ೨೨ ವರ್ಷಗಳ ಗಮನಾರ್ಹ ವೃತ್ತಿ ಜೀವನದ ನಂತರ ಶನಿವಾರ ವೃತ್ತಿಪರ ಟೆನ್ನಿಸ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಅವರ ಕೊನೆಯ ಪಂದ್ಯ ಪ್ಯಾರಿಸ್ ಮಾಸ್ಟರ್ಸ್ ೧೦೦೦ ಆಗಿತ್ತು, ಅಲ್ಲಿ ಅವರು ಅಲೆಕ್ಸಾಂಡರ್ ಬುಬ್ಲಿಕ್ ಅವರೊಂದಿಗೆ ಡಬಲ್ಸ್ ಆಡಿದ್ದರು. ಈ ವರ್ಷದ ಆರಂಭದಲ್ಲಿ, ಬೋಪಣ್ಣ ಅತ್ಯಂತ ಹಿರಿಯ ಗ್ರಾö್ಯಂಡ್ ಸ್ಲಾö್ಯಮ್ ವಿಜೇತ ಮತ್ತು ಡಬಲ್ಸ್ ಟೆನ್ನಿಸ್‌ನಲ್ಲಿ ವಿಶ್ವದ ಅತ್ಯಂತ ಹಿರಿಯ ನಂ. ೧ ಆಗುವ ಮೂಲಕ ಇತಿಹಾಸ ನಿರ್ಮಿಸಿದರು.
ಶನಿವಾರ ಇನ್ಸಾ÷್ಟಗ್ರಾಮ್‌ನಲ್ಲಿ ರೋಹನ್ ಬೋಪಣ್ಣ ತಮ್ಮ ಭಾವ ನಾತ್ಮಕ ನಿವೃತ್ತಿ ಘೋಷಣೆ ಮಾಹಿತಿಯಲ್ಲಿ “ಭಾರತವನ್ನು ಪ್ರತಿನಿಧಿಸುವುದು ನನ್ನ ಜೀವನದ ಶ್ರೇಷ್ಠ ಗೌರವವಾಗಿದೆ. ೪ಐದÀನೇ ಪುಟಕ್ಕೆ ನಾನು ಪ್ರತಿ ಬಾರಿ ಆಟದ ಮೈದಾನಕ್ಕೆ ಕಾಲಿಟ್ಟಾಗಲೂ, ನಾನು ಆ ಧ್ವಜ, ಆ ಭಾವನೆ, ಆ ಹೆಮ್ಮೆಗಾಗಿ ಆಡಿದ್ದೇನೆ” ಎಂದು ಅವರು ಹೇಳಿದ್ದಾರೆ. ೪೫ ವರ್ಷದ ಬೋಪಣ್ಣ ತಮ್ಮ ವೃತ್ತಿಜೀವನದಲ್ಲಿ ಎರಡು ಗ್ರಾö್ಯಂಡ್ ಸ್ಲಾö್ಯಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ೨೦೨೪ರ ಆಸ್ಟೆçÃಲಿಯನ್ ಓಪನ್ ಪುರುಷರ ಡಬಲ್ಸ್ (ಮ್ಯಾಥ್ಯೂ ಎಬ್ಡೆನ್ ಜೊತೆಗೆ) ಮತ್ತು ೨೦೧೭ ಫ್ರೆಂಚ್ ಓಪನ್ ಮಿಶ್ರ ಡಬಲ್ಸ್ (ಗೇಬ್ರಿಯೆಲಾ ಡಬ್ರೋವ್ಸಿ÷್ಕ ಜೊತೆಗೆ). ಅವರು ನಾಲ್ಕು ಗ್ರಾö್ಯಂಡ್ ಸ್ಲಾö್ಯಮ್ ಪಂದ್ಯಗಳಲ್ಲಿ ಫೈನಲ್ ತಲುಪಿದರು. ಪುರುಷರ ಡಬಲ್ಸ್ನಲ್ಲಿ ಎರಡು (೨೦೨೦ ರ ಯುಎಸ್ ಓಪನ್‌ನಲ್ಲಿ ಐಸಾಮ್-ಉಲ್-ಹಕ್ ಖುರೇಷಿ ಮತ್ತು ೨೦೨೩ ರ ಯುಎಸ್ ಓಪನ್‌ನಲ್ಲಿ ಎಬ್ಡೆನ್ ಜೊತೆಗೂಡಿ) ಮತ್ತು ಮಿಶ್ರ ಡಬಲ್ಸ್ನಲ್ಲಿ ಎರಡು (೨೦೧೮ ರ ಆಸ್ಟೆçÃಲಿಯನ್ ಓಪನ್‌ನಲ್ಲಿ ಟೈಮಾ ಬಾಬೋಸ್ ಮತ್ತು ೨೦೨೩ ರ ಆಸ್ಟೆçÃಲಿಯನ್ ಓಪನ್‌ನಲ್ಲಿ ಸಾನಿಯಾ ಮಿರ್ಜಾ ಜೊತೆಗೂಡಿ) ಆಡಿದ್ದರು.
ಅವರು ೨೦೧೨ ಮತ್ತು ೨೦೧೫ ರಲ್ಲಿ ಮಹೇಶ್ ಭೂಪತಿ ಮತ್ತು ಫ್ಲೋರಿನ್ ಮೆರ್ಗೆಯಾ ಅವರೊಂದಿಗೆ ವರ್ಷಾಂತ್ಯದ ಎಟಿಪಿ ಫೈನಲ್‌ಗಳ ಫೈನಲ್ ಅನ್ನು ಸಹ ತಲುಪಿದ್ದರು.
ಬೋಪಣ್ಣ ಅವರ ಕ್ರೀಡಾ ಪ್ರಯಾಣವು ಕೊಡಗಿನ ಮಾದಾಪುರದಲ್ಲಿ ಪ್ರಾರಂಭವಾಯಿತು. ಅವರ ಶ್ರೇಷ್ಟ ಪ್ರದರ್ಶನವು ಅವರನ್ನು ಟೆನ್ನಿಸ್‌ನ ಅತ್ಯುನ್ನತ ಮಟ್ಟದಲ್ಲಿ ಸ್ಪರ್ಧಿಸಲು ಕಾರಣವಾಯಿತು, ಇದರಲ್ಲಿ ೨೦೧೬ರ ರಿಯೊ ಒಲಿಂಪಿಕ್ಸ್ನಲ್ಲಿ ಸಾನಿಯಾ ಮಿರ್ಜಾ ಅವರೊಂದಿಗೆ ನಾಲ್ಕನೇ ಸ್ಥಾನ ಮತ್ತು ಎರಡು ದಶಕಗಳಿಗೂ ಹೆಚ್ಚು ಕಾಲ ಡೇವಿಸ್ ಕಪ್ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.
ನಿವೃತ್ತಿಯ ನಂತರವೂ, ಬೋಪಣ್ಣ ಭಾರತದಲ್ಲಿ ಟೆನ್ನಿಸ್ ಅನ್ನು ರೂಪಿಸುವುದನ್ನು ಮುಂದುವರೆಸಲಿದ್ದಾರೆ. ಅವರು ಯುವ ಭಾರತೀಯ ಟೆನಿಸ್ ಪ್ರತಿಭೆಗಳನ್ನು ಗುರುತಿಸಿ ದೊಡ್ಡ ಆಟಗಾರರನ್ನಾಗಿ ರೂಪಿಸಲು ತಮ್ಮ ಟೆನ್ನಿಸ್ ಅಕಾಡೆಮಿಯನ್ನು ನಡೆಸುತ್ತಿದ್ದಾರೆ. ಅವರ ಅಕಾಡೆಮಿ ಮುಂಬರುವ ಆಟಗಾರರಿಗೆ ಅಂತರರಾಷ್ಟಿçÃಯ ಹಂತವನ್ನು ತಲುಪಲು ಅವಕಾಶಗಳನ್ನು ಸೃಷ್ಟಿಸುವತ್ತ ಗಮನಹರಿಸುತ್ತಿದೆ ಎಂದು ಬೋಪಣ್ಣ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ಈ ರೀತಿ ಹೇಳಿಕೊಂಡಿದ್ದಾರೆ.
ಟೆನ್ನಿಸ್ ನನಗೆ ಕೇವಲ ಆಟವಾಗಿರಲಿಲ್ಲ - ಅದು ನಾನು ಬಿದ್ದಾಗ ಶಕ್ತಿಯನ್ನು ಮತ್ತು ಜಗತ್ತು ನನ್ನನ್ನು ಅನುಮಾನಿಸಿದಾಗ ನಂಬಿಕೆಯನ್ನು ನೀಡಿದೆ. ನಾನು ಪ್ರತಿ ಬಾರಿ ಕೋರ್ಟ್ಗೆ ಕಾಲಿಟ್ಟಾಗ, ಅದು ನನಗೆ ಪರಿಶ್ರಮ, ಎದ್ದೇಳಲು ಪ್ರೇರಣೆ, ನನ್ನೊಳಗಿನ ಎಲ್ಲವೂ ನನಗೆ ಸಾಧ್ಯವಿಲ್ಲ ಎಂದು ಹೇಳಿದಾಗ ಮತ್ತೆ ಹೋರಾಡಲು ಕಲಿಸಿತು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ನಾನು ಏಕೆ ಪ್ರಾರಂಭಿಸಿದೆ ಮತ್ತು ನಾನು ಯಾರು ಎಂದು ನನಗೆ ನೆನಪಿಸಿತು ಎಂದು ಟೆನ್ನಿಸ್ ದಂತಕಥೆ ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಳ್ಳುವ ಮೂಲಕ ವಿದಾಯ ಹೇಳಿದ್ದಾರೆ.
ಬೋಪಣ್ಣ ದಾಖಲೆಗಳು: ೪೩ನೇ ವಯಸ್ಸಿನಲ್ಲಿ ಆಸ್ಟೆçÃಲಿಯನ್ ಓಪನ್ ೨೦೨೪ರ ಡಬಲ್ಸ್ ಗೆಲ್ಲುವ ಮೂಲಕ ಸಂಚಲನ ಸೃಷ್ಟಿಸಿದ್ದರು. ಇದರೊಂದಿಗೆ ಅವರು ತಮ್ಮ ಮೊದಲ ಗ್ರಾö್ಯಂಡ್ ಸ್ಲಾö್ಯಮ್ ಪ್ರಶಸ್ತಿಯನ್ನು ಗೆದ್ದರು. ರೋಹನ್ ಬೋಪಣ್ಣ ಗ್ರಾö್ಯಂಡ್ ಸ್ಲಾö್ಯಮ್ ಪ್ರಶಸ್ತಿಯನ್ನು ಗೆದ್ದ ಅತ್ಯಂತ ಹಿರಿಯ ಟೆನ್ನಿಸ್ ಆಟಗಾರ ಮತ್ತು ಡಬಲ್ಸ್ನಲ್ಲಿ ನಂಬರ್ ಒನ್ ಶ್ರೇಯಾಂಕಿತ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಅವರು ಯುಎಸ್ ಓಪನ್‌ನಲ್ಲಿ ಎರಡು ಬಾರಿ (೨೦೧೦, ೨೦೨೩) ರನ್ನರ್ ಅಪ್ ಆಗಿದ್ದರು. ೨೦೧೭ರ ಫ್ರೆಂಚ್ ಓಪನ್‌ನಲ್ಲಿ ಗೇಬ್ರಿಯಲ್ ಡಬ್ರೋವ್ಸಿ÷್ಕ (ಕೆನಡಾ) ಅವರೊಂದಿಗೆ ಮಿಶ್ರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದರು. ಅವರು ೨೬ ಟೂರ್-ಲೆವೆಲ್ ಡಬಲ್ಸ್ ಪ್ರಶಸ್ತಿಗಳನ್ನು ಗೆದ್ದರು. ಆರು ಎಟಿಪಿ ಮಾಸ್ಟರ್ಸ್ ಪ್ರಶಸ್ತಿಗಳನ್ನು ಸಹ ಜಯಿಸಿದ್ದಾರೆ. ಅವರ ಸೇವೆಗಳನ್ನು ಗುರುತಿಸಿ, ಭಾರತ ಸರ್ಕಾರವು ೨೦೧೯ ರಲ್ಲಿ ಅರ್ಜುನ ಪ್ರಶಸ್ತಿ ಮತ್ತು ೨೦೨೪ ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತು.
- ಕೋವರ್‌ಕೊಲ್ಲಿ ಇಂದ್ರೇಶ್