ಕೂಡಿಗೆ, ಅ. ೨೩: ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತದ ಆಡಳಿತ ಮಂಡಳಿಯ ಚುನಾವಣೆಗೆ ಒಟ್ಟು ೩೫ ನಾಮಪತ್ರಗಳು ವಿವಿಧ ವಿಭಾಗದಿಂದ ಸಲ್ಲಿಕೆಯಾಗಿವೆ.
೧೨ ಸ್ಥಾನಗಳಿಗೆ ಒಟ್ಟು ೩೫ ನಾಮಪತ್ರಗಳು ಸಲ್ಲಿಕೆಯಾಗಿದ್ದು, ಇಂದು ಕೊನೆಯ ದಿನವಾದುದರಿಂದ ವಿವಿಧ ಪಕ್ಷದ ಮುಖಂಡರ ಸಮ್ಮುಖದಲ್ಲಿ ಅಭ್ಯರ್ಥಿಗಳ ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಮುಖ್ಯ ಚುನಾವಣಾ ಅಧಿಕಾರಿ ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ತಿಳಿಸಿದ್ದಾರೆ.
ನಾಮಪತ್ರಗಳ ಪರಿಶೀಲನೆ ತಾ. ೨೪ರಂದು ನಡೆಯಲಿದ್ದು, ಅಭ್ಯರ್ಥಿಗಳು ನಾಮಪತ್ರಗಳ ಹಿಂತೆಗೆದುಕೊಳ್ಳಲು ತಾ. ೨೫ ಕೊನೆಯ ದಿನವಾಗಿದೆ. ಚುನಾವಣೆ ತಾ. ೩೧ ರಂದು ಬೆಳಿಗ್ಗೆ ೯ ಗಂಟೆಯಿAದ ಸಂಜೆ ೪ ಗಂಟೆಯವರೆಗೆ ಸಂಘದ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ನಡೆಯಲಿದೆ. ಚುನಾವಣೆಯ ನಂತರ ಮತ ಎಣಿಕೆಯ ಪ್ರಕ್ರಿಯೆ ಆರಂಭಗೊಳ್ಳುವುದು ಎಂದು ಕಿರಣ್ ಗೌರಯ್ಯ ಮಾಹಿತಿ ನೀಡಿದ್ದಾರೆ.