ಮಡಿಕೇರಿ, ನ. ೨: ನಗರದ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಉತ್ತಾನ ದ್ವಾದಶ ಪ್ರಯುಕ್ತ ತುಳಸಿ ಪೂಜೆ ನೆರವೇರಿಸಲಾಯಿತು.
ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಅರ್ಚಕರಾದ ಸಂತೋಷ್‌ಭಟ್, ಶ್ರೀವತ್ಸ, ಮಂಜುನಾಥ್ ವೈದ್ಯ ಹಾಗೂ ರೋಹನ್ ಮಿಶ್ರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯ ನಡೆಯಿತು.
ದೇವಾಲಯ ಆವರಣದ ಸುತ್ತ ದೀಪ ಪ್ರಜ್ವಲನೆಯನ್ನು ನಡೆಸಲಾಯಿತು. ಇದೇ ಸಂದರ್ಭ ವಿಶೇಷ ದೋಸೆ ಪ್ರಸಾದವನ್ನು ಭಕ್ತಾದಿಗಳಿಗೆ ವಿತರಣೆ ಮಾಡಲಾಯಿತು.
ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚುಮ್ಮಿ ದೇವಯ್ಯ, ಸದಸ್ಯರುಗಳಾದ ಎಂ.ಎA. ನಿರಂಜನ್, ಜಿ. ರಾಜೇಂದ್ರ, ವಿಶಾಲ್‌ನಂದ ಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ತಾ.೫ರಂದು ಸಂಜೆ ೬.೩೦ಕ್ಕೆ ದೇವಾಲಯ ವತಿಯಿಂದ ತೆಪ್ಪೋತ್ಸವ ನಡೆಯಲಿದೆ.