ಕುಶಾಲನಗರ, ಅ. ೨೩: ನದಿ ತೀರಗಳು ಸಂಸ್ಕೃತಿಗಳ ಉಗಮ ಸ್ಥಾನ ನಮ್ಮ ದೇಶದಲ್ಲಿ ನದಿಗೆ ತಾಯಿ ದೇವತೆಯ ಸ್ಥಾನ ನೀಡಿ ಪೂಜಿಸಲಾಗುತ್ತಿದೆ. ದಕ್ಷಿಣ ಭಾರತದ ಕೋಟ್ಯಂತರ ಸಂಖ್ಯೆಯ ಜನ ಜಾನುವಾರುಗಳಿಗೆ ಜೀವ ಜಲವಾಗಿರುವ ಜೀವನದಿ ಕಾವೇರಿ ಇದೀಗ ಹಲವು ಕಾರಣಗಳಿಂದ ಸೊರಗುತ್ತಿದೆ. ಕಾವೇರಿಯ ಉಪನದಿಗಳು ಸೇರಿದಂತೆ ಜಲಮೂಲಗಳು ಮಾಯವಾಗುವುದರೊಂದಿಗೆ ಪ್ರಮುಖ ನದಿಗಳು ತಮ್ಮ ಮೂಲ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿವೆ, ನದಿ ತನ್ನ ಒಡಲಿನಲ್ಲಿ ಬಹುತೇಕ ಕಲುಷಿತೆಯನ್ನು ಹೊತ್ತು ತನ್ನ ತವರೂರಿನಿಂದಲೇ ಹರಿಯುತ್ತಿರುವ ದೃಶ್ಯ ಎದುರಾಗುತ್ತಿದೆ.

ನಗರೀಕರಣದ ಹೆಸರಿನಲ್ಲಿ ಕೆರೆಗಳು ನದಿ ಕಟ್ಟೆಗಳು ಒತ್ತುವರಿಯಾಗುವುದರೊಂದಿಗೆ ತಮ್ಮ ಮೂಲ ಸ್ವರೂಪವನ್ನು ಕಳೆದುಕೊಳ್ಳುವ ಭೀತಿಯಲ್ಲಿದೆ.

ಈ ಸಂಬAಧ ಜನರಿಗೆ ನದಿ ಸಂರಕ್ಷಣೆ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸಲು ಮೂಲ ಕಾವೇರಿಯಿಂದ ನದಿ ಸಮುದ್ರ ಸಂಗಮವಾಗುವ ತಮಿಳುನಾಡಿನ ಪೂಂಪ್‌ಹಾರ್ ತನಕ ಪ್ರತಿ ವರ್ಷ ಒಂದು ತಿಂಗಳ ಕಾಲ ಸಾಗಿ ಜನರಿಗೆ ನದಿ ಸಂರಕ್ಷಣೆಯ ಬಗ್ಗೆ ಅರಿವು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ದಕ್ಷಿಣ ಭಾರತದ ಅಖಿಲ ಭಾರತ ಸನ್ಯಾಸಿ ಸಂಘದ ಸಾಧುಸಂತರ ಆಶ್ರಯದಲ್ಲಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳೊAದಿಗೆ ಕಳೆದ ೧೫ ವರ್ಷಗಳಿಂದ ಸ್ವಚ್ಛ ಕಾವೇರಿಗಾಗಿ ಕಾವೇರಿ ಜಾಗೃತಿ ತೀರ್ಥ ಯಾತ್ರೆ ನಡೆದಿದ್ದು ಜನರಲ್ಲಿ ನದಿ ಬಗ್ಗೆ ಕಾಳಜಿ ಅರಿವು ಮೂಡಿಸುವಲ್ಲಿ ಬಹುತೇಕ ಯಶಸ್ಸು ಕಂಡಿದೆ ಎನ್ನಬಹುದು.

ದಕ್ಷಿಣ ಭಾರತದ ವಿವಿಧ ರಾಜ್ಯಗಳ ನೂರಕ್ಕೂ ಅಧಿಕ ಸಾಧು ಸಂತರು ಅಖಿಲ ಭಾರತ ಸನ್ಯಾಸಿ ಸಂಘದ ಸ್ಥಾಪಕ ಅಧ್ಯಕ್ಷ ಶ್ರೀ ರಮಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಶ್ರೀರಂಗಪಟ್ಟಣದ ಶಂಕರ ಮಠದ ಶ್ರೀ ಗಣೇಶ ಸ್ವರೂಪಾನಂದ ಗಿರಿ ಸ್ವಾಮೀಜಿ ಮತ್ತು ಶಾಶ್ವತಿ ಧಾರ್ಮಿಕ ಕ್ರಿಯಾ ಕೇಂದ್ರದ ಮುಖ್ಯಸ್ಥರಾದ ಡಾ ಭಾನುಪ್ರಕಾಶ್ ಶರ್ಮ ಅವರ ಮಾರ್ಗದರ್ಶನದೊಂದಿಗೆ ಮೂಲ ಕಾವೇರಿ ತಲಕಾವೇರಿಯಿಂದ ಪವಿತ್ರ ತೀರ್ಥವನ್ನು ರಥದಲ್ಲಿ ಒಯ್ಯುವ ಮೂಲಕ ಪೂಜೆ ಸಲ್ಲಿಸಿ ನದಿ ಹರಿಯುವ ನೂರಾರು ಪಟ್ಟಣ ಗ್ರಾಮಗಳಲ್ಲಿ ಜನರಲ್ಲಿ ಕಾವೇರಿ ನದಿ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಿರಂತರವಾಗಿ ಕಳೆದ ೧೫ ವರ್ಷಗಳಿಂದ ನಡೆಯುತ್ತಿದೆ. ಕಾವೇರಿ ನದಿ ಸ್ವಚ್ಛತಾ ಆಂದೋಲನ ನೇತೃತ್ವದಲ್ಲಿ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆ ಹರಿಯುವ ಕಾವೇರಿ ನದಿ ತಟಗಳಲ್ಲಿ ಧಾರ್ಮಿಕ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ನದಿ ಪ್ರಕೃತಿಯ ಆರಾಧನೆ ನಿರಂತರವಾಗಿ ನಡೆಯುತ್ತಿದೆ.

ತಲಕಾವೇರಿಯಿಂದ ಕಾವೇರಿ ತೀರ್ಥವನ್ನು ಹೊತ್ತ ರಥದಲ್ಲಿ ಕೊಂಡೊಯ್ದು ವಿಶೇಷ ಪೂಜಾ ವಿಧಿ ವಿಧಾನಗಳೊಂದಿಗೆ ತಮಿಳುನಾಡಿನ ಪೂಂಪ್ ಹಾರ್ ಬಳಿ ಕಾವೇರಿ ಬಂಗಾಳಕೊಲ್ಲಿ ಸಮುದ್ರ ಸೇರುವ ಸಂಗಮದಲ್ಲಿ ವಿಸರ್ಜನೆ ಮಾಡುವ ಮೂಲಕ ನಾಡಿನ ಏಳಿಗೆ, ಶಾಂತಿ ಮತ್ತು ನದಿ ನೀರಿನ ಸಂರಕ್ಷಣೆ ಮಾಡುವ ಬಗ್ಗೆ ಸಾಮೂಹಿಕವಾಗಿ ಪ್ರಾರ್ಥಿಸುವ ಕಾರ್ಯ ನಡೆದಿದೆ.

ಇದರೊಂದಿಗೆ ೨೦೧೬ರಲ್ಲಿ ಶ್ರೀ ರಮಾನಂದ ಸ್ವಾಮೀಜಿ ನೇತೃತ್ವದಲ್ಲಿ ತಲಕಾವೇರಿಯಿಂದ ಅರವತ್ತು ದಿನಗಳ ಕಾಲ ಅವಧಿಯಲ್ಲಿ ಕಾವೇರಿ ನದಿ ತಟದ ವ್ಯಾಪ್ತಿಯಲ್ಲಿ ಪಾದಯಾತ್ರೆ ಮಾಡುವ ಮೂಲಕ ನದಿಯ ವಾಸ್ತವ ಅಂಶ ಅರಿಯುವ ಕೆಲಸ ಕೂಡ ನಡೆದಿತ್ತು.

ಎಲ್ಲಿ ನೋಡಿದರೂ ನದಿ ಸಂಪೂರ್ಣ ತ್ಯಾಜ್ಯ ಮಯ ಆಗುತ್ತಿರುವುದನ್ನು ಕಂಡು ಈ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಬಳಿ ನಿಯೋಗ ತೆರಳಿ ನದಿ ಸಂರಕ್ಷಣೆಯ ಬಗ್ಗೆ ಯೋಜನೆಗಳನ್ನು ರೂಪಿಸುವಂತೆ ಸರ್ಕಾರಗಳಿಗೆ ಮನವಿ ಸಲ್ಲಿಸಲಾಗಿತ್ತು. ಮೂಲ ಕಾವೇರಿ ಕೊಡಗು ಜಿಲ್ಲೆಯ ನದಿ ತಟದ ಗ್ರಾಮಗಳಿಗೆ ಸರಕಾರಗಳ ಮೂಲಕ ವಿಶೇಷ ಅನುದಾನ ಕಲ್ಪಿಸಿ ಯೋಜನೆಗಳನ್ನು ರೂಪಿಸುವಂತೆ ಮನವಿ ಸಲ್ಲಿಸಲಾಗಿತ್ತು. ಕಳೆದ ೧೫ ವರ್ಷಗಳ ಅವಧಿಯಲ್ಲಿ ಇದುವರೆಗೆ ಏಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ನದಿ ಸಂರಕ್ಷಣೆಗೆ ವಿಶೇಷ ಕಾನೂನು ರೂಪಿಸುವಂತೆ ನದಿಗೆ ಜೀವಂತ ಸ್ಥಾನಮಾನ ಕಲ್ಪಿಸುವುದು, ಉತ್ತರದ ನಮಾಮಿ ಗಂಗೆ ಮಾದರಿಯಲ್ಲಿ ಕಾವೇರಿಗೆ ನಮಾಮಿ ಕಾವೇರಿ ಯೋಜನೆಗಳನ್ನು ಕೈಗೊಳ್ಳುವುದು.

ವಿಶೇಷವಾಗಿ ನದಿ ಸಂರಕ್ಷಣೆಯ ನಿಟ್ಟಿನಲ್ಲಿ ರಿವರ್ ಪೊಲೀಸ್ ವಿಭಾಗ ತೆರೆಯುವುದು ಮುಂತಾದ ಮನವಿ ಸಲ್ಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಸರಕಾರ ನದಿ ಸಂರಕ್ಷಣೆಯ ಬಗ್ಗೆ ಹಲವು ಯೋಜನೆಗಳನ್ನು ರೂಪಿಸಿದ್ದು ಇನ್ನಷ್ಟೇ ಅನುಷ್ಠಾನಗೊಳ್ಳಬೇಕಾಗಿದೆ. ಇದೆಲ್ಲ ಬೆಳವಣಿಗೆಗೆ ಸ್ಪಂದಿಸಿದ ರಾಜ್ಯ ಸರ್ಕಾರ ಕಾವೇರಿಗೆ ಸರಕಾರದ ಮೂಲಕ ಕಳೆದ ಎರಡು ವರ್ಷಗಳಿಂದ ಆರತಿ ಬೆಳಗುವ ಕಾರ್ಯಕ್ರಮ ಕೂಡ ರೂಪಿಸಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಕುಶಾಲನಗರದಲ್ಲಿ ಕಳೆದ ೨೦೧೦ ರಿಂದ ಪ್ರತಿ ತಿಂಗಳ ಹುಣ್ಣಿಮೆಯಂದು ಮತ್ತೆ ಕಾವೇರಿ ಮಹಾ ಆರತಿ ಬಳಗದ ಹೆಸರಿನಲ್ಲಿ ವಿವಿಧ ಸಂಘ ಸಂಸ್ಥೆಗಳ ಪಾಲ್ಗೊಳ್ಳುವಿಕೆ ಮೂಲಕ ಕಾವೇರಿ ಮಹಾ ಆರತಿ ಕಾರ್ಯಕ್ರಮ ನಡೆದುಕೊಂಡು ಬರುತ್ತಿದೆ. ಇದೇ ಅವಧಿಯಲ್ಲಿ ನದಿ ತಟಗಳ ಉದ್ದಕ್ಕೂ ೫ ಸಾವಿರಕ್ಕೂ ಅಧಿಕ ಮರ ಗಿಡಗಳನ್ನು ಬೆಳೆಸಲಾಗಿದೆ. ಆ ಮೂಲಕ ನದಿ ಸಂರಕ್ಷಣೆಯ ಜಾಗೃತಿ ಮೂಡಿಸುವ ಪ್ರಯತ್ನ ನಡೆದಿದೆ. ಇದೀಗ ಕುಶಾಲನಗರದಲ್ಲಿ ನಿರಂತರ ೧೭೮ ತಿಂಗಳ ಕಾಲ ನದಿಗೆ ಆರತಿ ಕಾರ್ಯಕ್ರಮ ಜರುಗಿದೆ. ೨೦೨೨ ರಲ್ಲಿ ರಾಜ್ಯ ಸರ್ಕಾರದ ಮೂಲಕ ಕುಶಾಲನಗರದಲ್ಲಿ ಕಾವೇರಿ ಉತ್ಸವ ನಡೆಸುವ ಮೂಲಕ ನದಿ ಸಂರಕ್ಷಣೆಯ ಬಗ್ಗೆ ಜನರಿಗೆ ನದಿಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಲಾಗಿತ್ತು

ಭಾಗಮಂಡಲದಿAದ ಜಿಲ್ಲೆಯಲ್ಲಿ ಕಾವೇರಿ ನದಿ ಹರಿಯುವ ಭಾಗಗಳಾದ ಅಯ್ಯಂಗೇರಿ ಬಲಮುರಿ ನಾಪೋಕ್ಲು ಗುಹ್ಯ, ನೆಲ್ಲಿಹುದಿಕೇರಿ, ಕರಡಿಗೋಡು, ಗೂಡುಗದ್ದೆ, ದುಬಾರೆ, ಗುಡ್ಡೆಹೊಸೂರು ಮಾದಾಪಟ್ಟಣ ಬೈಚನಹಳ್ಳಿ ಕುಶಾಲನಗರ ಕೊಪ್ಪ ಮುಳ್ಳುಸೋಗೆ ಕೂಡುಮಂಗಳೂರು ಕಣಿವೆ, ಮತ್ತಿತರ ಗ್ರಾಮಗಳ ವ್ಯಾಪ್ತಿಯಲ್ಲಿ ಸೇರಿದಂತೆ ಜಿಲ್ಲೆಯಲ್ಲಿ ಸುಮಾರು ೨೦ಕ್ಕೂ ಅಧಿಕ ಸ್ಥಳಗಳಲ್ಲಿ ಹುಣ್ಣಿಮೆಯ ದಿನ ಪ್ರತಿ ತಿಂಗಳು ಏಕಕಾಲದಲ್ಲಿ ಆರತಿ ಬೆಳಗುವ ಮೂಲಕ ನದಿಗೆ ಪೂಜೆ ಸಲ್ಲಿಸಲಾಗುತ್ತಿದೆ ಆ ಮೂಲಕ ಜನರಲ್ಲಿ ನದಿಯ ಬಗ್ಗೆ ಶ್ರದ್ಧೆ ಜಾಗೃತಿ ಮೂಡಿಸಲಾಗುತ್ತಿದೆ.

ಇದೇ ರೀತಿ ಕೊಣನೂರು ರಾಮನಾಥಪುರ ಶ್ರೀರಂಗಪಟ್ಟಣ ಮುಂದುವರಿದು ತಮಿಳುನಾಡಿನ ವಿವಿಧ ಭಾಗಗಳಲ್ಲಿ ನದಿ ಸಮುದ್ರ