ಪೊನ್ನಂಪೇಟೆ, ನ. ೧: ರಾಷ್ಟಿçÃಯ ಹಬ್ಬಗಳ ಆಚರಣೆ ಸಮಿತಿ ಹಾಗೂ ಪೊನ್ನಂಪೇಟೆ ತಾಲೂಕು ಆಡಳಿತ ವತಿಯಿಂದ ಪೊನ್ನಂಪೇಟೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿAದ ಆಚರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ ಮುಂಭಾಗದಿAದ ಪ್ರಾರಂಭಗೊAಡ ಭುವನೇಶ್ವರಿ ದೇವಿಯ ರಥದ ಮೆರವಣಿಗೆಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಕೆ. ಎನ್. ಮೋಹನ್ ಕುಮಾರ್ ಚಾಲನೆ ನೀಡಿದರು. ಪೊನ್ನಂಪೇಟೆ ವ್ಯಾಪ್ತಿಯ ವಿವಿಧ ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಶಿಕ್ಷಣ ಇಲಾಖೆ ಸಿಬ್ಬಂದಿ, ಶ್ರೀ ನಂದೀಶ್ವರ ಆಟೋ ಚಾಲಕ ಮಾಲೀಕರ ಸಂಘದ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಕರ್ನಾಟಕ ಪಬ್ಲಿಕ್ ಶಾಲೆ ವರೆಗೆ ನಡೆದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮೆರವಣಿಗೆಯಲ್ಲಿ ಪೊನ್ನಂಪೇಟೆ ಅರಣ್ಯ ಕಾಲೇಜು ವಿದ್ಯಾರ್ಥಿಗಳ ಅರಣ್ಯ ಉಳಿಸಿ ಎಂಬ ಸಂದೇಶ ಸಾರುವ ಸ್ತಬ್ಧಚಿತ್ರ ಹಾಗೂ ಕೆ.ಪಿ.ಎಸ್ ಪ್ರಾಥಮಿಕ ಶಾಲೆಯ ಭುವನೇಶ್ವರಿ ಭಾವಚಿತ್ರವನ್ನು ಹೊತ್ತ ಸ್ತಬ್ಧ ಚಿತ್ರ, ಅಪ್ಪಚ್ಚು ಕವಿ ವಿದ್ಯಾಲಯದ ಸ್ಕೌಟ್ ಅಂಡ್ ಗೈಡ್ಸ್ ಗಮನ ಸೆಳೆಯಿತು.

ನಂತರ ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ, ತಹಶೀಲ್ದಾರ್ ಕೆ. ಎನ್. ಮೋಹನ್ ಕುಮಾರ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಇತ್ತೀಚೆಗೆ ಅನ್ಯ ಭಾಷೆಯ ಪ್ರಭಾವದಿಂದ ಕರ್ನಾಟಕದಲ್ಲಿ ಕನ್ನಡವೇ ಮರೆಯಾಗುತ್ತಿದೆ. ಕನ್ನಡಿಗರಾದ ನಾವು ಅನ್ಯ ಭಾಷೆಯವರ ಜೊತೆ ನಮ್ಮ ಭಾಷೆಯನ್ನು ಬಿಟ್ಟು, ಅವರ ಭಾಷೆಯಲ್ಲಿ ವ್ಯವಹರಿಸುವುದನ್ನು ನಿಲ್ಲಿಸಿ, ಅವರೊಂದಿಗೆ ಕನ್ನಡದಲ್ಲಿಯೇ ಮಾತನಾಡಬೇಕು. ನವಂಬರ್ ತಿಂಗಳಲ್ಲಿ ಮಾತ್ರ ಕನ್ನಡದ ಬಗ್ಗೆ ಕಾಳಜಿ ತೋರದೆ, ಪ್ರತಿ ದಿನ ಕನ್ನಡವನ್ನು ಬಳಸುವ ಮೂಲಕ ಕನ್ನಡ ಬಗ್ಗೆ ಅಭಿಮಾನ ಮೆರೆದಾಗ ಮಾತ್ರ ನಮ್ಮ ಕನ್ನಡ ಭಾಷೆಯ ಬೆಳವಣಿಗೆ ಸಾಧ್ಯ ಎಂದರು.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಪಿ. ಕೇಶವ ಕಾಮತ್ ಮಾತನಾಡಿ, ಕನ್ನಡ ಭಾಷೆ, ನೆಲ, ಜಲ, ನಾಡು, ನುಡಿ, ಸಂಸ್ಕೃತಿ, ಸಂರಕ್ಷಣೆಗೆ ನಾವೆಲ್ಲರೂ ಕಟಿ ಬದ್ಧರಾಗಿರಬೇಕು ಎಂದರು. ಕನ್ನಡ ಸಾಹಿತ್ಯ ಪರಿಷತ್ ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಕೋಳೆರ ದಯಾ ಚಂಗಪ್ಪ ಪ್ರಾಸ್ತವಿಕ ಮಾತನಾಡಿ ಬೆರಳೆಣಿಕೆಯ ಸರ್ಕಾರಿ ಇಲಾಖೆಯ ಅಧಿಕಾರಿಗಳು ಮಾತ್ರ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಮುಂದಿನ ದಿನಗಳಲ್ಲಿ ಇದೇ ರೀತಿ ಮುಂದುವರಿದರೆ ಅಂತಹ ಇಲಾಖೆಯ ಅಧಿಕಾರಿಗಳ ವಿರುದ್ಧ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದರು. ಇದಕ್ಕೆ ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಅಧ್ಯಕ್ಷ ಹಾಗೂ ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಧನಿಗೂಡಿಸಿದರು. ಕಾರ್ಯಕ್ರಮದಲ್ಲಿ ಸಮಾಜ ಸೇವಕಿ ದಾನಿ ಕೈಬುಲಿರ ಪಾರ್ವತಿ ಬೋಪಯ್ಯ, ಶಿಕ್ಷಕರಾದ ಎಂ. ಕೆ. ವೀಣಾ, ಶಾಂತ, ಗ್ರಾಮಾಡಳಿತ ಅಧಿಕಾರಿ ಮಹೇಶ್, ಜಾನುವಾರು ಅಧಿಕಾರಿ ಪಿ. ಟಿ. ಸುರೇಶ್ ಹಾಗೂ ಕುಟ್ಟಂಡ ರವಿ, ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಕನಕ ವಲ್ಲಿ ಎಸ್, ಪ್ರೀತಿ ಹೆಚ್.ಎಲ್, ತೇಜಸ್ವಿನಿ, ರಂಜಿತ, ಮಹಮದ್ ಆಶಿಕ್, ರಾಷ್ಟ್ರಮಟ್ಟದ ಬಾಕ್ಸಿಂಗ್ ಸ್ಪರ್ಧೆಗೆ ಆಯ್ಕೆಯಾದ ಲೇಖಕ್ ಚಂಗಪ್ಪ, ಲಿಖಿತ್ ಚಿಣ್ಣಪ್ಪ, ಲಿರನ್ ಬೋಪಣ್ಣ ಅವರನ್ನು ಸನ್ಮಾನಿಸಲಾಯಿತು.

ಕರ್ನಾಟಕ ಪಬ್ಲಿಕ್ ಶಾಲೆ ಪ್ರಾಥಮಿಕ ವಿಭಾಗ, ಪ್ರೌಢಶಾಲಾ ವಿಭಾಗ, ಸಾಯಿಶಂಕರ ಶಾಲೆ, ಸರ್ವದೈವತಾ ಶಾಲೆ, ಸಂತ ಆಂತೋಣಿ ಶಾಲೆ ಹಾಗೂ ನಿನಾದ ಶಾಲೆಯ ವಿದ್ಯಾರ್ಥಿಗಳಿಂದ ಕನ್ನಡ ನಾಡಿನ ಹಿರಿಮೆಯನ್ನು ಸಾರುವ ನೃತ್ಯಗಳು ಮೂಡಿ ಬಂದವು. ಈ ಸಂದರ್ಭ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಅಪ್ಪಣ್ಣ, ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣೀರ ಹರೀಶ್, ಉಪಾಧ್ಯಕ್ಷ ಆಲಿರ ರಶೀದ್, ಮುಖ್ಯಾಧಿಕಾರಿ ಗೋಪಿ, ಪಶುವೈದ್ಯಧಿಕಾರಿ ಗಿರೀಶ್, ವೀರಾಜಪೇಟೆ ತಾಲೂಕು ಸಿ.ಡಿ.ಪಿ.ಓ ರೇಣುಕಾ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ದೊರೆ ಸ್ವಾಮಿ, ಕ್ಷೇತ್ರ ಸಂಪನ್ಮೂಲ ಅಧಿಕಾರಿ ವಿಶಾಲಾಕ್ಷಿ, ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ನಾಗೇಶ್ ಇನ್ನಿತರರು ಇದ್ದರು. ಬಸವರಾಜ ಬಡಿಗೇರ್ ತಂಡ ನಾಡಗೀತೆ ಹಾಡಿತು. ಕರ್ನಾಟಕ ಪಬ್ಲಿಕ್ ಶಾಲೆ ಉಪಾಪ್ರಾಂಶುಪಾಲ ಎಂ. ಯು. ಚಂಗಪ್ಪ ಸ್ವಾಗತಿಸಿ, ಕನ್ನಡ ಶಿಕ್ಷಕಿ ನಳಿನಿ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ಅನಿತಾ ಪೊಟ್ರಾಡೋ ವಂದಿಸಿದರು.