ಮಡಿಕೇರಿ, ನ. ೨: ಕೊಡವ ಕುಟುಂಬಗಳ ನಡುವಿನ ೨೬ನೆಯ ವರ್ಷದ ಹಾಕಿ ಉತ್ಸವವನ್ನು ಈ ಬಾರಿ ನಾಪೋಕ್ಲುವಿನಲ್ಲಿ ಆಯೋಜಿಸಲಾಗುತ್ತಿದ್ದು, ಚೇನಂಡ ಕಪ್ ಹಾಕಿಯ ಲಾಂಛನವನ್ನು ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನಾವರಣಗೊಳಿಸಿದರು.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಂದ್ಯಾವಳಿಯ ಲೋಗೋವನ್ನು ಬಿಡುಗಡೆಗೊಳಿಸಿದ ಮುಖ್ಯಮಂತ್ರಿಗಳು ಹಾಕಿ ಉತ್ಸವದ ಬಗ್ಗೆ ತಾವು ಕೇಳಿದ್ದು, ಈ ತನಕ ಆಗಮಿಸಿಲ್ಲ. ಈ ಬಾರಿ ಫೈನಲ್‌ಗೆ ಆಗಮಿಸುವ ಭರವಸೆಯೊಂದಿಗೆ ಶುಭ ಕೋರಿದರು. ಇದಲ್ಲದೆ ಈ ಬಾರಿ ನಡೆಯಲಿರುವ ಹಾಕಿ ಉತ್ಸವಕ್ಕೆ ರೂ. ೧ ಕೋಟಿ ಅನುದಾನ ನೀಡುವುದಾಗಿಯೂ ಪ್ರಕಟಿಸಿದರು. ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮದ ವ್ಯವಸ್ಥೆ ಮಾಡಲಾಗಿತ್ತು.

ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್. ಬೋಸರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ಶಿವರಾಜ್ ತಂಗಡಗಿ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರುಗಳು ಈ ಸಂದರ್ಭ ಹಾಜರಿದ್ದರು. ಹಾಕಿಯಲ್ಲಿ ಕೊಡವರು ವಿಶೇಷ ಸಾಧನೆ ಮಾಡಿದ್ದಾರೆ. ಕೊಡವರು ಅಂದರೆ ಹಾಕಿ. ಹಾಕಿ ಅಂದರೆ ಕೊಡವರು ಎಂಬAತಿದೆ ಎಂದು ಶ್ಲಾಘಿಸಿದ ಮುಖ್ಯಮಂತ್ರಿಗಳು ಅಂತರರಾಷ್ಟಿçÃಯ ಮಟ್ಟದಲ್ಲೂ ಕೊಡಗಿನ ಹಾಕಿ ಪಟುಗಳು ಗುರುತಿಸಿಕೊಂಡಿದ್ದು, ದೇಶಕ್ಕೆ ಕೀರ್ತಿ ತಂದಿದ್ದಾರೆ. ಕೊಡವ ಸಂಸ್ಕೃತಿಯೂ ತನ್ನದೇ ಆದ ಭಿನ್ನತೆ ಉಳಿಸಿಕೊಂಡು ಬಂದಿದ್ದು, ಇದು ಹೆಮ್ಮೆಯ ವಿಚಾರ ಎಂದು ಮುಖ್ಯಮಂತ್ರಿಗಳು ಹೇಳಿದರಲ್ಲದೆ, ಈ ಬಾರಿಯ ಪಂದ್ಯಾಟವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಸಲಹೆಯಿತ್ತರು. ಹಾಕಿ ಉತ್ಸವದ ಕುರಿತಾಗಿ ಶಾಸಕ ಪೊನ್ನಣ್ಣ ಅವರು ಮುಖ್ಯಮಂತ್ರಿಗಳಿಗೆ ವಿವರವಿತ್ತರು.

ಚೇನಂಡ ಕಪ್‌ನ ಕಾರ್ಯಾಧ್ಯಕ್ಷ ದೀನಾ ಪೂವಯ್ಯ ಅವರು ಈ ಬಾರಿಯ ಪಂದ್ಯಾವಳಿಯ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು. ಕೊಡವ ಹಾಕಿ ಅಕಾಡೆಮಿಯ ಪದಾಧಿಕಾರಿಗಳಾದ ಪಾಂಡAಡ ಬೋಪಣ್ಣ, ಚೆಪ್ಪುಡಿರ ಎಸ್. ಪೂಣಚ್ಚ, ಮುದ್ದಂಡ ರಶಿನ್ ಸುಬ್ಬಯ್ಯ, ಮುಕ್ಕಾಟಿರ ಸೋಮಯ್ಯ ಅವರುಗಳು ಈ ಸಂದರ್ಭ ಪಾಲ್ಗೊಂಡಿದ್ದರು. ಚೇನಂಡ ಹಾಕಿ ಉತ್ಸವ ಸಮಿತಿಯ ಅಧ್ಯಕ್ಷ ಕಂಬು ಕರುಂಬಯ್ಯ, ಪದಾಧಿಕಾರಿಗಳಾದ ಮಧು ಮಾದಯ್ಯ, ತಮ್ಮಿ ತಮ್ಮಯ್ಯ, ಜಿಮ್ಮಿ ಅಯ್ಯಣ್ಣ, ಸುರೇಶ್ ನಾಣಯ್ಯ, ಶ್ಯಾಮಲಾ, ಸಚಿನ್ ಅಯ್ಯಪ್ಪ, ನಮೃತಾ ಅಯ್ಯಣ್ಣ ಸೇರಿದಂತೆ ಕುಟುಂಬದ ಸದಸ್ಯರು ಈ ಸಂದರ್ಭ ಹಾಜರಿದ್ದರು.