ನಾಪೋಕ್ಲು, ಅ. ೨೩: ಸಮೀಪದ ಕೊಣಂಜಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಳ್ಳಡ, ಪೆಬ್ಬಾಟಂಡ ಕುಟುಂಬಸ್ಥರ ಮನೆಯ ರಸ್ತೆ ದುರಸ್ತಿಯನ್ನು ಗ್ರಾಮಸ್ಥರು ಶ್ರಮದಾನದ ಮೂಲಕ ಮಾಡಿದರು.
ಪಾರಾಣೆ ಬೇತ್ರಿ ಸಂಪರ್ಕ ರಸ್ತೆಯಿಂದ ಮಳ್ಳಡ, ಪೆಬ್ಬಾಟಂಡ ಕುಟುಂಬಸ್ಥರ ಮನೆಗಾಗಿ ಬಲಮುರಿಯ ಕೂಡು ರಸ್ತೆಯನ್ನು ಸಂಪರ್ಕಿಸುವ ರಸ್ತೆ ದುರಸ್ತಿ ಕಾಣದೆ ತೀವ್ರ ಹದಗೆಟ್ಟು ಇತ್ತ ಯಾರು ಗಮನ ಹರಿಸದ ಕಾರಣ ಗ್ರಾಮಸ್ಥರು ಶ್ರಮದಾನದ ಮೂಲಕ ದುರಸ್ತಿ ಮಾಡಿದರು ಶ್ರಮದಾನದಲ್ಲಿ ಗ್ರಾಮಸ್ಥರಾದ ಬೈರಿಕುಂದಿರ ಅಯ್ಯಪ್ಪ, ಸೋಮಯ್ಯ, ಮನು, ವಿನು ಮಳ್ಳಡ ಚಿಣ್ಣಪ್ಪ, ಸುಬ್ಬಯ್ಯ, ತಿಮ್ಮಯ್ಯ, ಗಣೇಶ, ಪೊನ್ನಚನ ಸೋಮಣ್ಣ, ಹರೀಶ್, ರೋಹನ್ ಇತರರು ಪಾಲ್ಗೊಂಡಿದ್ದರು.