ಮಡಿಕೇರಿ, ಅ. ೨೪: ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯಿಂದ ೨೦೨೫-೨೬ನೇ ಸಾಲಿನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದ ಜಿಲ್ಲೆಯ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುವುದು. ಅರ್ಜಿದಾರರ ವಯಸ್ಸು ೧೮ ವರ್ಷ ಅಥವಾ ಅದರ ಮೇಲ್ಪಟ್ಟರಿಬೇಕು. ಅರ್ಜಿದಾರರು ಹಾಗೂ ಅವರ ಪೋಷಕರಲ್ಲಿ ಕನಿಷ್ಟ ಒಬ್ಬರಾದರೂ ನಿಧಿಯ ಸದಸ್ಯರಾಗಿರಬೇಕು. ಅರ್ಜಿದಾರರ ವಾರ್ಷಿಕ ಆದಾಯ ೨ ಲಕ್ಷದೊಳಗಿರಬೇಕು. ಅರ್ಜಿ ಸಲ್ಲಿಸಲು ನವೆಂಬರ್ ೧೦ ಕಡೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಸಲು ಬಿ.ಕೆ. ಜಗದೀಶ್ ಸೋಮಯಾಗಿ ೯೪೪೮೨೦೬೬೮೮, ಸುಧೀರ್ ಮಕ್ಕಿ ೯೪೮೩೩೩೩೦೦೭, ಎ.ವಿ. ಮಂಜುನಾಥ್ ೭೩೩೮೫೭೮೦೪೫, ಕೆ.ಎಸ್. ರಾಜಶೇಖರ್ ೯೪೪೮೦೭೪೨೨೬ ಅವರುಗಳನ್ನು ಸಂಪರ್ಕಿಸುವAತೆ ಪ್ರಕಟಣೆ ತಿಳಿಸಿದೆ.