ಕಣಿವೆ, ಅ. ೨೯: ಪ್ರಕೃತಿಯನ್ನು ತಾಯಿಯಂತೆ ಪೂಜಿಸಿ ಆರಾಧಿಸಿದಲ್ಲಿ ಮಾತ್ರ ಜೀವ ವೈವಿಧ್ಯತೆ ಸಂರಕ್ಷಿಸಲು ಸಾಧ್ಯ ಎಂದು ಭಾರತೀಯ ಶಿಕ್ಷಣ ಮಂಡಲ ಅಧ್ಯಕ್ಷ ಬಿ.ಆರ್. ಶಂಕರಾನAದ ಆಶಿಸಿದರು.
ಕೊಡಗು ವಿಶ್ವವಿದ್ಯಾಲಯದ ಹಾರಂಗಿ ಸಭಾಂಗಣದಲ್ಲಿ ಹಸಿರು ಸಂರಕ್ಷಣೆಯಲ್ಲಿ ಕೊಡಗಿನ ಜೀವವೈವಿಧ್ಯ ಎಂಬ ವಿಷಯದ ಕುರಿತು ಹಮ್ಮಿಕೊಂಡಿದ್ದ ರಾಷ್ಟಿçÃಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯನ ಸ್ವಾರ್ಥದಿಂದಾಗಿ ಪ್ರಕೃತಿ ಇಂದು ವಿನಾಶದ ಅಂಚಿನಲ್ಲಿದೆ.
ಅಭಿವೃದ್ಧಿಯ ಹೆಸರಿನಲ್ಲಿ ಪರಿಸರದ ಮೇಲಾಗುತ್ತಿರುವ ಅತ್ಯಾಚಾರದಿಂದಾಗಿ ಪ್ರಕೃತಿ ಮುನಿಯತೊಡಗಿದ್ದು, ಭೂಕಂಪ, ಪ್ರವಾಹದಿಂದ ಮನುಷ್ಯನ ನೆಮ್ಮದಿ ಹಾಳಾಗಿದೆ. ಆದರೂ ಕೂಡ ಪಾಠ ಕಲಿಯದ ಮನುಷ್ಯ ತನ್ನ ವೈಭೋಗದ ಜೀವನಶೈಲಿಗೆ ಪ್ರಕೃತಿಯನ್ನು ಮನಬಂದAತೆ ದುರ್ಬಳಕೆ ಮಾಡತೊಡಗಿದ್ದಾನೆ.
ಕರವÀÀಸ್ತçವನ್ನು ಹೊಂದದೇ ಟಿಷ್ಯು ಸಂಸ್ಕೃತಿಯಿAದಾಗಿ ಹೇರಳವಾಗಿ ಮರಗಳ ಹನನವಾಗುತ್ತಿವೆ.
ದೇವರು ನಮಗೆ ಕೊಟ್ಟಿರುವ ಐದು ಕೈಬೆರಳುಗಳ ಬದಲಾಗಿ ಚಮಚಗಳ (ಸ್ಪೂನ್) ಬಳಕೆಯಿಂದಾಗಿಯೂ ಮರ ಹನನವಾಗುತ್ತಿದೆ. ಹಾಗಾಗಿ ಪ್ರಕೃತಿಯ ಸೂಕ್ಷö್ಮತೆ ಅರಿಯದ ಮನುಷ್ಯ ತಾನು ಮಾಡುವ ಪ್ರತಿಯೊಂದು ಸಣ್ಣ ತಪ್ಪುಗಳಿಂದ ಪ್ರಕೃತಿ ಬಳಲುತ್ತಿದೆ. ಹಾಗಾಗಿ ನಾವುಗಳು ಪ್ರಕೃತಿಯ ಮೇಲೆ ಸೂಕ್ಷö್ಮಸಂವೇದನೆ ಹೊಂದುವ ಮೂಲಕ, ಅದನ್ನು ಮಾತೃ ಸ್ವರೂಪದಲ್ಲಿ ಪೂಜಿಸುವ ಮೂಲಕ ಸಂರಕ್ಷಿಸಬೇಕಿದೆ. ಅಂತರಿಕ್ಷದ ಶಾಂತಿ ಹಾಗೂ ವಿಶ್ವಶಾಂತಿಗಿAತಲೂ ಪ್ರಮುಖವಾಗಿ ಮನುಷ್ಯನಲ್ಲಿ ಆಂತರಿಕ ಶಾಂತಿ ಭಾರತೀಯರ ಕರ್ತವ್ಯವಾಗಬೇಕಿದೆ. ಜನರನ್ನು ಬಲಿ ಪಡೆವ ಮದ್ದು ಗುಂಡುಗಳು, ಬಾಂಬ್‌ಗಳ ಸದ್ದು ಅಡಗಲು ಶಾಂತಿಮAತ್ರ ಎಲ್ಲೆಡೆ ಮೊಳಗಬೇಕಿದೆ ಎಂದು ಶಂಕರಾನAದ್ ಅಭಿಪ್ರಾಯಿಸಿದರು.
ಅಧ್ಯಕ್ಷತೆ ವಹಿಸಿದ್ದ ಕೊಡಗು ವಿವಿ ಕುಲಪತಿ ಡಾ. ಅಶೋಕ್ ಸಂಗಪ್ಪ ಆಲೂರ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಇರುವ ಪಶ್ಚಿಮ ಘಟ್ಟಗಳ ಸಾಲುಗಳು ಸೇರಿದಂತೆ ಕೊಡಗಿನ ಜನರು ಬೆಳೆಸಿ ಸಂರಕ್ಷಿಸಿರುವ ಹಸಿರಿನ ಸಮೃದ್ದ ಜೀವ ವೈವಿಧ್ಯವು ಅರ್ಧ ಭಾರತ ದೇಶಕ್ಕೆ ಶುದ್ಧ ಗಾಳಿಯನ್ನು ನೀಡಲು ಸಾಧ್ಯವಾಗುತ್ತಿದೆ.
ಕೊಡಗಿನ ಪರಿಸರ, ಜೀವ ಜಲದ ಸಂರಕ್ಷಣೆಯಲ್ಲಿ ಕೊಡಗಿನ ಜನರಲ್ಲಿ ಇರುವ ಸದ್ಭಾವನೆ, ಸತ್ಪಾತ್ರಗಳು ಇಡೀ ಮನುಕುಲಕ್ಕೆ ಮಾದರಿಯಾಗಬೇಕಿದೆ ಎಂದು ಕರೆ ನೀಡಿದರು.
ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಚೇರ್ಮನ್ ಡಾ. ಎ.ಹೆಚ್. ರಾಜಾಸಾಬ್ ಮಾತನಾಡಿ, ಕೊಡಗಿನಲ್ಲಿ ಇರುವ ಸಮೃದ್ಧವಾದ ಜೀವ ವೈವಿಧ್ಯತೆಗೆ ಇಲ್ಲಿನ ದೇವರಕಾಡುಗಳು ಹಾಗೂ ಔಷಧೀಯ ಗುಣಗಳನ್ನು ಹೊಂದಿದ ಗಿಡಮರಗಳ ಪಾತ್ರ ಮುಖ್ಯವಾದುದು. ಪ್ರಕೃತಿಗೆ ಕಂಟಕ ಎದುರಾಗುವ ಲಕ್ಷಣಗಳು ಗೋಚರವಾದಾಗ ಪೂರ್ವಜರು ಪ್ರಕೃತಿಯನ್ನು ಸಂರಕ್ಷಿಸಲು ಅರಣ್ಯಕ್ಕೆ ದೇವರ ಕಾಡುಗಳ ಸ್ವರೂಪ ಕೊಟ್ಟಿರುವುದು ಮಾತ್ರ ವಿಶೇಷವಾದ ಸಂಗತಿಯಾಗಿದೆ ಎಂದರು. ಕೊಡಗು ವಿ.ವಿ. ವಿಶೇಷಾಧಿಕಾರಿ ಡಾ. ರವಿಶಂಕರ್ ಪ್ರಾಸ್ತಾವಿಕ ಮಾತನಾಡಿ, ಕೊಡಗಿನ ಪೂರ್ವಜರು ತಮ್ಮ ಉಡುಪು, ಆಚಾರ ವಿಚಾರ ಹಾಗೂ ಸಂಸ್ಕೃತಿಗಳ ಭಾಗವಾಗಿ ಅರಣ್ಯವನ್ನೂ ಕೂಡ ಪಾಲನೆ ಮಾಡಿದ್ದರ ಫಲವಾಗಿ ಇಂದು ಕೊಡಗಿನಲ್ಲಿ ಜೀವ ವೈವಿಧ್ಯ ಹೇರಳವಾಗಿದೆ. ಆದಾಗ್ಯೂ ಮುಂದಿನ ಪೀಳಿಗೆಗೆ ಇದನ್ನು ಜತನವಾಗಿ ಒಯ್ಯಬೇಕಾದ್ದು ಇಂದಿನ ಎಲ್ಲರ ಆದ್ಯ ಕರ್ತವ್ಯವಾಗಬೇಕೆಂದರು.
ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ಆರ್.ಗAಗಾಧರ, ಹಾವೇರಿ ವಿವಿ ಕುಲಪತಿ ಡಾ. ಸುರೇಶ್ ಹೆಚ್. ಜಂಗಮಶೆಟ್ಟಿ, ಹಾಸನ ವಿ.ವಿ. ಕುಲಪತಿ ಡಾ. ಸಿ. ತರೀಕೆರೆ ತಾರನಾಥ್, ಬಾಗಲಕೊಟೆ ವಿ.ವಿ. ಕುಲಪತಿ ಡಾ. ಆನಂದ ದೇಶಪಾಂಡೆ, ಬೆಂಗಳೂರಿನ ಮೆಟೀರಿಯಲ್ ಇಂಜಿನಿಯರಿAಗ್ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಪ್ರೊ. ಪ್ರವೀಣ್ ಸಿ.ರಾಮಮೂರ್ತಿ, ಪ್ರೊ.ಚಂದ್ರಶೇಖರ್ ಬಿರಾದಾರ್, ಐ.ಐ.ಎಸ್ಸಿ. ಜಂಟಿ ನಿರ್ದೇಶಕ ಡಾ. ಕೆ. ವೀರಣ್ಣ, ಸುಬ್ಬಾರೆಡ್ಡಿ, ವಿ.ಆರ್.ಸೌಮಿತ್ರಿ, ಗಂಗಾ ಅಂಕದ್ ಜೀವ ವೈವಿಧ್ಯತೆಯ ಕುರಿತಾಗಿ ವಿಶೇಷ ಮಾಹಿತಿ ನೀಡಿದರು. ಕೊಡಗು ವಿವಿ ವಿಶೇಷಾಧಿಕಾರಿ ಡಾ. ರವಿಶಂಕರ್ ಸ್ವಾಗತಿಸಿದರು. ಉಪನ್ಯಾಸಕ ಸುದರ್ಶನ ನಿರೂಪಿಸಿದರು. ಕುಲಸಚಿವ ಪ್ರೊ. ಎಂ. ಸುರೇಶ್ ವಂದಿಸಿದರು.
 
						