ಸುAಟಿಕೊಪ್ಪ, ಅ. ೨೫: ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಕಳೆದ ೧ ವಾರದಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಕಾಫಿ ಬೆಳೆಗಾರರು ಆತಂಕಗೊAಡಿದ್ದಾರೆ. ಮಳೆಯಿಂದ ಕಾಫಿ ಹಾಗೂ ಕರಿಮೆಣಸು ಗಿಡಗಳಲ್ಲಿ ಶೀತ ಹೆಚ್ಚಾಗಿ ಫಸಲು ನೆಲಕಚ್ಚುತ್ತಿದೆ. ಈಗಾಗಲೇ ಬಹುತೇಕ ಗ್ರಾಮಗಳಲ್ಲಿ ಕಾಫಿ ಹಣ್ಣು ಕೊಯ್ಲಿಗೆ ಬಂದಿದ್ದು, ಕೆಲ ತೋಟಗಳಲ್ಲಿ ಕೊಯ್ಲು ಮಾಡಿದ ಕಾಫಿಯನ್ನು ಒಣಗಿಸಲು ತೊಂದರೆ ಉಂಟಾಗಿದೆ. ಅಲ್ಲದೆ ಫಸಲು ಬಿಟ್ಟ ಕಾಫಿ ಗಿಡಗಳಲ್ಲಿ ಮಳೆ ಜಾಸ್ತಿಯಾಗಿ ಕೊಳೆರೋಗ ಕಾಣತೊಡಗಿದೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದ ಸ್ಥಿತಿ ಉಂಟಾಗಿದೆ. ಸುಂಟಿಕೊಪ್ಪ ವ್ಯಾಪ್ತಿಯ ನಾಕೂರು ಶಿರಂಗಾಲ, ಕಾನ್ಬೈಲ್, ಹರದೂರು, ಕೆದಕಲ್, ಅತ್ತೂರು, ನಲ್ಲೂರು, ಕಂಬಿಬಾಣೆ ವ್ಯಾಪ್ತಿಯಲ್ಲಿ ರೈತಾಪಿ ವರ್ಗ ಪ್ರತೀ ದಿನ ಸುರಿಯುತ್ತಿರುವ ಮಳೆಯಿಂದ ಆತಂಕಕ್ಕೆ ಒಳಗಾಗಿದ್ದಾರೆ.