ಮಡಿಕೇರಿ, ನ. ೨: ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಡಳಿತ ಮಂಡಳಿಯ ಎಲ್ಲಾ ಸ್ಥಾನಕ್ಕೂ ಅವಿರೋಧ ಆಯ್ಕೆಗೆ ಹಾದಿ ಸುಗಮಗೊಂಡಿದೆ. ಸಂಘದ ಹಿತಾಸಕ್ತಿಗಾಗಿ ನಿರ್ದೇಶಕ ಸ್ಥಾನದ ಅಭ್ಯರ್ಥಿಗಳಾದ ಸುವರ್ಣ ಮಂಜು, ಕೆ.ಬಿ. ಶಂಷುದ್ದೀನ್ ನಿವೃತ್ತಿ ಆಗಲು ಮುಂದಾಗಿದ್ದಾರೆ.

೧೫ ನಿರ್ದೇಶಕ ಸ್ಥಾನಕ್ಕೆ ಒಟ್ಟು ೧೭ ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದರು. ಇದೀಗ ಇಬ್ಬರು ಅಭ್ಯರ್ಥಿಗಳು ನಿವೃತ್ತಿ ಆಗಲು ಒಪ್ಪಿರುವುದರಿಂದ ಅವಿರೋಧ ಆಯ್ಕೆ ಪ್ರಕ್ರಿಯೆ ಹಾದಿ ಸುಗಮಗೊಂಡಿದೆ.