ವೀರಾಜಪೇಟೆ, ನ. ೨: ಯುವ ಕ್ರಿಕೆಟ್ ಪಟುಗಳಿಗೆ ಉತ್ತೇಜನ ನೀಡುವದರೊಂದಿಗೆ ಕೊಡವ ಸಮಾಜಗಳ ನಡುವೆ ಉತ್ತಮ ಕ್ರೀಡಾ ಬಾಂಧವ್ಯದ ನಿಟ್ಟಿನಲ್ಲಿ ಕೊಡವ ಕ್ರಿಕೆಟ್ ಅಕಾಡೆಮಿ ಹಮ್ಮಿಕೊಂಡಿದ್ದ ಲೆದರ್‌ಬಾಲ್ ಕ್ರಿಕೆಟ್ ಪಂದ್ಯದಲ್ಲಿ ನಾಪೋಕ್ಲು ಕೊಡವ ಸಮಾಜ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿತು.
ಕೊಡವ ಕ್ರಿಕೆಟ್ ಅಕಾಡೆಮಿ ವತಿಯಿಂದ ವೀರಾಜಪೇಟೆ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಸೀಮಿತ ಓವರುಗಳ ಲೆದರ್ ಬಾಲ್ ಪಂದ್ಯಾಟ ನಡೆಯಿತು ಆಕ್ಟೋಬರ್ ತಿಂಗಳ ೧೯ , ೨೦, ೨೧ ರಂದು ಮೂರು ದಿನಗಳು ಪಂದ್ಯಾಟ ಆಯೋಜಿಸಲಾಗಿತ್ತು. ಸತತ ಮಳೆಯಾದ ಕಾರಣ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಾಟಗಳನ್ನು ಮುಂದೂಡಲಾಯಿತು. ಪಂದ್ಯಾವಳಿಯಲ್ಲಿ ಜಿಲ್ಲೆಯ ಒಟ್ಟು ೧೨ ಕೊಡವ ಸಮಾಜ ತಂಡಗಳು ಭಾಗವಹಿಸಿದ್ದವು. ತಾ.೧ ರಂದು ಸೆಮಿಫೈನಲ್ ಮತ್ತು ಫೈನಲ್ ಪಂದ್ಯಾಟ ನಡೆಯಿತು. ಪ್ರಥಮ ಸೆಮಿಫೈನಲ್ ಪಂದ್ಯ ಟಿ.ಶೆಟ್ಟಿಗೇರಿ ಕೊಡವ ಸಮಾಜ ಮತ್ತು ನಾಪೋಕ್ಲು ಕೊಡವ ಸಮಾಜ ತಂಡಗಳ ಮಧ್ಯೆ ಪಂದ್ಯ ನಡೆದು, ಟಿ.ಶೆಟ್ಟಿಗೇರಿ ಕೊಡವ ಸಮಾಜ ೧೦ ಓವರುಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೭೩ ರನ್ ಗಳಿಸಿತು. ಬಳಿಕ ಬ್ಯಾಟಿಂಗ್ ಮಾಡಿದ ನಾಪೋಕ್ಲು ಕೊಡವ ಸಮಾಜ ತಂಡ ೮.೧ ಓವರುಗಳಲ್ಲಿ ೩ ವಿಕೆಟ್ ನಷ್ಟಕ್ಕೆ ೭೫ ರನ್ ಗಳಿಸಿ ಫೈನಲ್ ಪ್ರವೇಶ ಪಡೆಯಿತು. ದ್ವೀತಿಯ ಸೆಮಿಫೈನಲ್ ಪಂದ್ಯ ವೀರಾಜಪೇಟೆ ಕೊಡವ ಸಮಾಜ ಮತ್ತು ಹುದಿಕೇರಿ ಕೊಡವ ಸಮಾಜ ತಂಡಗಳ ಮಧ್ಯೆ ಪಂದ್ಯ ನಡೆಯಿತು. ಮೊದಲಿಗೆ ಬ್ಯಾಟಿಂಗ್ ಮಾಡಿದ ಕೊಡವ ಸಮಾಜ ವೀರಾಜಪೇಟೆ ತಂಡ ೧೦ ಓವರುಗಳಲ್ಲಿ ೦೫ ವಿಕೆಟ್ ನಷ್ಟಕ್ಕೆ ೯೫ ಪಡೆದು ಎದುರಾಳಿ ತಂಡಕ್ಕೆ ೯೬ ರನ್‌ಗಳ ಗುರಿ ನೀಡಿತು. ಬಳಿಕ ಬ್ಯಾಟಿಂಗ್‌ಗೆ ಇಳಿದ ಹುದಿಕೇರಿ ಕೊಡವ ಸಮಾಜ ತಂಡ ನಿಧಾನ ಗತಿಯಲ್ಲಿ ರನ್ ಕಲೆ ಹಾಕಿತು. ಪರಿಣಾಮ ೧೦ ಓವರುಗಳಲ್ಲಿ ತನ್ನ ೦೭ ವಿಕೆಟ್‌ಗಳು ಕಳೆದುಕೊಂಡು ಗುರಿ ತಲುಪುವಲ್ಲಿ ವಿಫಲವಾಗಿ ೮೪ ರನ್ ಪಡೆದುಕೊಂಡು ಸೋಲು ಒಪ್ಪಿಕೊಂಡಿತು. ೪ಐದÀನೇ ಪುಟಕ್ಕೆ ವೀರಾಜಪೇಟೆ ಕೊಡವ ಸಮಾಜ ಫೈನಲ್ ಪಂದ್ಯಕ್ಕೆ ತಲುಪಿತು.
ಫೈನಲ್ ಪಂದ್ಯವು ಆರಂಭದಲ್ಲಿ ರೋಚಕವಾಗಿ ಮುಂದುವರೆದರೂ ಕೊನೆಯಲ್ಲಿ ಏಕಪಕ್ಷೀಯವಾಯಿತು. ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಕಣಕ್ಕಿಳಿದ ವೀರಾಜಪೇಟೆ ಕೊಡವ ಸಮಾಜ ತಂಡ ನಿಧಾನಗತಿಯ ರನ್ ಕಲೆಹಾಕಿತು. ನಿಗದಿತ ೮ ಓವರ್‌ಗಳಲ್ಲಿ ತನ್ನ ೫ ವಿಕೆಟ್ ಕಳೆದುಕೊಂಡು. ೫೮ ರನ್ ಗಳಿಕೆ ಮಾಡಿ ತನ್ನ ಎದುರಾಳಿ ತಂಡಕ್ಕೆ ೫೯ ರನ್‌ಗಳ ಸುಲಭದ ಗುರಿ ನೀಡಿತು. ತಂಡದ ಪರ ಚಿಮ್ಮಣಮಾಡ ಸೋಮಣ್ಣ ೨೩ ರನ್ ಕಲೆಹಾಕಿದರು.
ಆಟ ಮುಂದುವರೆಸಿದ ನಾಪೋಕ್ಲು ಆಟಗಾರರು ೭.೨ ಓವರ್ ಗಳಲ್ಲಿ ತನ್ನ ೦೨ ವಿಕೆಟ್ ನಷ್ಟಕ್ಕೆ ೬೨ ರನ್‌ಗಳ ಗುರಿ ತಲುಪಿ ವಿಜಯದ ಮಾಲೆಗೆ ಕೊರಳೊಡ್ಡಿ ಚಾಂಪಿಯನ್ ಪಟ್ಟ ಅಲಂಕರಿಸಿತು.ತAಡದ ಪರವಾಗಿ ಅಪ್ಪಾರಂಡ ನೆಲ್ ಅವರು ೩೩ ರನ್ ಪಡೆದು ತಂಡಕ್ಕೆ ಅಸರೆಯಾದರು. ಚಾಂಪಿಯನ್ ತಂಡಕ್ಕೆ ೭೫೦೦೦ ರೂ ನಗದು ಮತ್ತು ಟ್ರೋಫಿ, ಪರಾಜಿತ ತಂಡಕ್ಕೆ ೫೦,೦೦೦ ನಗದು ಮತ್ತು ಟ್ರೋಫಿ ನೀಡಿ ಗೌರವಿಸಲಾಯಿತು.
ಉತ್ತಮ ದಾಂಡಿಗ ಮೊಳ್ಳೇರ ಧ್ಯಾನ್, ಉತ್ತಮ ಕ್ಷೇತ್ರ ರಕ್ಷಕ ಕಳಕಂಡ ಭರತ್, ಉತ್ತಮ ಧಾಳಿಕಾರ ಬೊಪ್ಪಂಡ ಪ್ರಖ್ಯಾತ್, ಆಲ್ ರೌಂಡರ್ ಕರ್ತಚ್ಚಿರ ಮಂಜು, ಉತ್ತಮ ಗೂಟ ರಕ್ಷಕ ಮಂಡೇಪAಡ ತಿಮ್ಮಯ್ಯ, ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ನೆರವಂಡ ವರುಣ್ ಅವರುಗಳು ಪಡೆದುಕೊಂಡರು.
ಚೆಕ್ಕೇರ ನವೀನ್, ಆದೇಂಗಡ ಶಾಶ್ವತ್, ಆದೇಂಗಡ ಶೌರ್ಯ, ಕೊಟ್ಟಂಗಡ ಸೂರಜ್ ಮಾದಪ್ಪ, ಅಳಮೇಂಗಡ ಮೋಹನ್, ಕೊಕ್ಕೆಂಗಡ ರಂಜನ್, ಚೌರೀರ ಶರತ್, ಮಾಚಂಗಡ ಸೋಮಣ್ಣ, ಅವರುಗಳು ಪಂದ್ಯಾವಳಿಯಲ್ಲಿ ತೀರ್ಪುಗಾರರಾಗಿ ಕರ್ತವ್ಯ ನಿರ್ವಹಿಸಿದರು. ಕೊಡವ ಕ್ರಿಕೆಟ್ ಅಕಾಡೆಮಿಯ ಪದಾಧಿಕಾರಿಗಳು, ಸದಸ್ಯರು ವಿವಿಧ ಕೊಡವ ಸಮಾಜ ತಂಡಗಳ ಆಟಗಾರರು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
ಕ್ರೀಡಾ ಪ್ರತಿಭೆ ಗುರುತು ಸಂಸ್ಥೆಯ ಉದ್ದೇಶ : ಚೇರಂಡ ಕಿಶನ್
ಜಿಲ್ಲೆಯ ಕೊಡವ ಸಮಾಜಗಳ ಮಧ್ಯೆ ಸಾಮರಸ್ಯ ಕ್ರೀಡಾ ಮನೋಭಾವದ ಬಾಂಧವ್ಯ ವೃದ್ದಿಯಾಗುವ ನಿಟ್ಟಿನಲ್ಲಿ ಕ್ರಿಕೆಟ್ ಅಯೋಜಿಸಲಾಗಿ ಯಶಸ್ಸು ಸಾಧಿಸಿದೆ ಎಂದು ರಿಪಬ್ಲಿಕ್ ಟಿ.ವಿ ನೆಟ್ವರ್ಕ್ ಅದ್ಯಕ್ಷ ಮತ್ತು ಕೊಡವ ಕ್ರಿಕೆಟ್ ಆಕಾಡೆಮಿಯ ಉಪಾಧ್ಯಕ್ಷ ಚೇರಂಡ ಕಿಶನ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಸಮಾರೋಪ ಸಮಾರಂಭಕ್ಕೆ ಆಗಮಿಸಿ ಮಾತನಾಡಿದ ಕಿಶನ್ ಅವರು ಸಂಸ್ಥೆಯು ಹಲವಾರು ವರ್ಷಗಳಿಂದ ಕ್ರಿಕೆಟ್ ಪಂದ್ಯಾಟ ಆಯೋಜಿಸಿಕೊಂಡು ಬರುತ್ತಿದೆ. ಇಲ್ಲಿ ಜನಾಂಗದ ಉದಯೋನ್ಮುಖ ಕ್ರೀಡಾಪಟುಗಳನ್ಮು ಅನ್ವೇಷಣೆ ಮಾಡುವುದಾಗಿದೆ. ಅಲ್ಲದೆ ಪ್ರತಿಭೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಕಾರ್ಯಕ್ಕೆ ಬದ್ದರಾಗಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಗೆ ಮಾತ್ರ ಸೀಮಿತವಾಗಿರುವುದು ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದಾಗಿದೆ. ಕ್ರೀಡಾ ಕಾರ್ಯಕ್ರಮಕ್ಕೆ ದಾನಿಗಳ ನೆರವು ಅವಶ್ಯಕ. ಮುಂದೆಯೂ ಎಲ್ಲರ ಸಹಕಾರ ಇರಲಿ ಎಂದು ಮನವಿ ಮಾಡಿದರು.
ಅಧ್ಯಕ್ಷತೆ ಕೀತಿಯಂಡ ಕಾರ್ಸನ್ ಕಾರ್ಯಪ್ಪ, ಉದ್ಯಮಿ ಅವರೆಮಾದಂಡ ಶರಣ್. ಜೂನಿಯರ್ ಕಾಲೇಜು ಪ್ರಾಂಶುಪಾಲೆ ತಾತಂಡ ಜ್ಯೋತಿ ಪ್ರಕಾಶ್. ವಕೀಲ ಮಾದಂಡ ಪೂವಯ್ಯ ಉಪಸ್ಥಿತರಿದ್ದರು.