ಗೋಣಿಕೊಪ್ಪಲು, ಅ. ೨೯: ಕೊಡವ ಭಾಷಿಕ ಮೂಲ ನಿವಾಸಿ ಗಳಾದ ಕೆಂಬಟ್ಟಿ ಜನಾಂಗದವರ ಒತ್ತೋರ್ಮೆ ಕೂಟವು ವೀರಾಜಪೇಟೆಯ ಅಂಬೇಡ್ಕರ್ ಭವನದಲ್ಲಿ ಯಶಸ್ವಿಯಾಗಿ ಜರುಗಿತು.
ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಕೆಂಬಟ್ಟಿ ಸಮುದಾಯದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಮಾಜದ ಹಿರಿಯರಾದ ಬಿಲ್ಲರಿಕುಟ್ಟಡ ಪ್ರಭು ಅಯ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭಾ ಕಾರ್ಯಕ್ರಮವನ್ನು ಜನಾಂಗದ ಗಣ್ಯರು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಮಾಜದ ಅಧ್ಯಕ್ಷ ಬಿಲ್ಲರಿಕುಟ್ಟಡ ಪ್ರಭು ಅಯ್ಯಪ್ಪ ಮಾತನಾಡಿ, ಕೆಂಬಟ್ಟಿ ಜನಾಂಗ ಹಾಗೂ ಕೊಡಗಿನ ಮಣ್ಣಿನ ನಡುವೆ ಇರುವ ಬಾಂಧವ್ಯ, ಕಾವೇರಿ ಮಾತೆ ಹಾಗೂ ಋಷಿಮುನಿಗಳ ಪ್ರಾಚೀನತೆ, ಇತಿಹಾಸದ ಬಗ್ಗೆ ವಿವರಿಸಿದರು.
ಸಮುದಾಯ ಬಾಂಧವರು ಹಿರಿಯರ ಮಾರ್ಗದರ್ಶನ ಪಡೆಯುವ ಮೂಲಕ ಕೆಂಬಟ್ಟಿ ಜನಾಂಗದ ಆಚಾರ, ವಿಚಾರ, ಪದ್ಧತಿ, ಪರಂಪರೆ, ಉಡುಗೆ - ತೊಡುಗೆಗಳನ್ನು ತಪ್ಪದೆ ಪಾಲನೆ ಮಾಡಬೇಕೆಂದು ಜನತೆಗೆ ಮನವರಿಕೆ ಮಾಡಿದರು. ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರು ಕೆಂಬಟ್ಟಿ ಸಮಾಜಕ್ಕೆ ನೀಡಿರುವ ಸಹಕಾರವನ್ನು ಶ್ಲಾಘಿಸಿದರು. ಜನಗಣತಿ ಸಂದರ್ಭದಲ್ಲಿ ಶಾಸಕರ ವಿಶೇಷ ಆಸಕ್ತಿಯಿಂದ ಕೆಂಬಟ್ಟಿ ಜನಾಂಗದ ನೋಂದಣಿಗೆ ಅವಕಾಶ ಮಾಡಿರುವುದನ್ನು ಸ್ಮರಿಸಿದರು. ಸಮುದಾಯದೊಂದಿಗೆ ಶಾಸಕ ಪೊನ್ನಣ್ಣ ಸದಾ ಇರುವುದಾಗಿ ನೀಡಿರುವ ಭರವಸೆಯನ್ನು ಸಭೆಯ ಮುಂದಿಡಲಾಯಿತು.
ಸಾAಪ್ರದಾಯಿಕ ಉಡುಗೆಯಲ್ಲಿ ಮಹಿಳೆಯರು, ಪುರುಷರು ಜನಾಂಗ ಬಾಂಧವರು ಭಾಗವಹಿಸುವ ಮೂಲಕ ಸಂಘಟಿತರಾಗಿ ಒಗ್ಗಟ್ಟು ಪ್ರದರ್ಶಿಸಿದರು. ಬಾವಲಿ ಗ್ರಾಮದ ಬಿದ್ದಣಕುಟ್ಟಡ ಒಕ್ಕದವರು ತಮ್ಮ ಸಾಂಪ್ರದಾಯಿಕ ಉಡುಪು ಕುಪ್ಯಚೇಲೆ, ಮಂಡೆತುಣಿ, ಚೆಕ್‌ವಸ್ತç, ಕೋರಿಚೌಕ ಧರಿಸಿ ವೀರಾಜಪೇಟೆಯ ಚಿಕ್ಕಪೇಟೆಯಿಂದ ಅಂಬೇಡ್ಕರ್ ಭವನದವರೆಗೆ ಪಾದಯಾತ್ರೆ ಮಾಡುವ ಮೂಲಕ ಜನತೆಗೆ ಸಾಂಪ್ರದಾಯಿಕ ಉಡುಗೆ ತೊಡುಗೆಯ ಅರಿವನ್ನು ಮೂಡಿಸುವಲ್ಲಿ ಗಮನ ಸೆಳೆದರು.
ಕಾರ್ಯಕ್ರಮದ ಅಂಗವಾಗಿ ಸಮಾಜದ ಹಿರಿಯರನ್ನು ಗೌರವಿಸಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸಮಾಜದ ಗಣ್ಯರಾದ ಜೋಕುಟ್ಟಡ ಚಿಮ್ಮ ಅಯ್ಯಪ್ಪ, ಕೂವಲೆಕುಟ್ಟಡ ಗಿರೀಶ್, ಚಿಮ್ಮಿಕುಟ್ಟಡ ನಿತೇಶ್ ಅಯ್ಯಪ್ಪ, ಚಿಮ್ಮಿಕುಟ್ಟಡ ಗಿರೀಶ್ ಬೆಳ್ಳಿಯಪ್ಪ, ಕೊಟ್ಟಕುಟ್ಟಡ ರಾಣಿ ಆನಂದ್, ಬಾಳೆಕುಟ್ಟಡ ಉದಯ ಮಾದಪ್ಪ, ಮೂಳೆಕುಟ್ಟಡ ದಿನೇಶ್ ಪೆಗ್ಗೋಲಿ, ಕೂಪರೆಕುಟ್ಟಡ ಸಾಗರ್ ಪೂವಣ್ಣ, ಚವರೆಕುಟ್ಟಡ ಜೀವನ್ ಪೂವಯ್ಯ, ಚವರೆಕುಟ್ಟಡ ಸುಬ್ರಮಣಿ, ಚೋಕುಟ್ಟಡ ಸಂತೋಷ್ ಉತ್ತಪ್ಪ, ಬಿಲ್ಲರಿಕುಟ್ಟಡ ಮಂಜೇಶ್, ಬಿದ್ದಣಕುಟ್ಟಡ ಕಿರಣ್ ಕಾವೇರಪ್ಪ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉಮ್ಮಣಕುಟ್ಟಡ ಡಾಲಿ, ಉತ್ತುಕುಟ್ಟಡ ಮನು ಬಿದ್ದಪ್ಪ, ಉತ್ತುಕುಟ್ಟಡ ಚರಣ್ ಅಯ್ಯಪ್ಪ, ಮೊಟ್ಟಕುಟ್ಟಡ ಬೋಜಮ್ಮ, ಚಟ್ಟಕುಟ್ಟಡ ಸುಬ್ಬಕ್ಕಿ ಮುತ್ತಣ್ಣ, ಬಿದ್ದಣಕುಟ್ಟಡ ರೋಹಿಣಿ ಪುಷ್ಪ, ಜೋಕುಟ್ಟಡ ವೈಶಾಲಿ ಪ್ರಕಾಶ್, ಚಿಮ್ಮಿಕುಟ್ಟಡ ವಿಲ್ಮ ಅಶೋಕ್ ಸೇರಿದಂತೆ ಅನೇಕ ಪ್ರಮುಖರು ಭಾಗವಹಿಸಿದ್ದರು. ಚಿಮ್ಮಿಕುಟ್ಟಡ ಶಿವಾನಿ, ಕೊಟ್ಟಕುಟ್ಟಡ ಸುಶ್ಮಿತಾ ಪ್ರಾರ್ಥಿಸಿ, ಮೂಳೆಕುಟ್ಟಡ ದಿನೇಶ್ ಪಗ್ಗೋಲಿಯವರು ಸ್ವಾಗತಿಸಿ, ತಂಬಕುಟ್ಟಡ ಅಜಿತ್ ವಂದಿಸಿದರು.
ಪೊಮ್ಮಕ್ಕಡ ಕೂಟ ಅಸ್ತಿತ್ವಕ್ಕೆ
ಸಭೆಯಲ್ಲಿ ಕೆಂಬಟ್ಟಿ ಜನಾಂಗದ ಪೊಮ್ಮಕ್ಕಡ ಕೂಟವನ್ನು ರಚಿಸಲಾಯಿತು.
ಬಿದ್ದಣಕುಟ್ಟಡ ರೋಹಿಣಿ ಪುಷ್ಪ ಅವರನ್ನು ಅಧ್ಯಕ್ಷರಾಗಿ, ಚಿಮ್ಮಿಕುಟ್ಟಡ ವಿಲ್ಮ ಅಶೋಕ್ ಉಪಾಧ್ಯಕ್ಷರಾಗಿ ಹಾಗೂ ಜೋಕುಟ್ಟಡ ವೈಶಾಲಿ ಪ್ರಕಾಶ್ ಅವರನ್ನು ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು.