ಬೆಂಗಳೂರು, ಅ. ೨೩: ಮಡಿವಾಳ ಲಾಡ್ಜ್ನಲ್ಲಿ ಕಳೆದ ವಾರ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಪುತ್ತೂರು ಯುವಕ ತಕ್ಷಿತ್(೨೦) ನ ಪ್ರಾಥಮಿಕ ಮರಣೋತ್ತರ ಪರೀಕ್ಷೆಯ ವರದಿ ಪೊಲೀಸರಿಗೆ ನೀಡಲಾಗಿದೆ. ಈ ವರದಿಯ ಪ್ರಕಾರ ಯುವಕನ ಸಾವು ಕಿಡ್ನಿ ವೈಫಲ್ಯದಿಂದ ಸಂಭವಿಸಿದೆ ಎಂದು ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ.
ವೀರಾಜಪೇಟೆ ಮೂಲದ ಯುವತಿ ಪಾಯಲ್ (೨೦) (ಹೆಸರು ಬದಲಿಸಲಾಗಿದೆ) ಹಾಗೂ ಪುತ್ತೂರು ಮೂಲದ ಯುವಕ ತಕ್ಷಿತ್ ಕಳೆದ ಅಕ್ಟೋಬರ್ ೯ ರಂದು ಮಡಿವಾಳದ ಗ್ರಾö್ಯಂಡ್ ಚಾಯ್ಸ್ ಲಾಡ್ಜ್ನ ರೂಂ ನಲ್ಲಿ ಒಂದು ವಾರ ತಂಗಿದ್ದರು. ಅಕ್ಟೋಬರ್ ೧೭ ರಂದು ಪಾಯಲ್ ಮದ್ಯಾಹ್ನ ಊಟ ಮುಗಿಸಿ ರೂಂ ನಿಂದ ಬಸ್‌ನಲ್ಲಿ ಕೊಡಗಿಗೆ ಬಂದಿದ್ದಾಳೆ. ಆದರೆ ಆಕೆ ಹೊರಹೋದ ನಂತರ ರಾತ್ರಿ ರೂಂ ನಲ್ಲಿ ತಕ್ಷಿತ್ ಮೃತಪಟ್ಟಿರುವುದು ಕಂಡು ಬಂದಿತ್ತು.
ಈ ಸಾವಿನ ಹಿಂದೆ ಪಾಯಲ್ ಕೈವಾಡ ಇರಬಹುದು ಎಂಬ ಸಂದೇಹ ದಟ್ಟವಾಗಿತ್ತು. ಈ ಬಗ್ಗೆ ಪೋಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತಿದ್ದರು. ಇದೀಗ ಮರಣೋತ್ತರ ವರದಿ ಬಂದಿರುವ ಹಿನ್ನೆಲೆ ಪಾಯಲ್ ನಿರ್ಧೋಶಿ ಎಂದು ಹೇಳಲಾಗಿದೆ.
ವೈದ್ಯಕೀಯ ತಜ್ಞರ ಪ್ರಕಾರ ಯುವಕ ತಕ್ಷಿತ್‌ಗೆ ಲಿವರ್ ಸಮಸ್ಯೆ ಹಾಗೂ ಅಸ್ತಮಾ ಖಾಯಿಲೆ ಇದ್ದದ್ದು ತಿಳಿದು ಬಂದಿದೆ. ಇದೇ ಕಾರಣಕ್ಕೆ ಕಿಡ್ನಿ ವೈಫಲ್ಯ ಆಗಿರಬಹುದೆಂದು ಶಂಕಿಸಲಾಗಿದೆ.
ಮಡಿವಾಳ ಪೊಲೀಸ್ ಮೂಲಗಳ ಪ್ರಕಾರ ತಕ್ಷಿತ್ ಹಾಗೂ ಯುವತಿ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇವರಿಬ್ಬರೂ ಕಾಲೇಜಿನಿಂದ ಡ್ರಾಪ್ ಔಟ್ ಆಗಿದ್ದು ಸೆಪ್ಟೆಂಬರ್ ೨೭ ರಂದೇ ಬೆಂಗಳೂರಿಗೆ ಬಂದು ಬೇರೆ ಬೇರೆ ಲಾಡ್ಜ್ನಲ್ಲಿ ವಾಸವಿದ್ದರು. ಘಟನೆ ನಡೆಯುವುದಕ್ಕೂ ೮ ದಿನ ಮೊದಲು ಮಡಿವಾಳದ ಲಾಡ್ಜ್ಗೆ ಶಿಫ್ಟ್ ಆಗಿದ್ದರು ಎಂದು ತಿಳಿದುಬಂದಿದೆ. ಪೊಲೀಸರು ಯುವಕನ ಜೊತೆಯಲ್ಲಿದ್ದ ಪಾಯಲ್‌ಳ ಹೇಳಿಕೆಯನ್ನೂ ದಾಖಲಿಸಿಕೊಂಡಿದ್ದಾರೆ. ಯುವಕನ ಪೋಷಕರು ಯುವತಿಯ ಮೇಲೆ ಯಾವುದೇ ಅನುಮಾನ ವ್ಯಕ್ತಪಡಿಸಿಲ್ಲ.
ಪೊಲೀಸರು ಕೆಲ ಮಾದರಿ ಸಂಗ್ರಹಿಸಿ ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದಾರೆ. ಎಫ್‌ಎಸ್‌ಎಲ್ ವರದಿ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಘಟನೆ ಸಂಬAಧ ಮಡಿವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.