ಮಡಿಕೇರಿ, ಅ. ೨೯: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಅಂತರರಾಷ್ಟಿçÃಯ ಮಹಾ ಸಮ್ಮೇಳನದ ಪ್ರಚಾರ ಮಹಾ ಸಮ್ಮೇಳನ ಮಡಿಕೇರಿಯ ಗಾಂಧಿ ಮೈದಾನದಲ್ಲಿ ತಾ. ೨೯ ರಂದು ನಡೆಯಲಿರುವ ಹಿನ್ನೆಲೆ ಸಮ್ಮೇಳನದ ಪ್ರಚಾರಾರ್ಥ ಕೊಡಗು ಜಿಲ್ಲಾ ಮಹಲ್ ಸಂಗಮ ಕಾರ್ಯಕ್ರಮ ಪೊನ್ನಂಪೇಟೆಯಲ್ಲಿ ನಡೆಯಿತು.
ಜಮಾಅತ್ ಅಧ್ಯಕ್ಷ ಅಹ್ಮದ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಕೊಡಗು ಜಿಲ್ಲಾ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಹಾಗೂ ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಎಂ ಅಬ್ದುಲ್ಲ ಫೈಝಿ ಉದ್ಘಾಟಿಸಿದರು. ಸಮಸ್ತ ಶತಮಾನಗಳಿಂದ ಎಂಬ ವಿಷಯದ ಬಗ್ಗೆ ಬಶೀರ್ ಹಾಜಿ ಮಾತನಾಡಿದರು. ವೀರಾಜಪೇಟೆ ರೇಂಜ್ ಕಾರ್ಯದರ್ಶಿ ಹನೀಫ್ ಪೈಝಿ ಆದರ್ಶ ಪರಿಶುದ್ದತೆ ಶತಮಾನಗಳಿಂದ ಎಂಬ ವಿಷಯವನ್ನು ಮಂಡಿಸಿದರು. ಖತೀಬರಾದ ಫಾರೂಕ್ ಫೈಝಿ ಪ್ರಾರ್ಥನೆ ನೆರವೇರಿಸಿದರು. ಈ ಸಂದರ್ಭ ಕೊಡಗು ಜಿಲ್ಲಾ ಜಂಇಯ್ಯತುಲ್ ಉಲಮಾ ಉಪಾಧ್ಯಕ್ಷ ಇಸ್ಮಾಯಿಲ್ ಮುಸ್ಲಿಯಾರ್, ಮಹಲ್ ಕಾರ್ಯದರ್ಶಿ ಅಬ್ದುಲ್ ಅಜೀಝ್, ಕೋಶಾಧಿಕಾರಿ ಕುಂಞÁಪ ಹಾಜಿ, ಅಶ್ರಫ್ (ಅಬು), ಅಸ್ಲಂ ಫೈಝಿ ಮಾಪಿಳತ್ತೋಡು ಇದ್ದರು.