ವೀರಾಜಪೇಟೆ, ನ. ೧: ವೈಜ್ಞಾನಿಕ ರೀತಿಯ ಹೊಸ ಮಾದರಿಯ ಜೇನು ಶುದ್ಧೀಕರಣ ಘಟಕವನ್ನು ನಿರ್ಮಾಣ ಮಾಡಿ ಜೇನಿನ ಗುಣಮಟ್ಟವನ್ನು ಪರಿಶೀಲಿಸಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗುವುದು ಎಂದು ಜೇನು ಮತ್ತು ಮೇಣ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕಂಜಿತAಡ ಮಂದಣ್ಣ ಹೇಳಿದರು.

ಪಟ್ಟಣದ ಜೇನು ಮತ್ತು ಮೇಣ ಮಾರಾಟ ಮಳಿಗೆಯ ಕಟ್ಟಡದಲ್ಲಿ ಹೊಸ ಮಾದರಿಯ ಐನೂರು ಕೆ.ಜಿ ಸಾಮರ್ಥ್ಯದ ಜೇನು ಸಂಸ್ಕರಣ ಘಟಕ ನಿರ್ಮಾಣ ಮಾಡಿರುವ ಬಗ್ಗೆ ಮಾಹಿತಿ ನೀಡಿ ೧೯೩೬ ರಲ್ಲಿ ಸ್ಥಾಪನೆಯಾದ ಮೊದಲ ಜೇನು ಮಾರಾಟ ಸಹಕಾರ ಸಂಘÀವಾಗಿದ್ದು ೨೧೭೨ ಸದಸ್ಯರಿದ್ದಾರೆ. ಜೇನು ಮಾರಾಟದ ಪ್ರಮುಖ ಉದ್ದೇಶದೊಂದಿಗೆ ಸಂಘ ಕಾರ್ಯ ನಿರ್ವಹಿಸುತ್ತಿದೆ.

ಕಳೆದ ಹಲವಾರು ವರ್ಷಗಳಿಂದ ವ್ಯಾಪಾರ ಕಡಿಮೆಯಾಗಿದ್ದು ೧ಲಕ್ಷ ಕೆ.ಜಿ ಜೇನು ಮಾರಾಟದಿಂದ ಪ್ರಸ್ತುತ ೪೦ ಸಾವಿರ ಕೆ.ಜಿ ಜೇನು ಮಾರಾಟಕ್ಕೆ ಇಳಿಕೆಯಾಗಿದೆ.

ಸಂಘದಲ್ಲಿ ೪೫ ಲಕ್ಷ ವ್ಯಾಪಾರ ಲಾಭ ಇದ್ದರೂ ಹಳೆಯ ಮತ್ತು ಹೊಸ ಕಟ್ಟಡಕ್ಕೆ ಸವಕಳಿ ಜಮಾ ಆಗಿರುವುದರಿಂದ ಪ್ರಸ್ತುತ ಸಾಲಿನಲ್ಲಿ ೧೩ ಲಕ್ಷ ನಷ್ಟ ಅನುಭವಿಸುತ್ತಿದೆ ಎಂದರು.

ಸಂಘದ ವ್ಯಾಪಾರ ವಹಿವಾಟು ಹೆಚ್ಚಿಸಲು ಹೊಸ ಮಾದರಿಯ ಬಾಟಲಿಯ ಪ್ಯಾಕಿಂಗ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಜೇನು ಮೇಣದ ಹಾಳೆ ತಯಾರಿಸುವ ಯಂತ್ರವನ್ನು ಅಳವಡಿಸಿ ಮೇಣದ ಹಾಳೆ ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಸಂಘದ ಲಾಭ ಹೆಚ್ಚಳ ಮಾಡಲು ಆಭರಣ ಸಾಲ, ಜೇನು ಕೃಷಿಕರಿಗೆ ಕೃಷಿ ನಡೆಸಲು ಸಾಲ, ಪಿಗ್ಮಿಸಾಲ, ಕಾಫಿಪುಡಿ ಘಟಕ ಉತ್ಪಾದನೆ ಮತ್ತು ಮಾರಾಟ, ಸಿಬ್ಬಂದಿಗಳಿಗೆ ಸಾಲ ನೀಡುವ ಹೊಸ ಯೋಜನೆಗಳನ್ನು ರೂಪಿಸಲಾಗಿದೆ. ಸಿಬ್ಬಂದಿಗಳಿಗೆ ಸಾಲ ನೀಡುವ ಯೋಜನೆಯನ್ನು ರೂಪಿಸಲಾಗಿದ್ದು ಸಾ¯ವನ್ನು ಸಂಘದಿAದ ಪಡೆಯಲು ಸೂಕ್ತ ತಿದ್ದುಪಡಿಗೆ ಮಹಾಸಭೆಯಲ್ಲಿ ಮಂಡಿಸಲಾಗಿದೆ ಎಂದು ಮಾಹಿತಿ ನೀಡಿದರು. ಸಂಘವು ಭಾಗಮಂಡಲ ಮತ್ತು ಸಣ್ಣಪುಲಿಕೋಟುವಿನಲ್ಲಿ ನಿವೇಶನ ಹೊಂದಿದ್ದು ಭಾಗಮಂಡಲ ನಿವೇಶನದ ಭೂ ಪರಿವರ್ತನೆಗೆ ಇಲಾಖೆಯೊಂದಿಗೆ ವ್ಯವಹರಿಸಲಾಗುತ್ತಿದೆ. ಸಣ್ಣಪುಲಿಕೋಟಿನ ನಿವೇಶನ ಖಾತೆ ವರ್ಗಾವಣೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈಗಾಗಲೇ ಸರ್ಕಾರ ಭಾಗಮಂಡಲ ಮೇಲ್ಸೇತುವೆ ಕಾಮಗಾರಿಗೆ ಸಂಘದ ೧೦.೭೫ ಸೆಂಟು ಜಾಗವನ್ನು ಪಡೆದುಕೊಂಡಿದ್ದು ಆ ಜಾಗಕ್ಕೆ ಪರಿಹಾರ ಪಡೆಯಲು ಸರ್ಕಾರದೊಂದಿಗೆ ವ್ಯವಹರಿಸಿ ರೂ.೫೧ ಲಕ್ಷ ಮಂಜೂರು ಮಾಡಿದೆ. ಹಳೆಯ ಕಟ್ಟಡವನ್ನು ನಿಗದಿತ ವೆಚ್ಚದಲ್ಲಿ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.

ಸಂಘದ ಹೊಸ ಕಟ್ಟಡದಲ್ಲಿ ಒಟ್ಟು ೧೬ ಲಕ್ಷ ಆದಾಯ ಬಂದಿದ್ದು ನಿರ್ವಹಣಾ ವೆಚ್ಚ ರೂ. ೪.೬ ಲಕ್ಷ ವೆಚ್ಚವಾದ ನಂತರ ೧೧ ಲಕ್ಷ ಆದಾಯ ಬಂದಿದೆ. ಕಟ್ಟಡ ರೂ. ೪.೬೦ ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದು ಬರುತ್ತಿರುವ ಆದಾಯ ಕಡಿಮೆಯಾಗಿದೆ. ಹೊಸ ಮಾದರಿಯ ೫೦೦ ಕೆ.ಜಿ ಸಾಮರ್ಥ್ಯದ ಜೇನು ಸಂಸ್ಕರಣ ಘಟಕ ಅಳವಡಿಸಲಾಗಿದ್ದು ಪ್ರತಿದಿನ ೫೦೦ ಕೆ.ಜಿ ಜೇನು ಉತ್ಪಾದಿಸಬಹುದಾಗಿದೆ. ಮುಂದಿನ ೨ ವರ್ಷದಲ್ಲಿ ಸಂಘವು ಉತ್ತಮ ಲಾಭ ಗಳಿಸುವ ಭರವಸೆ ಇದ್ದು ಜೇನು ಕೃಷಿಕ ಸದಸ್ಯರು ಹೆಚ್ಚು ಜೇನು ಪೆಟ್ಟಿಗೆ ಮತ್ತು ಕೃಷಿ ಉಪಕರಣಗಳನ್ನು ಖರೀದಿಸಿ ಜೇನು ಉತ್ಪಾದನೆಗೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದರು.

-ಪಳೆಯAಡ ಪಾರ್ಥ ಚಿಣ್ಣಪ್ಪ