ಮಡಿಕೇರಿ, ನ. ೧: ಯುವ ಜನರು ಕನ್ನಡ ನಾಡು-ನುಡಿ, ಸಾಹಿತ್ಯ, ಸಂಸ್ಕೃತಿ ಹಾಗೂ ಕಲೆಯ ಬಗ್ಗೆ ಅಭಿರುಚಿ ಬೆಳೆಸಿಕೊಳ್ಳುವ ಮೂಲಕ ನಮ್ಮ ಶ್ರೀಮಂತ ಪರಂಪರೆಯ ನೈಜ ವಾರಸುದಾರರಾಗಿ ಕನ್ನಡತನವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಎನ್.ಎಸ್.ಭೋಸರಾಜು ಕರೆ ನೀಡಿದರು.
ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಏರ್ಪಡಿಸಲಾಗಿದ್ದ ೭೦ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಸಂದೇಶ ನೀಡಿದರು. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಕೊಡಗು ಜಿಲ್ಲೆ ಹಾಗೂ ನಾಡಿನ ಅಭಿವೃದ್ಧಿಗೆ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ನಾಡು-ನುಡಿಗೆ ವಿಶೇಷ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ದೇಶದಲ್ಲಿ ಕನ್ನಡ ಭಾಷೆಗೆ ಜ್ಞಾನಪೀಠ ಪ್ರಶಸ್ತಿ ಹೆಚ್ಚು ದೊರೆತಿರುವುದು ವಿಶೇಷವೇ ಸರಿ. ಇಂದು ಹೆಮ್ಮೆಯಿಂದ ಆಚರಿಸುತ್ತಿರುವ ಕನ್ನಡ ರಾಜ್ಯೋತ್ಸವದ ಹಿಂದೆ ನಮ್ಮ ನಾಡಿನ ಏಕೀಕರಣಕ್ಕಾಗಿ ಶ್ರಮಿಸಿದ ಮಹನೀಯರ ಹೋರಾಟವಿದೆ. ಸಹಸ್ರಾರು ಜನ ಕನ್ನಡಿಗರು ಆಡಳಿತಾತ್ಮಕ ಹಾಗೂ ಭಾವನಾತ್ಮಕ ಐಕ್ಯತೆಗಾಗಿ ಹಗಲಿರುಳು ದುಡಿದಿದ್ದಾರೆ. ಅಂತಹ ಎಲ್ಲಾ ಮಹಾನ್ ಚೇತನರನ್ನು ಅತ್ಯಂತ ಕೃತಜ್ಞತೆಯಿಂದ ಸ್ಮರಿಸುತ್ತೇನೆ.
ಕನ್ನಡ, ಕರ್ನಾಟಕ, ಕರುನಾಡು ಎಂಬುದು ಕೇವಲ ಬರೀ ನೆಲ ಮತ್ತು ಭಾಷೆಯಲ್ಲ. ಅದೊಂದು ಕನ್ನಡಿಗರ ಭಾವನೆ ಮತ್ತು ಬಾಂಧವ್ಯವಾಗಿದೆ. ಕನ್ನಡ ರಾಜ್ಯೋತ್ಸವ ನಮ್ಮೆಲ್ಲರ ನಿತ್ಯೋತ್ಸವವಾಗಬೇಕು ಎಂದರು.
ಮನಗೆದ್ದ ಗ್ಯಾರಂಟಿ ಯೋಜನೆ
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಪೂರ್ಣಗೊಳ್ಳುತ್ತಿದ್ದು, ಹಲವು ‘ಗ್ಯಾರಂಟಿ ಯೋಜನೆ’ಗಳನ್ನು ಜಾರಿಗೊಳಿಸುವ ಮೂಲಕ ಎಲ್ಲಾ ಜನರ ಮನ ಗೆದ್ದಿದೆ. ಶಕ್ತಿ ಯೋಜನೆಯ ಅಡಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಒಟ್ಟು ೧,೪೦,೨೮,೭೯೩ ಮಹಿಳಾ ಪ್ರಯಾಣಿಕರು ಈ ಯೋಜನೆಯ ಪ್ರಯೋಜನೆಯನ್ನು ಪಡೆದು ಕೊಂಡಿರುತ್ತಾರೆ. ಸರಾಸರಿ ೧೬,೦೩೩ ಪ್ರಯಾಣಿಕರು ಒಂದು ದಿನಕ್ಕೆ ಸಂಸ್ಥೆಯ ವಾಹನದಲ್ಲಿ ಪ್ರಯಾಣಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ೨೦೨೫ ಅಕ್ಟೋಬರ್ ಮಾಹೆಯವರೆಗೆ ಮಹಿಳಾ ಪ್ರಯಾಣಿಕರ ಸಂಖ್ಯೆ ಶೇ.೧೦.೨೧ ರಷ್ಟು ಹೆಚ್ಚಾಗಿದೆ. ಗೃಹಲಕ್ಷಿö್ಮ ಯೋಜನೆಯು ನಮ್ಮ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದೆ. ಈ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು ೧,೧೭,೦೮೫ ಫಲಾನುಭವಿಗಳು ನೊಂದಾಯಿಸಿಕೊAಡಿದ್ದು, ರೂ. ೪೬೫.೦೨ ಕೋಟಿ ಹಣವನ್ನು ಮಹಿಳೆಯರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿರುತ್ತದೆ. ಗೃಹಜ್ಯೋತಿ ಯೋಜನೆಯಡಿ ಕೊಡಗು ಜಿಲ್ಲೆಯಲ್ಲಿ ಹಾಲಿ ಇರುವ ಒಟ್ಟು ೧,೯೮,೮೪೧ ಗ್ರಾಹಕರು ಹೆಸರು ನೋಂದಾಯಿಸಿ ಕೊಂಡಿದ್ದು, ಶೇ.೯೯.೦೯ ರಷ್ಟು ಪ್ರಗತಿ ಸಾಧಿಸಲಾಗಿದೆ.
ಅನ್ನಭಾಗ್ಯ ಯೋಜನೆಯಡಿ ಸರ್ಕಾರ ಬಿಪಿಎಲ್ ಫಲಾನುಭವಿಗಳಿಗೆ ೧೦ ಕೆ.ಜಿ ಅಕ್ಕಿಯನ್ನು ಪ್ರತಿ ಮಾಹೆ ವಿತರಣೆ ಮಾಡಲಾಗುತ್ತಿದ್ದು, ಒಟ್ಟು ೧,೦೮,೬೦೨ ಪಡಿತರ ಚೀಟಿ ಕುಟುಂಬಗಳು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಯುವನಿಧಿ ಯೋಜನೆಯಡಿಯಲ್ಲಿ ಅಕ್ಟೋಬರ್ ೨೩ ರವರೆಗೆ ಒಟ್ಟು ೧೯೧೨ ಅಭ್ಯರ್ಥಿಗಳು ನೋಂದಾಯಿಸಿಕೊAಡಿದ್ದು, ಜುಲೈ-೨೦೨೫ ರ ಮಾಹೆಯಲ್ಲಿ ೧೪೪೫ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮುಖಾಂತರ ಒಟ್ಟು ರೂ.೨,೩೫,೩೮,೦೦೦ ಹಣ ಸಂದಾಯವಾಗಿದೆ ಎಂದು ಮಾಹಿತಿ ನೀಡಿದರು.
ಮೂಲಭೂತ ಸೌಲಭ್ಯಗಳು
ಗ್ಯಾರಂಟಿ ಯೋಜನೆಗಳ ಜತೆಗೆ ಸರ್ಕಾರ ವಿವಿಧ ಅಭಿವೃದ್ಧಿ ಕಾರ್ಯಗಳು ಎಂದಿನAತೆ ನಡೆಯುತ್ತಿವೆ. ಆ ದಿಸೆಯಲ್ಲಿ ವಿವಿಧ ಇಲಾಖೆಗಳ ಮೂಲಕ ಮೂಲ ಸೌಲಭ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ.
ಲೋಕೋಪಯೋಗಿ ಇಲಾಖೆ
ಮಡಿಕೇರಿ ಮತ್ತು ವೀರಾಜಪೇಟೆ ಕ್ಷೇತ್ರದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲು ೨ ಕೋಟಿ ಅನುದಾನ ಒದಗಿಸ ಲಾಗಿದೆ. ರಾಜ್ಯ ಹೆದ್ದಾರಿ ರಸ್ತೆಗಳಿಗೆ ರೂ. ೭೪೪.೧೭ ಲಕ್ಷಗಳು ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಅಭಿವೃದ್ಧಿಗಾಗಿ ರೂ. ೧೪೧೫.೩೮ ಲಕ್ಷ ಅನುದಾನ ಬಿಡುಗಡೆಯಾಗಿದೆ. ರಸ್ತೆ ಹಾಗೂ ಸೇತುವೆಗಳ ಅಭಿವೃದ್ದಿಗಾಗಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ೨೦ ಕೋಟಿ ಅನುದಾನ ಬಿಡುಗಡೆಯಾಗಿದೆ. ೪ಏಳನೇ ಪುಟಕ್ಕೆ (ಮೊದಲ ಪುಟದಿಂದ) ರಾಜ್ಯ ಹೆದ್ದಾರಿ ಸೇತುವೆ ದುರಸ್ತಿ ಕಾಮಗಾರಿಗಳಿಗೆ ರೂ.೭೫ ಲಕ್ಷ, ಮುಖ್ಯ ರಸ್ತೆ ಸೇತುವೆ ದುರಸ್ತಿ ಕಾಮಗಾರಿಗಳಿಗೆ ರೂ.೧೪೫.೦೦ ಲಕ್ಷÀ ಅನುದಾನ ಬಿಡುಗಡೆಯಾಗಿದೆ ಎಂದು ತಿಳಿಸಿದರು.
ಪರಿಶಿಷ್ಟ ವರ್ಗಗಳ ಕಲ್ಯಾಣ
ನಿವೇಶನರಹಿತ ಪರಿಶಿಷ್ಟ ಪಂಗಡದ ಜನಾಂಗದವರಿಗೆ ನಿವೇಶನ ಒದಗಿಸಲು ೭೧.೨೫ ಎಕರೆ ಜಮೀನನ್ನು ಕಾಯ್ದಿರಿಸಲಾಗಿದೆ. ಈ ಜಮೀನಿನಲ್ಲಿ ೨೦೦೦ ಪರಿಶಿಷ್ಟ ಪಂಗಡದ ಜನಾಂಗದವರಿಗೆ ನಿವೇಶನದ ಹಕ್ಕು ಪತ್ರಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ನಾಗರಹೊಳೆಯಲ್ಲಿ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಯು ೧೯೬೧ ನೇ ಸಾಲಿನಲ್ಲಿ ಪ್ರಾರಂಭಗೊAಡಿದ್ದು, ಇಲ್ಲಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಹಳೆ ಕಟ್ಟಡವನ್ನು ಉನ್ನತೀಕರಿಸಿ ಸುಸಜ್ಜಿತ ನೂತನ ಕಟ್ಟಡವನ್ನು ನಿರ್ಮಿಸಿದ್ದು, ಇಲಾಖೆಗೆ ಹಸ್ತಾಂತರಿಸಲು ಕ್ರಮವಹಿಸಲಾಗಿದೆ.
ಮಡಿಕೇರಿ ನಗರಕ್ಕೆ ಮಂಜೂರಾದ ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರದ ಬಾಲಕರ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯದ ಸ್ವಂತ ಕಟ್ಟಡ ನಿರ್ಮಾಣಕ್ಕೆ ಜಿಲ್ಲಾಡಳಿತದ ವತಿಯಿಂದ ೨.೧೦ ಎಕರೆ ಜಾಗವನ್ನು ಕಾಯ್ದಿರಿಸಿದ್ದು, ಈ ಜಾಗಗಳಲ್ಲಿ ರೂ.೧೦ ಕೋಟಿ ಮೊತ್ತಕ್ಕೆ ನೂತನ ಕಟ್ಟಡಗಳನ್ನು ನಿರ್ಮಿಸಲು ಅನುದಾನವನ್ನು ನಿಗದಿಪಡಿಸಲಾಗಿದೆ ಎಂದು ಶಾಸಕರು ಹೇಳಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮುಖೇನ ಕೊಡಗು ಜಿಲ್ಲೆಯಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಸಮೀಕ್ಷೆಗೆ ಸಂಬAಧಿಸಿದAತೆ ಒಟ್ಟು ೫,೩೦,೫೫೨ ಜನಸಂಖ್ಯೆಯಲ್ಲಿ ೫,೧೦,೯೨೫ ಮಂದಿಯ ಸರ್ವೇ ಕಾರ್ಯ ಪೂರ್ಣಗೊಂಡಿದ್ದು, ಶೇ.೯೬.೩೦ ರಷ್ಟು ಪ್ರಗತಿ ಸಾಧಿಸಲಾಗಿದೆ. ಮೀನುಗಾರಿಕೆ ಇಲಾಖೆ ಮೂಲಕ ರೈತರಿಗೆ ಮೀನುಕೃಷಿ ಕೈಗೊಳ್ಳಲು ಜಿಲ್ಲಾ ವಲಯ ಯೋಜನೆಯಡಿ ಮೀನು ಕೃಷಿಕರಿಗೆ ಒಟ್ಟು ೧೫.೮೧ ಲಕ್ಷ ಬಿತ್ತನೆ ಮೀನುಮರಿಗಳನ್ನು ವಿತರಣೆ ಮಾಡಲಾಗಿದೆ. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಆಸ್ಪತ್ರೆ ಆವರಣದಲ್ಲಿ ೪೫೦ ಹಾಸಿಗೆ ಸಾರ್ಮಥ್ಯದ ಆಸ್ಪತ್ರೆ ಕಟ್ಟಡಗಳ ನಿರ್ಮಾಣದ ೨ನೇ ಹಂತದ ಕಾಮಗಾರಿಗೆ ಒಟ್ಟು ೭೮.೧೦ ಕೋಟಿ ರೂಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿಯಲ್ಲಿ ಕೆಲವು ವಿಭಾಗಗಳ ಸ್ನಾತಕೋತ್ತರ ಪಿಜಿ ಸೀಟುಗಳು ಹೊಸದಾಗಿ ಮಂಜೂರಾಗಿದ್ದು, ಕೆಲವು ವಿಭಾಗಗಳ ಸ್ನಾತಕೋತ್ತರ ಪಿಜಿ ಸೀಟುಗಳನ್ನು ಹೆಚ್ಚಿಸಲಾಗಿದೆ ಎಂದರು.
ಜಿಲ್ಲಾ ನಗರಾಭಿವೃದ್ಧಿ ಕೋಶ
ಜಿಲ್ಲಾ ನಗರಾಭಿವೃದ್ದಿ ಕೋಶದ ಅಧೀನದಲ್ಲಿ ಐದು ನಗರ ಸ್ಥಳೀಯ ಸಂಸ್ಥೆಗಳಾದ ನಗರಸಭೆ ಮಡಿಕೇರಿ, ಪುರಸಭೆ ವೀರಾಜಪೇಟೆ/ ಕುಶಾಲನಗರ, ಪಟ್ಟಣ ಪಂಚಾಯಿತಿ, ಸೋಮವಾರಪೇಟೆ, ಪೊನ್ನಂಪೇಟೆ ಕಾರ್ಯ ನಿರ್ವಹಿಸುತ್ತಿದ್ದು ಯೋಜನೆಗಳು ಪ್ರಗತಿಯಲ್ಲಿವೆ. ವಿವರ ಈ ಕೆಳಗಿನಂತಿರುತ್ತದೆ. ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ (ಮುನಿಸಿಪಾಲಿಟಿ) ಯೋಜನೆ (ಹಂತ-೪)ಯನ್ನು ಅನುಷ್ಠಾನಗೊಳಿಸಲಾಗಿದ್ದು, ನಗರ ಸ್ಥಳೀಯ ಸಂಸ್ಥೆಗಳಿಗೆ ರೂ. ೫೫ ಕೋಟಿ ಹಂಚಿಕೆಯಾಗಿದೆ. ಒಟ್ಟು ಮೊತ್ತದಲ್ಲಿ ಶೇ. ೮೫ ರಷ್ಟು ಅನುದಾನಕ್ಕೆ ಕ್ರಿಯಾಯೋಜನೆ ತಯಾರಿಸಲಾಗಿರುತ್ತದೆ. ಎಸ್.ಎಫ್.ಸಿ ವಿಶೇಷ ಅನುದಾನದಡಿ ನಗರಸಭೆ ಮಡಿಕೇರಿಗೆ ರೂ. ೩ ಕೋಟಿ, ಪುರಸಭೆ ಕುಶಾಲನಗರಕ್ಕೆ ರೂ. ೨ ಕೋಟಿ, ಪುರಸಭೆ ವಿರಾಜಪೇಟೆಗೆ ರೂ.೨೧ ಕೋಟಿ, ಪಟ್ಟಣ ಪಂಚಾಯಿತಿ ಸೋಮವಾರಪೇಟೆಗೆ ರೂ.೧ ಕೋಟಿ ಅನುದಾನ ಹಂಚಿಕೆಯಾಗಿದೆ. ಪೊನ್ನಂಪೇಟೆ ಪಟ್ಟಣ ಪಂಚಾಯಿತಿಗೆ ರೂ. ೫ ಕೋಟಿ ಅನುದಾನ ಬಿಡುಗಡೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿರುತ್ತದೆ ಎಂದು ವಿವರಣೆ ನೀಡಿದರು.
ಉದ್ಯಾನವನ-ಹಸಿರುಮನೆಗಳು
ಉದ್ಯಾನವನ ಮತ್ತು ಹಸಿರುಮನೆಗಳು ಯೋಜನೆಯಡಿಯಲ್ಲಿ ಮಡಿಕೇರಿ ನಗರಸಭೆಯ ೨ ಉದ್ಯಾನವನಗಳಿಗೆ ಹಾಗೂ ಪುರಸಭೆ ವಿರಾಜಪೇಟೆಯ ೨ ಉದ್ಯಾನವ ಅಭಿವೃದ್ಧಿಗೆ ಒಟ್ಟಾರೆಯಾಗಿ ೧೦೬ ಲಕ್ಷ ರೂಪಾಯಿ ಅನುದಾನ ಬಿಡಗಡೆಯಾಗಿದ್ದು, ಡಿಪಿಆರ್ ಅನುಮೋದನೆಗೊಂಡಿದೆ. ೨೦೨೫-೨೬ನೇ ಸಾಲಿಗೆ ನಗರ ಭೂ ಸಾರಿಗೆ ನಿರ್ದೇಶನಾಲಯ (ಡೆಲ್ಟ್) ಮೂಲಕ ನಗರಸಭೆ ಮಡಿಕೇರಿ ಮತ್ತು ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಕಾಮಗಾರಿ ಕೈಗೊಳ್ಳಲು ಅನುದಾನ ಹಂಚಿಕೆ ಮಾಡಲಾಗಿದೆ.
ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಜಿ.ಟಿ ರಸ್ತೆಯಲ್ಲಿ ಪಾದಚಾರಿ ನಿರ್ಮಾಣ ಕಾಮಗಾರಿ ವೆಚ್ಚ ರೂ.೩.೨೮ ಕೋಟಿ, ಕುಶಾಲನಗರದ ಬಿ.ಎಂ.ರಸ್ತೆಯ ಪಾದಚಾರಿ ಮಾರ್ಗ ಅಭಿವೃದ್ಧಿ ಕಾಮಗಾರಿ ಅನುಷ್ಠಾನಕ್ಕೆ ರೂ.೫.೩೭ ಕೋಟಿ, ಪುರಸಭೆ ವೀರಾಜಪೇಟೆಯ ವ್ಯೂ ಪಾಯಿಂಟ್ ಅಭಿವೃದ್ದಿ ಕಾಮಗಾರಿಗೆ ರೂ. ೧.೭೨ ಕೋಟಿ ಮತ್ತು ಮಡಿಕೇರಿ ನಗರಸಭೆಯ ಎಂ.ಜಿ ರಸ್ತೆಯಲ್ಲಿ ಪಾದಚಾರಿ ಮಾರ್ಗ ಅಭಿವೃದ್ಧಿ ಕಾಮಗಾರಿಗೆ ರೂ.೧.೬೫ ಕೋಟಿ ಒಟ್ಟು ೧೨.೦೨ ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಹಾರಂಗಿ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ
ಹಾರಂಗಿ ಜಲಾಶಯ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಸುಮಾರು ೯೫ ಕೋಟಿಯಷ್ಟು ವಿವಿಧ ಅಭಿವೃದ್ಧಿ ಕಾಮಗಾರಿಗಳು ಶೀಘ್ರದಲ್ಲೇ ಚಾಲನೆಗೊಳ್ಳಲಿದೆ. ೫೦ ಕೋಟಿ ರೂ. ವೆಚ್ಚದಲ್ಲಿ ೧೮ ವಿತರಣಾ ನಾಲೆಗಳ ಆಧುನೀಕರಣ ಕಾಮಗಾರಿ, ೩೬.೫೦ ಕೋಟಿ ರೂ. ವೆಚ್ಚದಲ್ಲಿ ಬೌನ್ಸ್ಟ್ರಿಂಗ್ ಬ್ರಿಡ್ಜ್ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು. ಗುಡ್ಡೆಹೊಸೂರಿನಿಂದ ಹುದುಗೂರು ಮಾರ್ಗದ ೫ ಕಿ.ಮೀ. ರಸ್ತೆ ೫ ಕೋಟಿ ರೂ. ವೆಚ್ಚದಲ್ಲಿ ಹಾಗೆಯೇ ಚಿಕ್ಲಿಹೊಳೆ ರಸ್ತೆ ೫ ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತದೆ.
೭೨ ಕೋಟಿ ರೂ ವೆಚ್ಚದಲ್ಲಿ ಹಾರಂಗಿ ಎಡದಂಡೆ ನಾಲೆಯ ಮುಖ್ಯನಾಲೆಯನ್ನು ಆಧುನೀಕರಣಗೊಳಿಸಲಾಗುವುದು ಎಂದರು.
ಮಡಿಕೇರಿಯಲ್ಲಿ ೧೨.೨೬ ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ತಾರಾಲಯದ ಕಾಮಗಾರಿ ಪ್ರಗತಿಯಲ್ಲಿದೆ.
ಮಡಿಕೇರಿ ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಂತರ್ಜಲ ಅಭಿವೃದ್ಧಿಗೆ, ಚೆಕ್ ಡ್ಯಾಂ, ಸೇತುವೆ ಸಹಿತ ಚೆಕ್ ಡ್ಯಾಂ ಮತ್ತು ನಾಲೆಗಳನ್ನು ನಿರ್ಮಿಸಲು ರೂ.೫೦ ಕೋಟಿ ಅನುದಾನವನ್ನು ಮಂಜೂರು ಮಾಡಲಾಗಿದೆ.
ಜಿಲ್ಲೆಯ ಐದು ತಾಲೂಕುಗಳಲ್ಲಿ ಬರುವ ಗ್ರಾಮಗಳಲ್ಲಿ ಹಳ್ಳಗಳಿಗೆ ಸಂರಕ್ಷಣಾತ್ಮಕ ತಡೆಗೋಡೆ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲು ರೂ.೨೦ ಕೋಟಿ ಅನುದಾನ ಮಂಜೂರು ಮಾಡಲಾಗಿದೆ.
ಕೆರೆಗಳನ್ನು ಅಭಿವೃದ್ಧಿಪಡಿಸಲು ರಾಜ್ಯ ವಿಪತ್ತು ನಿರ್ವಹಣೆ ಯೋಜನೆಯಡಿ ರೂ.೯ ಕೋಟಿ ಅನುದಾನವನ್ನು ಮಂಜೂರು ಮಾಡಲಾಗಿದೆ. ಎಸ್ಸಿಪಿ ಹಾಗೂ ಟಿಎಸ್ಪಿ ಯೋಜನೆ ಅಡಿಯಲ್ಲಿ ೬೦ ಕೊಳವೆಬಾವಿ ಕಾಮಗಾರಿಗಳನ್ನು ಮಂಜೂರು ಮಾಡಲಾಗಿದೆ ಎಂದರು.
ಪ್ರಕೃತಿ ವಿಕೋಪ ಪರಿಹಾರ
ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಜಿಲ್ಲಾಧಿಕಾರಿ ಅವರ ಪಿಡಿ ಖಾತೆಯಲ್ಲಿ ೧೦ ಕೋಟಿ ಅನುದಾನ ಲಭ್ಯವಿದೆ. ಜಿಲ್ಲೆಯಲ್ಲಿ ೩ ಮಾನವ ಹಾನಿ ಸಂಭವಿಸಿದ್ದು, ತಲಾ ೫ ಲಕ್ಷ ಪರಿಹಾರವನ್ನು ಸಂಬAಧಪಟ್ಟವರಿಗೆ ಪಾವತಿಸಲಾಗಿರುತ್ತದೆ. ೫೨ ಮನೆಗಳು ಪೂರ್ಣಹಾನಿಯಾಗಿವೆ, ೧೯೪ ಮನೆಗಳು ತೀವ್ರಹಾನಿ ಹಾಗೂ ೮೮ ಮನೆಗಳು ಭಾಗಶಃ ಹಾನಿಯಾಗಿವೆ. ಮಳೆಯಿಂದಾಗಿ ಜಿಲ್ಲೆಯಲ್ಲಿ ೨೮ ಜಾನುವಾರುಗಳಿಗೆ ಹಾನಿಯಾಗಿದ್ದು ಸಂಬAಧಪಟ್ಟವರಿಗೆ ಅಗತ್ಯ ಪರಿಹಾರ ಪಾವತಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಮಡಿಕೇರಿ ನಗರಸಭಾಧ್ಯಕ್ಷೆ ಪಿ.ಕಲಾವತಿ, ಪದ್ಮಶ್ರೀ ಪುರಸ್ಕೃತೆ ಐಮುಡಿಯಂಡ ರಾಣಿ ಮಾಚಯ್ಯ, ಜಿಲ್ಲಾಧಿಕಾರಿ ವೆಂಕಟ್ ರಾಜ, ಅಪರ ಜಿಲ್ಲಾಧಿಕಾರಿ ಆರ್. ಐಶ್ವರ್ಯ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಉಪ ವಿಭಾಗಾಧಿಕಾರಿ ತಹಶೀಲ್ದಾರ್ ಶ್ರೀಧರ್, ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಹೆಚ್ಚುವರಿ ವರಿಷ್ಠಾಧಿಕಾರಿ ದಿನೇಶ್ಕುಮಾರ್, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೇಶವ ಕಾಮತ್ ಇನ್ನಿತರರು ಇದ್ದರು.
ಕಾರ್ಯಕ್ರಮದಲ್ಲಿ ವಿವಿಧ ತಂಡಗಳಿAದ ಆಕರ್ಷಕ ಪಥಸಂಚಲನ ನಡೆಯಿತು. ಉಸ್ತುವಾರಿ ಸಚಿವರು ಪಥಸಂಚಲನ ತಂಡಗಳ ಪರಿವೀಕ್ಷಣೆ ನಡೆಸಿದ ನಂತರ ಜಿಲ್ಲಾ ಸಶಸ್ತç ದಳ, ಮಡಿಕೇರಿ ಉಪ ವಿಭಾಗ ನಾಗರಿಕ ಪೊಲೀಸ್, ವೀರಾಜಪೇಟೆ, ಸೋಮವಾರಪೇಟೆ ನಾಗರಿಕ ಪೊಲೀಸ್, ಗೃಹರಕ್ಷಕ ದಳ, ಅರಣ್ಯ ಇಲಾಖೆ, ಫೀ.ಮಾ. ಕಾರ್ಯಪ್ಪ ಕಾಲೇಜು ಎನ್ಸಿಸಿ, ಜ.ತಿ. ಪಬ್ಲಿಕ್ ಶಾಲೆ ಎನ್ಸಿಸಿ, ಸ.ಪ.ಪೂ. ಕಾಲೇಜು ಪ್ರೌಢಶಾಲಾ ಎನ್ಸಿಸಿ, ಸಂತ ಜೋಸೆಫರ ಶಾಲೆ ಎನ್ಸಿಸಿ, ನವೋದಯ ಶಾಲೆ ಎನ್ಸಿಸಿ, ಕೊಡಗು ವಿದ್ಯಾಲಯ ಎನ್ಸಿಸಿ, ಸಂತ ಮೈಕಲರ ಪ್ರೌಢಶಾಲೆ ಎನ್ಸಿಸಿ, ಸಂತ ಜೋಸೆಫರ ಶಾಲೆ ಗೈಡ್ಸ್, ಜ.ತಿ.ಶಾಲೆ ಗೈಡ್ಸ್, ಸ.ಮಾ.ಪ್ರಾ. ಶಾಲೆ ಸೇವಾದಳ, ಸಂತ ಮೈಕಲರ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆ ಸೇವಾದಳ ತಂಡಗಳು ಪೊಲೀಸ್ ವಾದ್ಯಗೋಷ್ಠಿಯೊಂದಿಗೆ ಪಥ ಸಂಚಲನದಲ್ಲಿ ಪಾಲ್ಗೊಂಡವು. ಸಹಾಯಕ ಮೀಸಲು ಉಪನಿರೀಕ್ಷಕ ಎಸ್.ಸಿ. ಚೆನ್ನಕೇಶವ ವಾದ್ಯಗೋಷ್ಠಿಯನ್ನು ಮುನ್ನಡೆಸಿದರು.ಕಾರ್ಯಕ್ರಮದಲ್ಲಿ ಹತ್ತನೇ ತರಗತಿಯಲ್ಲಿ ಕನ್ನಡದಲ್ಲಿ ೧೨೫ಕ್ಕೆ ೧೨೫ ಅಂಕ ಗಳಿಸಿದ ವಿದ್ಯಾರ್ಥಿನಿಯನ್ನು ಸನ್ಮಾನಿಸಿ, ಗೌರವಿಸಲಾಯಿತು. ಮೂವರು ವಿದ್ಯಾರ್ಥಿಗಳಿಗೆ ಸನ್ಮಾನವಿತ್ತಾದರೂ ಈರ್ವರು ವಿದ್ಯಾರ್ಥಿನಿಯರು ಬಾರದ ಕಾರಣ ಕೂಡುಮಂಗಳೂರು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಬೋರಮ್ಮ ಕಣ್ಣೂರು ಎಂಬಾಕೆಯನ್ನು ಸನ್ಮಾನಿಸಲಾಯಿತು.ಕನ್ನಡದಲ್ಲಿ ಪಥಸಂಚಲನ ಸೂಚನೆ..!
ಯಾವದೇ ಸರಕಾರಿ ಕಾರ್ಯಕ್ರಮವಿರಲಿ ಅಲ್ಲಿ ವಿವಿಧ ತಂಡಗಳ ಪಥಸಂಚಲನವಿರುತ್ತದೆ. ಅದರ ನೇತೃತ್ವ ವಹಿಸಿಕೊಳ್ಳುವ ಅಧಿಕಾರಿ ಭಾಗಿಯಾಗುವ ತಂಡಗಳಿಗೆ ಸೂಚನೆಗಳನ್ನು ನೀಡುತ್ತಾ ಮುನ್ನಡೆಸುತ್ತಾರೆ. ಸಾಮಾನ್ಯವಾಗಿ ಸೂಚನೆಗಳು ಹಿಂದಿ ಅಥವಾ ಇಂಗ್ಲಿಷ್ ಭಾಷೆಗಳಲ್ಲಿರುತ್ತದೆ. ಆದರೆ ಈ ಬಾರಿ ವಿಶೇಷವಾಗಿ ಸೂಚನೆಗಳೆಲ್ಲವೂ ಕನ್ನಡದಲ್ಲಿದ್ದವು. ಕನ್ನಡ ರಾಜ್ಯೋತ್ಸವ ಪ್ರಯುಕ್ತ ಪಥ ಸಂಚಲನಕ್ಕೆ ಅನುಮತಿ ಪಡೆಯುವದರಿಂದ ಹಿಡಿದು ಎಲ್ಲವೂ ಕನ್ನಡದಲ್ಲಿದ್ದವು. ‘ಶಸ್ತçಗಳನ್ನು ಎತ್ತಿ ಹಿಡಿಯಿರಿ., ಎಡಕ್ಕೆ ತಿರುಗಿ, ವಿಶ್ರಮಿಸಿ., ಎಡದವರು ಎಡಕ್ಕೆ ಬಲದವರು ಬಲಕ್ಕೆ ಎಡಬಲಕ್ಕೆ ತಿರುಗಿ., ನಿರ್ಗಮಿಸಿ..’ ಹೀಗೇ ಕನ್ನಡದಲ್ಲಿ ಸೂಚನೆಗಳನ್ನು ನೀಡಿದ್ದು ಕನ್ನಡಕ್ಕೆ ನೀಡಿದ ಗೌರವವನ್ನು ಎತ್ತಿ ತೋರಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಾರ್ಗದರ್ಶನದಲ್ಲಿ ಶಸಸ್ತç ದಳದ ನಿರೀಕ್ಷರ ಹೆಚ್.ಬಿ.ಗಣೇಶ್ ಪಥಸಂಚಲನವನ್ನು ಅಚ್ಚುಕಟ್ಟಾಗಿ ಮುನ್ನಡೆಸಿದರು.ಕಳೆತುಂಬಿದ ನಿರೂಪಣೆ
ಇಂದಿನ ಕಾರ್ಯಕ್ರಮದಲ್ಲಿ ಆರಂಭದಿAದ ಕೊನೆಯವರೆಗೂ ಸುದೀರ್ಘ ಕಾಲದ ನಿರೂಪಣೆ ಕಾರ್ಯಕ್ರಮಕ್ಕೆ ಕಳೆತುಂಬಿತು. ದೊಡ್ಡ ಕಾರ್ಯಕ್ರಮಗಳಲ್ಲಿ ನಿರೂಪಣೆಗಳಲ್ಲಿ ಗಡಿಬಿಡಿ, ಆಭಾಸಗಳಾಗುವದನ್ನು ಕಾಣುತ್ತೇವೆ. ಆದರೆ ಇಂದು ನಿರೂಪಕರಾಗಿ ಕಾರ್ಯನಿರ್ವಹಣೆ ಮಾಡಿದ ಕುಶಾಲನಗರದ ನಿವೃತ್ತ ಶಿಕ್ಷಕ ಹಾಗೂ ಕಲಾವಿದ ಉ.ರಾ. ನಾಗೇಶ್ ಹಾಗೂ ಪೆರಾಜೆ ಶಾಲೆಯ ಶಿಕ್ಷಕಿ ಯು.ಎಸ್. ರೇಖಾ ಅವರುಗಳು ಕನ್ನಡ ಪದಗಳ ಉಲ್ಲೇಖ., ಸಾಂದರ್ಭಿಕ ಚುಟುಕುಗಳು., ಕವಿವಾಣಿಗಳನ್ನು ಹೇಳುತ್ತಾ ತಮಗೆ ವಹಿಸಿದ ಕಾರ್ಯವನ್ನು ಅಚ್ಚಕನ್ನಡದಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸಿದರು.
ಆದರೆ.., ಬಹುಮಾನ ವಿತರಣಾ ಕಾರ್ಯ ನಿರ್ವಹಿಸಿದವರು ಮಾತ್ರ ‘ಫಸ್ಟ್, ಸೆಕೆಂಡ್, ಥರ್ಡ್..’ ಅಂತ ಬಹುಮಾನದ ಪಟ್ಟಿಯನ್ನು ಓದಿ ತಮ್ಮ ಇಂಗ್ಲಿಷ್ ಪ್ರೇಮ ಮೆರೆದರು..!