ಮಡಿಕೇರಿ, ನ. ೨: ಓಮನ್ ರಾಷ್ಟçದಲ್ಲಿ ತಾ.೧೧ರಿಂದ ನಡೆಯಲಿರುವ ಹಾಕಿ ಪಂದ್ಯಾ ವಳಿಯೊಂದರಲ್ಲಿ ಪಾಲ್ಗೊಳ್ಳಲು ಮಡಿಕೇರಿ ಸಾಯಿಯಲ್ಲಿ ತರಬೇತಿ ಪಡೆಯುತ್ತಿರುವ ಫೀ.ಮಾ. ಕಾರ್ಯಪ್ಪ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ತೆರಳುತ್ತಿದ್ದಾರೆ. ಟಿ. ಶೆಟ್ಟಿಗೇರಿ ವಗರೆಯವರಾದ ಚಟ್ಟಂಡ ಕಿರಣ್ ಕಾಳಪ್ಪ ಮತ್ತು ಕೃತಿಕಾ ಕಾವೇರಮ್ಮ ಅವರ ಪುತ್ರಿ ಗೋಲ್ಕೀಪರ್ ಆಗಿರುವ ಲಿಪ್ಸಿಕಾ ಕಾಳಪ್ಪ ಸೇರಿದಂತೆ ಬೆಂಗಳೂರಿನ ಪ್ರಿತಿಕಾ ವಿ.ಬಿ. ಹಾಗೂ ಬೆಳಗಾವಿ ಮೂಲಕ ಸೀಮಾ ಎ. ಪವಾರ್ ಈ ಬಾಲಕಿಯರು. ಇವರುಗಳು ಕೇರಳದ ಕೇರಳ ಸ್ಪೆಸ್ ವಾರಿಯರ್ಸ್ ಕೊಚ್ಚಿ ಮಹಿಳಾ ತಂಡವನ್ನುನ ಪ್ರತಿನಿಧಿಸುತ್ತಿದ್ದಾರೆ.