ಪೊನ್ನಂಪೇಟೆ, ಅ. ೨೯: ಮೌಡ್ಯಗಳನ್ನು ಬಿಟ್ಟು ಅಂಗಾಗ ಮತ್ತು ರಕ್ತದಾನ ಮಾಡುವ ಮೂಲಕ ಸಮಾಜದ ಸ್ವಾಸ್ಥö್ಯ ಕಾಪಾಡಲು ಯುವಕರು ಪ್ರೇರೇಪಿತರಾಗಬೇಕು ಎಂದು ನಿವೃತ್ತ ಸೈನಿಕ, ಅಕ್ಷಯ ಚಾರಿಟೇಬಲ್ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಕೆ.ಕೆ. ಸೋಮಯ್ಯ ಕರೆ ನೀಡಿದರು.

ತಿತಿಮತಿ ವಿವೇಕಾನಂದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಕ್ಷಯ ಚಾರಿಟೇಬಲ್ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೊನ್ನಂಪೇಟೆ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ, ದೇವರಪುರ, ತಿತಿಮತಿ ಸೇವಾ ಭಾರತಿ, ತಿತಿಮತಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸ್ವಾಮಿ ವಿವೇಕಾನಂದ ಫೌಂಡೇಶನ್, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸರಗೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ರಕ್ತದಾನ ಮತ್ತು ಅಂಗಾಗ ದಾನ ಶಿಬಿರದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಿಂಗಳಿಗೆ ನಾಲ್ಕು ಬಾರಿ ರಕ್ತದಾನ ಮತ್ತು ಅಂಗಾAಗ ಶಿಬಿರಗಳನ್ನು ಏರ್ಪಡಿಸಿ ಈ ಸಮಾಜದ ಮಾನವೀಯ ಮೌಲ್ಯವನ್ನು ಎತ್ತಿ ಹಿಡಿಯುವ ಪ್ರಯತ್ನಕ್ಕೆ ಸಿದ್ದರಾಗಿರುವುದಾಗಿ ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯ ಡಾ. ಆನಂದ್ ಮಾತನಾಡಿ, ಅಂಗಾAಗ ದಾನದಿಂದ ಸುಮಾರು ೫೦ ಜನರಿಗೆ ಏಕಕಾಲಕ್ಕೆ ಉಪಯೋಗವಾಗಲಿದೆ. ಮಣ್ಣಿನಲ್ಲಿ ಕರಗಿ ಹೋಗುವ ದೇಹವನ್ನು, ದಾನ ಮಾಡುವ ಮೂಲಕ ಮನುಜ ಸಹಜ ಗುಣದ ಶ್ರೇಷ್ಠತೆಯನ್ನು ಎತ್ತಿ ಹಿಡಿಯಬೇಕು ಎಂದು ಸಲಹೆ ನೀಡಿದರು.

ಕೊಡಗು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯೆ ಪಂಕಜ ಮಾತನಾಡಿ, ರಕ್ತದಾನ ಮತ್ತು ಅಂಗಾAಗಗಳ ದಾನದಿಂದ ಸಮಾಜದಲ್ಲಿ ನಮ್ಮ ಇರುವಿಕೆಯನ್ನು ಪ್ರತಿಷ್ಠಾಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಯಾವುದೇ ಭಯವಿಲ್ಲದೆ ರಕ್ತದಾನ ಮತ್ತು ಅಂಗಾAಗ ದಾನ ಮಾಡುವ ಮೂಲಕ ಯುವಕರಿಗೆ ಪ್ರೇರಣೆಯಾಗಬೇಕು ಎಂದು ಹೇಳಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂಪಿ ಕೇಶವ ಕಾಮತ್ ಮಾತನಾಡಿ, ಮತ್ತೊಬ್ಬರಿಗೆ ಪ್ರಯೋಜನಕಾರಿಯಾಗಿ ಬದುಕುವುದು ಮಾನವೀಯ ಶ್ರೇಷ್ಠ ಗುಣಗಳಲ್ಲಿ ಒಂದು. ಈ ಹಿನ್ನೆಲೆಯಲ್ಲಿ ಅಕ್ಷಯ ಚಾರಿಟೇಬಲ್ ಟ್ರಸ್ಟ್ ಜನೋಪಯೋಗಿ ಕಾರ್ಯ ಕ್ರಮಗಳನ್ನು ಆಯೋಜಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಇದರ ಆಶಯ ಗ್ರಾಮ ಮಟ್ಟದ ಯುವಕರಗಳ ಮನ ಮುಟ್ಟಿದಾಗ ಯಶಸ್ಸು ಸಾಧ್ಯವಾಗುತ್ತದೆ ಎಂದು ಹೇಳಿದರು.

ಪೊನ್ನಂಪೇಟೆ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ಉಪ ಸಭಾಪತಿ ಪಾರುವಂಗಡ ದಿಲನ್ ಚಂಗಪ್ಪ, ಜಿಲ್ಲಾ ರಕ್ತ ನಿಧಿ ಘಟಕದ ಮುಖ್ಯಸ್ಥ ಡಾ. ಕರುಂಬಯ್ಯ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಹೆಚ್.ಕೆ. ಶಾಂತಿ ರಕ್ತದಾನದ ಮತ್ತು ಅಂಗ ಕಸಿ ಸಂಯೋಜಕಿ ಪದ್ಮ ಅಂಗಾAಗಗಳ ದಾನದ ಮಹತ್ವದ ಬಗ್ಗೆ ಮಾತನಾಡಿದರು.

ಶಿಬಿರದಲ್ಲಿ ೪೭ ಯೂನಿಟ್ ರಕ್ತ ಸಂಗ್ರಹವಾಯಿತು. ಸುಮಾರು ೫ ಜನರು ದೇಹ ದಾನ ಮಾಡಿ ಪ್ರೇರಣೆಯಾದರು. ತಿತಿಮತಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪೊನ್ನು, ಸದಸ್ಯ ಅನುಪ್ ಕುಮಾರ್ ಎನ್.ಎನ್., ತಾಲೂಕು ಆರೋಗ್ಯ ಅಧಿಕಾರಿ ಡಾ. ಯತಿರಾಜ್, ತಿತಿಮತಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪ್ರಜ್ವಲ್ ರಾಜರತ್ನಂ, ವನವಾಸಿ ಕಲ್ಯಾಣ ಆಶ್ರಮದ ರಾಜ್ಯಾಧ್ಯಕ್ಷ ಚಕ್ಕೇರ ಮನು ಕಾವೇರಪ್ಪ, ಅಕ್ಷಯ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಕುಸುಮಾವತಿ, ಉಪಾಧ್ಯಕ್ಷೆ ಸುಮಿತ್ರ, ಜಂಟಿ ಕಾರ್ಯದರ್ಶಿ ಭಾರ್ಗವ, ಮಾಧ್ಯಮ ಸಂಪನ್ಮೂಲ ಸಲಹೆಗಾರ ಸಂದೇಶ್ ಜೋಸೆಫ್ ಡಿಸೋಜ ಸೇರಿದಂತೆ ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತರಿದ್ದg