ಸೋಮವಾರಪೇಟೆ, ನ. ೧: ಕನ್ನಡ ನಾಡು, ನುಡಿ, ನೆಲ, ಜಲ ರಕ್ಷಣೆಯ ಸಂಕಲ್ಪ ತೊಡುವುದರೊಂದಿಗೆ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಕ್ನನಡಿಗರೆಲ್ಲರೂ ಕೈಜೋಡಿಸಬೇಕೆಂದು ತಾಲೂಕು ತಹಶೀಲ್ದಾರ್ ಹಾಗೂ ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರೂ ಆಗಿರುವ ಕೆ.ಕೆ. ಕೃಷ್ಣಮೂರ್ತಿ ಕರೆ ನೀಡಿದರು.
ತಾಲೂಕು ಆಡಳಿತ ಹಾಗೂ ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ೭೦ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟçಧ್ವಜ, ನಾಡಧ್ವಜಾರೋಹಣ ಮಾಡಿದ ತಹಶೀಲ್ದಾರ್ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಸಂದೇಶ ನೀಡಿದರು.
ಹರಿದು ಹಂಚಿಹೋಗಿದ್ದ ಪ್ರಾಂತಗಳನ್ನು ಒಂದುಗೂಡಿಸಿ ಸಮಗ್ರ ಕರ್ನಾಟಕ ರಚನೆಯಾಗಿದ್ದು, ನಾಡಿನ ಸಮಗ್ರತೆ, ಏಕತೆಯ ಸಂರಕ್ಷಣೆ ಎಲ್ಲರ ಹೊಣೆಯಾಗಬೇಕೆಂದು ತಿಳಿಸಿದ ಅವರು, ಕರ್ನಾಟಕ ಇಂದು ಹತ್ತು ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಣುತ್ತಿದೆ. ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರ ಶ್ರೀಮಂತವಾಗಿದೆ. ಕನ್ನಡಕ್ಕೆ ಈವರೆಗೆ ೮ ಜ್ಞಾನಪೀಠ ಪ್ರಶಸ್ತಿಗಳು ಸಂದಿರುವುದು ಭಾಷೆಯ ಶ್ರೀಮಂತಿಕೆಯನ್ನು ಬಿಂಬಿಸುತ್ತದೆ. ಇತರ ಭಾಷೆಗಳನ್ನು ಮಾತನಾಡಿದರೂ ಸಹ ಕನ್ನಡವನ್ನು ಪ್ರೀತಿಸಬೇಕು, ಗೌರವಿಸಬೇಕು. ತಾಯಿ ಭಾಷೆಗೆ ಪ್ರಾಧಾನ್ಯತೆ ನೀಡಬೇಕು.
ಅಸಂಖ್ಯಾತ ಹೋರಾಟಗಾರರು, ಕನ್ನಡ ಪರ ಸಂಘ ಸಂಸ್ಥೆಗಳು, ಕನ್ನಡ ಪತ್ರಿಕೆಗಳು, ಸಂಪಾದಕರು, ಸಾಹಿತಿಗಳ ಅವಿರತ ಶ್ರಮದಿಂದ ಕನ್ನಡ ಸಾರಸ್ವತ ಲೋಕ ಬೆಳೆದುಬಂದಿದೆ ಎಂದರು.
ಮುಖ್ಯ ಭಾಷಣಕಾರರಾಗಿ ಭಾಗಿಯಾಗಿದ್ದ ಹಾನಗಲ್ಲು ಶೆಟ್ಟಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಟಿ.ಹೆಚ್. ಸುಕುಮಾರ್ ಅವರು, ಹಿರಿಯರ ತ್ಯಾಗ ಬಲಿದಾನ, ಹೋರಾಟದಿಂದ ಕನ್ನಡನಾಡು ಉದಯವಾಗಿ ಇಂದಿಗೂ ಸಮೃದ್ಧವಾಗಿದೆ. ಮಹಾನ್ ಚೇತನಗಳನ್ನು ಸಮಾಜ ಸದಾ ಸ್ಮರಿಸಬೇಕು. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ ಮಹಾನ್ ಕವಿಗಳ ಸಾಹಿತ್ಯ ಅರಿತುಕೊಳ್ಳಬೇಕು ಎಂದರು. ಕನ್ನಡವು ಪರಿಶುದ್ಧ ಪದಗಳ ಭಂಡಾರ ಎಂದು ವಿಶ್ಲೇಷಿಸಿದ ಅವರು, ಬದುಕಿನ ಕಲೆಯನ್ನು ಕನ್ನಡ ಸಾಹಿತ್ಯ ಕಲಿಸುತ್ತದೆ. ಕನ್ನಡದ ಉಜ್ವಲ ಸ್ಥಿತಿಗೆ ಎಲ್ಲರೂ ಶ್ರಮಿಸಬೇಕೆಂದರು. ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಶರ್ಮಿಳಾ ರಮೇಶ್, ವಾಸಂತಿ ರವೀಂದ್ರ, ಹೇಮಂತ್ ಪಾರೇರ ಅವರುಗಳನ್ನು ಸನ್ಮಾನಿಸಲಾಯಿತು. ಇದರೊಂದಿಗೆ ಶೈಕ್ಷಣಿಕ ಕ್ಷೇತ್ರದ ಕನ್ನಡ ವಿಭಾಗದಲ್ಲಿ ಸಾಧನೆ ಮಾಡಿದ ನಿಡ್ತ ಶಾಲೆಯ ಪೂರ್ವಿಕ, ಸಂತ ಜೋಸೆಫರ ಶಾಲೆಯ ಲಿಷ್ಮಾ ಡಯಾಸ್, ಕುವೆಂಪು ವಿದ್ಯಾಸಂಸ್ಥೆಯ ಹೆಚ್.ಜೆ. ಸಹನ, ಓಎಲ್ವಿ ಶಾಲೆಯ ಯು.ಎಂ. ಯಶ, ಸರ್ಕಾರಿ ಪ.ಪೂ. ಕಾಲೇಜಿನ ಪಿ.ಸಿ. ದೀಕ್ಷಿತ, ಕುವೆಂಪು ಶಾಲೆಯ ಹಿಮಾನಿ ಅವರುಗಳನ್ನು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪರಮೇಶ್ಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ.ಎಂ. ಕಾಂತರಾಜು, ಪ.ಪಂ. ಅಧ್ಯಕ್ಷೆ ಜಯಂತಿ ಶಿವಕುಮಾರ್, ಉಪಾಧ್ಯಕ್ಷೆ ಮೋಹಿನಿ, ಸದಸ್ಯ ಬಿ.ಆರ್. ಮಹೇಶ್, ಶೀಲಾ ಡಿಸೋಜಾ, ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ.ಎ. ಆದಂ, ಸಮಿತಿ ಸದಸ್ಯ ನಂದಕುಮಾರ್, ಕಸಾಪ ಅಧ್ಯಕ್ಷ ಎಸ್.ಡಿ. ವಿಜೇತ್, ಆರ್ಎಫ್ಓ ಶೈಲೇಂದ್ರ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ, ಪೊಲೀಸ್ ಇನ್ಸ್ಪೆಕ್ಟರ್ ಮುದ್ದುಮಹದೇವ, ಪ.ಪಂ. ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರದೀಪ್, ಅಕ್ಷರ ದಾಸೋಹ ಇಲಾಖೆಯ ಹೇಮಂತ್ಕುಮಾರ್ ಸೇರಿದಂತೆ ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಶಿಕ್ಷಣ ಇಲಾಖೆಯ ಮಂಜೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರದೀಪ್, ಸಮಿತಿಯ ಸದಸ್ಯ ಕವನ್ ಕಾರ್ಯಪ್ಪ ಅವರುಗಳು ಕಾರ್ಯಕ್ರಮ ನಿರ್ವಹಿಸಿದರು. ರಾಜ್ಯೋತ್ಸವ ಅಂಗವಾಗಿ ಪೊಲೀಸ್ ಇಲಾಖೆಯಿಂದ ಧ್ವಜವಂದನೆ, ಗೌರವರಕ್ಷೆ ನೆರವೇರಿತು. ವಿಶ್ವಮಾನವ ಕುವೆಂಪು ಶಾಲೆಯ ವಿದ್ಯಾರ್ಥಿಗಳಿಂದ ರಾಷ್ಟçಗೀತೆ, ಸಂತ ಜೋಸೆಫರ ಶಾಲೆಯ ವಿದ್ಯಾರ್ಥಿಗಳಿಂದ ನಾಡಗೀತೆ, ಸಾಂದೀಪನಿ ಶಾಲಾ ಶಿಕ್ಷಕರಿಂದ ರೈತಗೀತೆಗಳು ಮೂಡಿಬಂದವು. ಇದರೊಂದಿಗೆ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಕನ್ನಡದ ಕಂಪನ್ನು ಪಸರಿಸುವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕನ್ನಡಪರ ಘೋಷಣೆ-ಸ್ತಬ್ಧಚಿತ್ರಗಳ ಮೆರುಗು
ಕನ್ನಡ ರಾಜ್ಯೋತ್ಸವ ಅಂಗವಾಗಿ ಪಟ್ಟಣದಲ್ಲಿ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಕನ್ನಡಪರ ಘೋಷಣೆಗಳನ್ನು ಕೂಗುತ್ತಾ ಭವ್ಯ ಮೆರವಣಿಗೆ ನಡೆಸಿದರು. ಕನ್ನಡ ನಾಡು, ನುಡಿ, ಜಲ, ಸಾಹಿತ್ಯ, ಇತಿಹಾಸ, ಪರಂಪರೆಗಳನ್ನು ಬಿಂಬಿಸುವ ಸ್ತಬ್ಧಚಿತ್ರಗಳು ಗಮನ ಸೆಳೆಯಿತು. ವಿದ್ಯಾರ್ಥಿಗಳು ಸ್ತಬ್ಧಚಿತ್ರದಲ್ಲಿ ಪಾತ್ರಧಾರಿಗಳಾಗಿದ್ದರು. ವಿವಿಧ ವೇಷಭೂಷಣಗಳೊಂದಿಗೆ ಕಂಗೊಳಿಸಿದರು.
ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯಿAದ ೫೪ ವರ್ಷಗಳ ಕಾಲ ಉತ್ಕೃಷ್ಟ ಆಡಳಿತ ನೀಡಿದ ಕರ್ನಾಟಕದ ಕೆಚ್ಚೆದೆಯ ರಾಣಿ ಚೆನ್ನಭೈರಾದೇವಿ, ಪಟ್ಟಣ ಪಂಚಾಯಿತಿಯಿAದ ಭುವನೇಶ್ವರಿ, ತಾ.ಪಂ.ನಿAದ ಸ್ವಚ್ಛತೆಯ ಮಹತ್ವ ಸಾರುವ ಸ್ತಬ್ಧಚಿತ್ರ, ಎಸ್ಜೆಎಂ ಶಾಲೆಯಿಂದ ಚಿತ್ರದುರ್ಗದ ಕಲ್ಲಿನಕೋಟೆ-ಆಡಳಿತ ವೈಭವ, ಓಎಲ್ವಿ ಶಾಲೆಯಿಂದ ಕೊಡಗಿನ ಸಂಸ್ಕೃತಿ ಬಿಂಬಿಸುವ ಕೊಡಗಿನ ಸಿರಿ, ಸಾಂದೀಪನಿ ಶಾಲೆಯಿಂದ ಕರುನಾಡಿನ ಜಾನಪದ ಕಲಾ ವೈಭವ, ಕ್ರಿಯೇಟಿವ್ ಅಕಾಡೆಮಿಯಿಂದ ಮೈಸೂರು ಸಂಸ್ಥಾನದ ಆಡಳಿತ, ಸಂತ ಜೋಸೆಫರ ಶಾಲೆಯಿಂದ ಕನ್ನಡ ನಾಡು ನುಡಿಯ ಶ್ರೀಮಂತಿಕೆ, ಜ್ಞಾನವಿಕಾಸ ಶಾಲೆಯಿಂದ ಸ್ವಚ್ಚ ಕೊಡಗು-ಸುಂದರ ಕೊಡಗು ಸಂದೇಶ ಸಾರುವ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಭಾಗವಹಿಸಿ ಗಮನ ಸೆಳೆದವು.