ಶ್ರೀಮಂಗಲ, ಅ. ೨೯: ಪೊನ್ನಂಪೇಟೆ ಕೊಡವ ಸಮಾಜದ ನಿಯೋಗದಿಂದ ಈ ಹಿಂದೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಹಿನ್ನೆಲೆ, ಸ್ವತಃ ಅವರು ಸಮಾಜಕ್ಕೆ ಭೇಟಿ ನೀಡಿ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.

ಈ ಸಂದರ್ಭ ಅಧ್ಯಕ್ಷ ಕಾಳಿಮಾಡ ಎಂ. ಮೋಟಯ್ಯ, ಗೌರವ ಕಾರ್ಯದರ್ಶಿ ಕೋಟೇರ ಕಿಶನ್ ಉತ್ತಪ್ಪ, ಉಪಾಧ್ಯಕ್ಷೆ ಚಿರಿಯಪಂಡ ಇಮ್ಮಿ ಬೋಜಮ್ಮ, ಜಂಟಿ ಕಾರ್ಯದರ್ಶಿ ಅಲೇಮಾಡ ಸುಧೀರ್, ಖಜಾಂಚಿ ಚೆಪ್ಪುಡೀರ ಕಾರ್ಯಪ್ಪ, ನ್ಯಾಯಪೀಠ ಅಧ್ಯಕ್ಷ ಚಿರಿಯಪಂಡ ಉಮೇಶ್ ಉತ್ತಪ್ಪ, ಖಾಯಂ ನಿರ್ದೇಶಕ ಚೆಪ್ಪುಡೀರ ಕಿಟ್ಟು ಅಯ್ಯಪ್ಪ, ನಿರ್ದೇಶಕರಾದ ಕಳ್ಳಿಚಂಡ ಎಸ್. ದೇವಯ್ಯ (ಚಿಪ್ಪ), ಕೊಣಿಯಂಡ ಎಸ್. ಸೋಮಯ್ಯ (ಸಂಜು), ಗುಮ್ಮಟ್ಟಿರ ಜಿ. ಗಂಗಮ್ಮ, ಮೂಕಳೇರ ಕಾವೇರಮ್ಮ (ಕಾವ್ಯ) ಹಾಜರಿದ್ದರು.