ಮಡಿಕೇರಿ, ಅ. ೨೪: ರಾಜ್ಯಾದ್ಯಂತ ನಡೆಯುತ್ತಿರುವ ಶೈಕ್ಷಣಿಕ ಹಾಗೂ ಸಾಮಾಜಿಕ ಸಮೀಕ್ಷೆಯು ಕೊಡಗು ಜಿಲ್ಲೆಯಲ್ಲಿ ಹಲವಾರು ಸಮಸ್ಯೆಗಳ ನಡುವೆ ನಡೆದು ಶೇ.೮೭.೪೮ ರಷ್ಟು ಗುರಿ ಸಾಧನೆ ಆಗಿದೆ. ಗುಡ್ಡಗಾಡು ಪ್ರದೇಶದಲ್ಲಿ ಕ್ಲಿಷ್ಟಕರ ಸಂಚಾರದ ನಡುವೆ ಕಾಡಾನೆಗಳಿಂದ ದಾಳಿಗೆ ಒಳಗಾಗಿ, ಸಾಕುನಾಯಿಗಳಿಂದ ಕಚ್ಚಿಕೊಂಡರೂ ಸಮೀಕ್ಷಾದಾರರು ಜಿಲ್ಲೆಯಲ್ಲಿ ಹರಸಾಹಸ ಪಟ್ಟು ಸಮೀಕ್ಷೆ ನಡೆಸಿದ್ದು, ಜಿಲ್ಲೆಯಾದ್ಯಂತ ಅಂದಾಜಿಲಾಗಿರುವ ಒಟ್ಟು ೫ ಲಕ್ಷ ೬೨ ಸಾವಿರ ೯೬೯ ಜನಸಂಖ್ಯೆಯಲ್ಲಿ ಒಟ್ಟು ೪ ಲಕ್ಷ ೯೨ ಸಾವಿರ ೫೨೨ ಮಂದಿಯ ಸಮೀಕ್ಷೆ ಪೂರ್ಣಗೊಂಡಿದ್ದಾಗಿ ಪ್ರಕಟಣೆ ತಿಳಿಸಿದೆ. ಈ ಮೂಲಕ ಶೇ.೮೭.೪೬ ಸಾಧನೆ ಆಗಿದೆ.

ಕುಶಾಲನಗರ ತಾಲೂಕಿನಲ್ಲಿ ೩೧,೩೪೯ ಮನೆಗಳ ೧,೦೮,೫೯೭ ಮಂದಿಯ ಸಮೀಕ್ಷೆ ನಡೆಸಲಾಗಿದೆ. ಮಡಿಕೇರಿ ತಾಲೂಕಿನ ೩೬,೦೭೬ ಮನೆಗಳ ೧,೨೭,೯೫೬ ಮಂದಿ, ಪೊನ್ನಂಪೇಟೆ ತಾಲೂಕಿನ ೨೧,೩೩೩ ಮನೆಗಳ ೬೪,೧೧೦ ಮಂದಿ, ಸೋಮವಾರಪೇಟೆ ತಾಲೂಕಿನ ೨೯,೯೪೦ ಮನೆಗಳ ೯೮,೬೩೮ ಮಂದಿ ಹಾಗೂ ವೀರಾಜಪೇಟೆ ತಾಲೂಕಿನ ೨೯,೧೩೩ ಮನೆಗಳ ೯೩,೨೨೧ ಜನರ ಸಮೀಕ್ಷೆಯನ್ನು ಪೂರೈಸಲಾಗಿದೆ. ಒಟ್ಟು ಜಿಲ್ಲೆಯ ೧,೪೭,೮೩೧ ನಿವಾಸಗಳ ೪,೯೨,೫೨೨ ಸಾರ್ವಜನಿಕರ ಸಮೀಕ್ಷೆ ಇದುವರೆಗೆ ಪೂರೈಸಲಾಗಿದೆ.