ಗೋಣಿಕೊಪ್ಪ ವರದಿ, ಅ. ೨೫ : ಹಾಕಿಕೂರ್ಗ್ ವತಿಯಿಂದ ನಡೆಯುತ್ತಿರುವ ಹಾಕಿ ಲೀಗ್ ಟೂರ್ನಿಯಲ್ಲಿ ಡ್ರಾ ಫಲಿತಾಂಶ ರೋಚಕ ಅನುಭವ ನೀಡಿತು.
ಮಲ್ಮ (ಎ) ತಂಡವು ಟಾಟಾ ಕಾಫಿ ತಂಡವನ್ನು ಸೋಲಿಸಿತು. ಮಲ್ಮ ಆಟಗಾರ ಅಭಿನ್ ೨ ಗೋಲು ಹೊಡೆದರು. ಗೌತಂ, ಅಯ್ಯಪ್ಪ, ಪ್ರಿನ್ಸ್ ತಲಾ ಒಂದೊAದು ಗೋಲು ಬಾರಿಸಿದರು. ಟಾಟಾ ಕಾಫಿ ಆಟಗಾರ ಕಾರ್ಯಪ್ಪ ಏಕೈಕ ಗೋಲು ಹೊಡೆದರು. ಮಲ್ಮ ೫, ಟಾಟಾ ಕಾಫಿ ೧ ಗೋಲು ದಾಖಲಿಸಿತು.
ಕ್ಗ್ಗಟ್ಟ್ನಾಡ್ ಫ್ಲೆöÊಯಿಂಗ್ ಎಲ್ಬೋಸ್ ಹಾಗೂ ಅಂಜಿಗೇರಿ ನಾಡ್ ತಂಡಗಳ ನಡುವಿನ ಪಂದ್ಯ ಡ್ರಾದಲ್ಲಿ ಅಂತ್ಯವಾಯಿತು. ಉಭಯ ತಂಡಗಳು ತಲಾ ೨ ಗೋಲು ದಾಖಲಿಸಿ, ರೋಚಕತೆ ಮೂಡಿಸಿದವು. ಕ್ಗ್ಗಟ್ಟ್ನಾಡ್ ಪರ ಸಂದೇಶ್, ದರ್ಶನ್, ಅಂಜಿಗೇರಿ ಪರ ಆದರ್ಶ್, ಸಚಿನ್ ಒಂದೊAದು ಗೋಲು ಹೊಡೆದರು.
ಹಾತೂರು ವನಭದ್ರಕಾಳಿ ಹಾಗೂ ಕೋಕೇರಿ ನೀಲಿಯತ್ ತಂಡಗಳ ಪಂದ್ಯ ಡ್ರಾ ಫಲಿತಾಂಶ ನೀಡಿತು. ವನ ಭಧ್ರಕಾಳಿ ಆಟಗಾರ ಅಪ್ಪಯ್ಯ, ಕೋಕೇರಿ ತಂಡದ ಚಮನ್ ಗೋಲು ಬಾರಿಸಿದರು.
ಬೊಳಿಯೂರ್ ಸ್ಪೋರ್ಟ್ಸ್ ಕ್ಲಬ್ ಹಾಗೂ ಬಲಂಬೇರಿ ಮಹಾದೇವ ತಂಡಗಳ ಪಂದ್ಯ ಡ್ರಾದಲ್ಲಿ ಅಂತ್ಯಗೊAಡಿತು. ಬೊಳಿಯೂರ್ ಪರ ಆಟಗಾರ ಬಿನ್ನಿ ಬೆಳ್ಯಪ್ಪ, ಬಲಂಬೇರಿ ಪರ ಅಪ್ಪಚ್ಚು ಗೋಲು ಹೊಡೆದರು.
ಸೋಮವಾರಪೇಟೆ ಡಾಲ್ಫಿನ್ಸ್ ತಂಡವು ಮೂರ್ನಾಡು ಬ್ಲೇಜ್ ವಿರುದ್ಧ ಜಯಿಸಿತು. ಸೋಮವಾರಪೇಟೆ ಆಟಗಾರ ಗುರುಪ್ರಸಾದ್, ರಿಶಿಕ್ ತಲಾ ಒಂದೊAದು ಗೋಲು ಗಳಿಸಿದರು
ಬೇರಳಿನಾಡ್ ತಂಡಕ್ಕೆ ಕುತ್ತ್ನಾಡ್ ವಿರುದ್ಧ ಜಯ ಸಿಕ್ಕಿತು. ಬೇರಳಿನಾಡ್ ಪರ ವಿಪಿನ್ ಏಕೈಕ ಗೋಲು ಹೊಡೆದು ಗೆಲುವಿನ ರೂವಾರಿಯಾದರು.