ಮಡಿಕೇರಿ, ನ. ೧: ಕೇಂದ್ರೀಯ ಗೃಹಮಂತ್ರಿ ದಕ್ಷತಾ ಪದಕಕ್ಕೆ ರಾಜ್ಯ ಪೊಲೀಸ್ ಇಲಾಖೆಯ ತನಿಖೆ ಹಾಗೂ ಗುಪ್ತಚರ ವಿಭಾಗದ ೮ ಪೊಲೀಸರು ಭಾಜನರಾಗಿದ್ದಾರೆ. ಇವರ ಪೈಕಿ ಹಾಸನ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಕೊಡಗಿನವರಾದ ಮಾದಪಂಡ ಕೆ. ತಮ್ಮಯ್ಯ ಅವರು ಒಬ್ಬರಾಗಿದ್ದಾರೆ. ಕೇಂದ್ರ ಸರಕಾರ ನೀಡುವ ೨೦೨೫ರ ಸಾಲಿನ ಪದಕಕ್ಕೆ ಆಯ್ಕೆಯಾದ ಪೊಲೀಸ್ ಅಧಿಕಾರಿಗಳ ಪಟ್ಟಿಯನ್ನು ಶುಕ್ರವಾರ ಪ್ರಕಟ ಮಾಡಲಾಗಿದೆ. ತಮ್ಮಯ್ಯ ಅವರು ಜಿಲ್ಲೆಯ ಕುಶಾಲನಗರ ವಿಭಾಗದವರಾಗಿದ್ದಾರೆ.