ಗೋಣಿಕೊಪ್ಪಲು. ಅ. ೨೯: ಗೋಣಿಕೊಪ್ಪಲುವಿನ ಕಾಪ್ಸ್ ವಿದ್ಯಾ ಸಂಸ್ಥೆಯಲ್ಲಿ ಕರಾಟೆ ಬ್ಲಾö್ಯಕ್ ಬೆಲ್ಟ್ ಗ್ರೇಡಿಂಗ್ ಪರೀಕ್ಷೆಯು ಯಶಸ್ವಿಯಾಗಿ ಜರುಗಿತು. ಗೋಣಿಕೊಪ್ಪಲುವಿನ ಲಯನ್ಸ್ ಶಾಲೆ, ತಿತಿಮತಿಯ ಲ್ಯಾಂಪ್ಸ್ ಆಕಾಡೆಮಿ, ಅಮ್ಮತ್ತಿ ಶಾಲೆ ಹಾಗೂ ಗೋಣಿಕೊಪ್ಪ ಶಾಲೆಯ ೨೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಕರಾಟೆ ಪರೀಕ್ಷೆಯಲ್ಲಿ ಪಾಲ್ಗೊಂಡು ಉತ್ತೀರ್ಣಗೊಂಡು ಸರ್ಟಿಫಿಕೇಟ್ ಹಾಗೂ ಬೆಲ್ಟ್ಗಳನ್ನು ಪಡೆದರು. ಕರಾಟೆ ಕೋಚ್ ಗೋಣಿಕೊಪ್ಪಲುವಿನ ಜಮ್ಮಡ ಜಯ ಜೋಯಪ್ಪ ಮುಂದಾಳತ್ವದಲ್ಲಿ ಪರೀಕ್ಷೆ ಜರುಗಿತು. ಮುಂಜಾನೆಯಿAದ ಸಂಜೆಯವರೆಗೆ ನಡೆದ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡುವ ಮೂಲಕ ತೀರ್ಪುಗಾರರ ಪ್ರಶÀಂಸೆಗೆ ಕಾರಣರಾದರು.
ಬೆಂಗಳೂರಿನ ಕರಾಟೆಪಟುಗಳು ತೀರ್ಪುಗಾರರಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿದರು. ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡುವ ಮೂಲಕ ತೇರ್ಗಡೆ ಹೊಂದಿದರು.
ಕೋಚ್ ಜಮ್ಮಡ ಜಯ ಜೋಯಪ್ಪ ಮಾತನಾಡಿ ಕರಾಟೆ ಕ್ಷೇತ್ರದಲ್ಲಿ ಕೊಡಗಿನ ವಿದ್ಯಾರ್ಥಿಗಳು ಹೆಚ್ಚಾಗಿ ಭಾಗವಹಿಸುತ್ತಿದ್ದಾರೆ. ಇದರಿಂದ ಮಕ್ಕಳಲ್ಲಿ ಹೆಚ್ಚಿನ ಆಸಕ್ತಿ ಮೂಡುತ್ತಿದೆ. ಮುಂದೆ ಹೆಚ್ಚಿನ ಅವಕಾಶಗಳು ವಿದ್ಯಾರ್ಥಿಗಳಿಗೆ ಲಭಿಸಲಿದೆ. ಶಿಕ್ಷಕರ ಮಾರ್ಗದರ್ಶನವನ್ನು ಪಡೆಯುವ ಮೂಲಕ ಉತ್ತಮ ಕರಾಟೆ ಪಟುವಾಗಿ ಹೊರಹೊಮ್ಮಬೇಕು ಎಂದು ಕರೆ ನೀಡಿದರು. ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ವಿತರಿಸಿದ ಕಾಪ್ಸ್ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಡಾ. ರಾಮಚಂದ್ರನ್ ಮಾತನಾಡಿ, ಕರಾಟೆ ಕ್ರೀಡೆಯಿಂದ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೆöÊರ್ಯ ಹೆಚ್ಚಾಗಲಿದೆ. ವಿದ್ಯಾರ್ಥಿನಿಯರು ಹೆಚ್ಚಾಗಿ ಕರಾಟೆಯಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ತಮ್ಮ ಆತ್ಮರಕ್ಷಣೆಗೂ ಸಹಕಾರಿಯಾಗಲಿದೆ. ಈಗಾಗಲೆ ಕರಾಟೆ ಕ್ರೀಡೆಗೆ ಉತ್ತಮ ಉತ್ತೇಜನೆ ಲಭಿಸುತ್ತಿದ್ದು ಇದರ ಪ್ರಯೋಜನವನ್ನು ಎಲ್ಲಾ ವಿದ್ಯಾರ್ಥಿಗಳು ಪಡೆದುಕೊಳ್ಳುವಂತೆ ಕರೆ ನೀಡಿದರು. ಮೈಸೂರಿನ ಕರಾಟೆ ಶಿಕ್ಷಕರಾದ ಮೋಹನ್ ಆಲ್ಬರ್ಟ್ ಅವರು ವಿದ್ಯಾರ್ಥಿಗಳಿಗೆ ಗ್ರೇಡಿಂಗ್ ಪರೀಕ್ಷೆ ನಡೆಸಿದರು.
ಕಾರ್ಯಕ್ರಮದಲ್ಲಿ ಕಾಪ್ಸ್ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ಚೊಟ್ಟಂಗಡ ಸೋಮಯ್ಯ, ತರಬೇತುದಾರ ಮೂಡಗದ್ದೆ ಸುಮನ್, ಕಾರ್ತಿಕ್ ದೇವಯ್ಯ, ಅನಿಲ್ ಆಂಟನಿ, ಪ್ರಸನ್ನ, ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು. ತರಬೇತುದಾರರಾದ ಮೂಡಗಡ್ಡೆ ಸುಮನ್ ಸ್ವಾಗತಿಸಿ, ವಂದಿಸಿದರು. ತೇರ್ಗಡೆ ಹೊಂದಿದ ವಿದ್ಯಾರ್ಥಿಗಳು ಕರಾಟೆ ಗ್ರೇಡಿಂಗ್ ಸರ್ಟಿಫಿಕೇಟ್‌ಗಳನ್ನು ಗಣ್ಯರಿಂದ ಸ್ವೀಕರಿಸಿದರು.