ಮಡಿಕೇರಿ, ನ. ೨: ರಾಜ್ಯ ಕ್ರೀಡಾಪ್ರಾಧಿಕಾರದ ಉಪಾಧ್ಯಕ್ಷರಾಗಿ ನೇಮಕಗೊಂಡಿರುವ ಚೆಪ್ಪುಡೀರ ಅರುಣ್ ಮಾಚಯ್ಯ ಈಗಾಗಲೇ ರಾಜ್ಯವ್ಯಾಪಿ ಸಂಚರಿಸಿ ಸ್ಥಳೀಯವಾಗಿ ಕ್ರೀಡಾ ಕ್ಷೇತ್ರದಲ್ಲಿನ ಸಮಸ್ಯೆಗಳು, ಪರಿಹಾರ ಕ್ರಮಗಳ ಬಗ್ಗೆ ಸಂಬAಧಿಸಿದವರೊAದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ.

ಕರಾಟೆ ಪಟುವಾಗಿ ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲದೇ ಅಂತರರಾಷ್ಟಿçÃಯ ಮಟ್ಟದಲ್ಲಿಯೂ ಗುರುತಿಸಿಕೊಂಡಿರುವ ಅರುಣ್ ಮಾಚಯ್ಯ ಅವರಲ್ಲಿ ಕ್ರೀಡಾಪ್ರಾಧಿಕಾರಕ್ಕೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಹಲವಾರು ಚಿಂತನೆಗಳಿವೆ. ಈ ಬಗ್ಗೆ ‘ಶಕ್ತಿ’ಯೊಂದಿಗೆ ಅರುಣ್ ಮಾಹಿತಿ ವಿನಿಮಯ ಮಾಡಿಕೊಂಡಿದ್ದಾರೆ.

ಉಪಾಧ್ಯಕ್ಷರಾದ ಬಳಿಕ ನಿಮ್ಮ ಕಾರ್ಯಕ್ರಮಗಳೇನು?

ಅಧಿಕಾರ ಸ್ವೀಕರಿಸಿ ಈಗಾಗಲೇ ೨೦ ದಿನಗಳಾಗಿದೆ. ಹಾಸನ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಭೇಟಿ ನೀಡಿ ಸ್ಥಳೀಯವಾಗಿ ಸಂಘಸAಸ್ಥೆಗಳ ಪ್ರಮುಖರು ಕ್ರೀಡಾ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ. ಮುಖ್ಯಮಂತ್ರಿಗಳೇ ಪ್ರಾಧಿಕಾರದ ಅಧ್ಯಕ್ಷರಾಗಿರುವುದರಿಂದಾಗಿ ಆರ್ಥಿಕ ಸಮಸ್ಯೆ ಹೆಚ್ಚಾಗಿಲ್ಲ ಎಂಬ ಅನಿಸಿಕೆ ನನ್ನದು. ಹೀಗಾಗಿ ಲಭ್ಯವಾಗುವ ಅನುದಾನದಲ್ಲಿ ರಾಜ್ಯವ್ಯಾಪಿ ಕ್ರೀಡಾ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕೆಂಬ ಚಿಂತನೆಯಿದೆ.

ವಿನೂತನ ಚಿಂತನೆ ಏನಿದೆ?

ನನ್ನ ಮನಸ್ಸಿನ ಚಿಂತನೆಯೊAದರ ಬಗ್ಗೆ ಈಗಾಗಲೇ ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ ಅವರೊಂದಿಗೆ ಚರ್ಚಿಸಿದ್ದೇನೆ. ನೋಡಿ, ರಾಜ್ಯದಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಅನೇಕ ಹಾಸ್ಟೆಲ್‌ಗಳಿದೆ. ಆದರೆ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಪ್ರತಿಭೆ ಬೆಳಕಿಗೆ ತರಲು ಯಾವುದೇ ಕ್ರೀಡಾ ಹಾಸ್ಟೆಲ್‌ಗಳಿಲ್ಲ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಹಿಂದುಳಿದ ವರ್ಗಗಳ ಕ್ರೀಡಾಸಕ್ತ ವಿದ್ಯಾರ್ಥಿಗಳಿಗಾಗಿಯೇ ಪ್ರತ್ಯೇಕ ವಸತಿ ಶಿಕ್ಷಣ ಶಾಲೆ ಅಥವಾ ಹಾಸ್ಟೆಲ್ ತೆರೆಯುವ ಯೋಜನೆ ರೂಪಿಸಲು ಸಲಹೆ ನೀಡಿದ್ದೇನೆ. ಸಚಿವರಿಗೂ ನನ್ನ ಚಿಂತನೆ ಸಂತೋಷ ತಂದಿದೆ. ಮುಂದಿನ ಬಜೆಟ್ ವೇಳೆಗೆ ಈ ಯೋಜನೆ ಜಾರಿಗೊಳ್ಳಬಹುದು. ಈ ಮೂಲಕ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಲ್ಲಿನ ಕ್ರೀಡಾ ಪ್ರತಿಭೆ ಹೊರಹೊಮ್ಮಲು ಸೂಕ್ತ ವೇದಿಕೆ ನೀಡಿದಂತಾಗುತ್ತದೆ. ೨೦೨೬ ನೇ ವಾರ್ಷಿಕ ಬಜೆಟ್‌ನಲ್ಲಿ ವಿಶೇಷವಾಗಿ ಕ್ರೀಡಾಪ್ರಾಧಿಕಾರದಿಂದ ಆಗಬೇಕಾದ ಪ್ರಗತಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಯೋಜನೆ ಜಾರಿಗೆ ಚಿಂತಿಸಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ತೆರಳಿ ಅಲ್ಲಿನ ಅಗತ್ಯಗಳು, ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಮುಖ್ಯಮಂತ್ರಿಗಳಿಗೆ ವರದಿ ನೀಡಲಿದ್ದೇನೆ. ಈ ಮೂಲಕ ಪ್ರಾಧಿಕಾರಕ್ಕೆ ಕಾಯಕಲ್ಪ ನೀಡಲು ಯೋಚಿಸಿದ್ದೇನೆ.

ಅನುಭವ ಪ್ರಾಧಿಕಾರದ ಕಾಯಕಲ್ಪಕ್ಕೆ ನೆರವಾಗುತ್ತದೆಯೇ?

ಖಂಡಿತವಾಗಿಯೂ ಸಹಕಾರಿಯಾಗಲಿದೆ. ಮೊದಲು ರಾಜ್ಯದಲ್ಲಿ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭ ನನ್ನ ಸಲಹೆ ಪಡೆದು ರಾಜ್ಯ ಕ್ರೀಡಾ ನೀತಿ ರೂಪಿಸಲಾಗಿತ್ತು. ಇದರಿಂದ ಕ್ರೀಡಾಕ್ಷೇತ್ರಕ್ಕೆ ಸಾಕಷ್ಟು ಪ್ರಯೋಜನವಾಗಿತ್ತು, ವಿಶೇಷವಾಗಿ ಸರ್ಕಾರಿ ಶಾಲೆಗಳಲ್ಲಿ ೮೦೦ ದೈಹಿಕ ಶಿಕ್ಷಕರ ನೇಮಕಾತಿ ಮತ್ತು ಕ್ರೀಡಾಸಕ್ತ ವಿದ್ಯಾರ್ಥಿಗಳಿಗೆ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಸಹಕಾರಿಯಾಗಿತ್ತು. ಕರಾಟೆಯಲ್ಲಿ ನನ್ನ ಅನುಭವದ ಆಧಾರದಲ್ಲಿ ಕರಾಟೆಯಲ್ಲಿ ಆಸಕ್ತರಾಗಿರುವ ಯುವಪೀಳಿಗೆಗೂ ವಿಶೇಷ ಯೋಜನೆ ರೂಪಿಸಲಾಗುತ್ತದೆ.

ದೇಸಿ ಕ್ರೀಡೆಗಳಿಗೆ ಪ್ರಾಮುಖ್ಯತೆ ದೊರಕೀತೇ?

ಪ್ರಾಧಿಕಾರದ ಮೂಲಕ ರಾಜ್ಯದಲ್ಲಿನ ದೇಸಿ ಕ್ರೀಡೆಗಳಿಗೆ ವಿನೂತನ ಕಾರ್ಯಕ್ರಮಗಳ ಮೂಲಕ ಉತ್ತೇಜನ ನೀಡಲಾಗುತ್ತದೆ. ಮಲ್ಲಕಂಬ, ಕಬಡ್ಡಿ, ಕಂಬಳ ಸೇರಿದಂತೆ ವಿವಿಧ ಗ್ರಾಮೀಣ ೪ಐದÀನೇ ಪುಟಕ್ಕೆ ಕ್ರೀಡೆಗಳನ್ನು ಗುರುತಿಸಿ ಪ್ರತ್ಯೇಕ ಕಾರ್ಯಕ್ರಮಗಳ ಮೂಲಕ ಇಂತಹ ಕ್ರೀಡೆಗಳ ಕ್ರೀಡಾಳುಗಳನ್ನು ಉತ್ತೇಜಿಸಲಾಗುತ್ತದೆ. ದೇಸಿ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವುದೇ ಪ್ರಾಧಿಕಾರದ ಮುಖ್ಯ ಉದ್ದೇಶವಾಗಲಿದೆ. ಯೋಗ ಕೂಡ ರಾಷ್ಟಿçÃಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ಹೀಗಿದ್ದರೂ ಯೋಗ ತರಬೇತಿಯನ್ನು ಈಗಾಗಲೇ ಖಾಸಗಿ ಸಂಸ್ಥೆಗಳು ಬೃಹತ್ ರೀತಿಯಲ್ಲಿ ನಡೆಸುತ್ತಿವೆ. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡುವ ಖಾಸಗಿ ಯೋಗಶಿಕ್ಷಣ ಕೇಂದ್ರಗಳಿಗೆ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ಚಿಂತನೆ ಮಾಡಲಾಗುತ್ತಿದೆ. ಸಾಕಷ್ಟು ಜನಪ್ರಿಯವಾಗಿರುವ ಶಟಲ್ ಬ್ಯಾಡ್ಮಿಂಟನ್‌ನAತಹ ಕ್ರೀಡೆಗೂ ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ದೇಶವಿದೆ.

ಕ್ರೀಡಾ ಜಿಲ್ಲೆಗೆ ನಿಮ್ಮ ನೆರವು?

ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಆಗಿರುವ ನಮ್ಮ ಕೊಡಗಿನ ಎ.ಎಸ್. ಪೊನ್ನಣ್ಣ ಮತ್ತು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಈಗಾಗಲೇ ಅನೇಕ ಕ್ರೀಡಾಯೋಜನೆಗಳನ್ನು ಜಾರಿಗೊಳಿಸುತ್ತಿದ್ದಾರೆ. ಬಾಡಗ ಗ್ರಾಮದಲ್ಲಿ ಪೊನ್ನಣ್ಣ ಅವರ ಪ್ರಯತ್ನದಿಂದಾಗಿ ೧೧.೫೦ ಎಕರೆ ಜಾಗದಲ್ಲಿ ಎಲ್ಲಾ ರೀತಿಯ ಕ್ರೀಡೆಗಳ ಸಂಕೀರ್ಣ ರೂಪುಗೊಳ್ಳಲಿದ್ದು, ಈಗಾಗಲೇ ಕಾಮಗಾರಿ ಭರದಿಂದ ಸಾಗಿದೆ. ಕೊಡಗಿನವರು ಗುರಿಕಾರರಾಗಿಯೂ ಖ್ಯಾತಿ ಪಡೆದಿದ್ದಾರೆ. ಹೀಗಾಗಿ ಹೊರಾಂಗಣ ರೈಫಲ್ ಶೂಟಿಂಗ್ ರೇಂಜ್ ಮತ್ತು ಒಳಾಂಗಣದಲ್ಲಿ ಪಿಸ್ತೂಲ್ ಶೂಟಿಂಗ್ ರೇಂಜ್ ಸೌಲಭ್ಯವನ್ನು ಕೂಡ ಇದೇ ಸಂಕೀರ್ಣದಲ್ಲಿ ಕಲ್ಪಿಸಲಾಗುತ್ತದೆ. ಕೊಡಗು ರೈಫಲ್ ಅಸೋಸಿಯೇಷನ್‌ಗೂ ಕಾಯಕಲ್ಪ ನೀಡಲಾಗುತ್ತದೆ. ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರಾö್ಯಕ್ ರೂಪಿಸಲು ಈಗಾಗಲೇ ಶಾಸಕ ಡಾ. ಮಂತರ್ ಗೌಡ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಕೊಡಗು ಮಾತ್ರವಲ್ಲದೇ ರಾಜ್ಯಾದ್ಯಂತ ಹಿಂದುಳಿದ ವರ್ಗ, ಆದಿವಾಸಿ ಸಮುದಾಯದ ಯುವಪೀಳಿಗೆಯ ಕ್ರೀಡಾ ಪ್ರತಿಭೆಯನ್ನು ವಿಶೇಷವಾಗಿ ಗುರುತಿಸಿ ಅವರನ್ನು ರಾಜ್ಯ, ರಾಷ್ಟçಮಟ್ಟಕ್ಕೆ ಕರೆದೊಯ್ಯುವ ಪ್ರಯತ್ನವನ್ನು ಮಾಡಲಾಗುತ್ತದೆ.

ಬೇರೆ ಬೇರೆ ಜಿಲ್ಲೆಗಳಲ್ಲಿ ಗುರುತಿಸಿದ್ದ ವಿಶೇಷ ಅಂಶಗಳೇನು?

ಈಗಾಗಲೇ ೩ ಜಿಲ್ಲೆಗಳಿಗೆ ಭೇಟಿ ನೀಡಿದಾಗ ಕಂಡುಕೊAಡದ್ದೇನೆAದರೆ, ಸ್ಥಳೀಯವಾಗಿ ಕ್ರೀಡಾಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದ ಅನೇಕ ಸಂಘಸAಸ್ಥೆಗಳಿದ್ದರೂ ಇವುಗಳಲ್ಲಿ ಬಹುತೇಕ ಸಂಸ್ಥೆಗಳು ಕ್ರೀಡಾ ಇಲಾಖೆಯಲ್ಲಿ ನೋಂದಣಿಯೇ ಆಗಿಲ್ಲ. ಹೀಗಾಗಿ ಸರ್ಕಾರದಿಂದ ನಿರೀಕ್ಷಿತ ಆರ್ಥಿಕ ನೆರವು, ಕಾರ್ಯಕ್ರಮಗಳು ಈ ಸಂಸ್ಥೆಗಳಿಗೆ ಲಭಿಸುತ್ತಿಲ್ಲ. ಇಂಥಹ ಸಂಸ್ಥೆಗಳ ಪ್ರತಿನಿಧಿಗಳ ಸಲಹೆ ಪಡೆದು ಖಂಡಿತವಾಗಿಯೂ ಸ್ಥಳೀಯ ಮಟ್ಟದಲ್ಲಿ ಕ್ರೀಡಾ ಕ್ಷೇತ್ರವನ್ನು ಪ್ರಬಲವಾಗಿಸಲು ಸಾಧ್ಯವಿದೆ. ಉದಾಹರಣೆಗೆ - ಮಂಗಳೂರಿನ ಮೊಗವೀರರು ದೈಹಿಕವಾಗಿ ಅತ್ಯಂತ ಬಲಶಾಲಿಗಳಾಗಿದ್ದಾರೆ. ಇವರನ್ನು ಕ್ರೀಡಾರಂಗದಲ್ಲಿ ಪ್ರೋತ್ಸಾಹಿಸಿದ್ದೇ ಆದಲ್ಲಿ ಅನೇಕ ಸಾಧಕರು ಲಭಿಸುವ ಎಲ್ಲಾ ಸಾಧ್ಯತೆಯಿದೆ. ಲಂಬಾಣಿಗಳೂ ಅಷ್ಟೇ. ಹಾಗೇ ಕ್ರೀಡಾತರಬೇತುದಾರರು, ತೀರ್ಪುಗಾರರನ್ನು ಹೊರತುಪಡಿಸಿ ಯಾವುದೇ ಕ್ರೀಡೆಯೂ ಇಲ್ಲ. ಈ ನಿಟ್ಟಿನಲ್ಲಿ ಕ್ರೀಡಾ ತರಬೇತುದಾರರು, ಕ್ರೀಡಾ ತೀರ್ಪುಗಾರರಿಗೆ ಅಗತ್ಯ ನೆರವನ್ನೂ ನೀಡಲು ಮುಂದಿನ ದಿನಗಳಲ್ಲಿ ಅಗತ್ಯ ಕಾರ್ಯಯೋಜನೆ ರೂಪಿಸಲಾಗುತ್ತದೆ. ಹಾಕಿಗೆ ಸಂಬAಧಿಸಿದAತೆ ಬೇರೆ ಬೇರೆ ಅಸೋಸಿಯೇಷನ್‌ಗಳ ಗೊಂದಲ ಇದೆ. ಎಲ್ಲಾ ಅಸೋಸಿಯೇಷನ್‌ಗಳು ಒಂದೇ ವೇದಿಕೆಯಡಿ ಬಂದಲ್ಲಿ ಹಾಕಿ ಪಟುಗಳಿಗೆ ಮತ್ತು ಹಾಕಿ ಕ್ಷೇತ್ರಕ್ಕೆ ಸೂಕ್ತ ನೆರವು ನೀಡಲು ಸಹಕಾರಿಯಾಗುತ್ತದೆ.