ಶ್ರೀಮಂಗಲ, ಅ. ೨೩: ಕೊಡವರ ಬದುಕು ಅಂದು ಹೇಗಿತ್ತು, ಇಂದು ಹೇಗಿದೆ, ಮುಂದೆ ಹೇಗಿರಬೇಕು ಎಂಬುದನ್ನು ಮಕ್ಕಳು ತಿಳಿದುಕೊಳ್ಳಬೇಕು. ತಂದೆ ತಾಯಿಯರು ಮಕ್ಕಳಿಗೆ ಅದÀನ್ನು ತಿಳಿಸಿಕೊಡಬೇಕೆಂದು ಗೋಣಿಕೊಪ್ಪ ಕಾಪ್ಸ್ ವಿದ್ಯಾಸಂಸ್ಥೆಯ ಟ್ರಸ್ಟಿ ಮಾಚಿಮಾಡ ರಾಜ ತಿಮ್ಮಯ್ಯ ಕಿವಿಮಾತು ಹೇಳಿದರು.
ಟಿ.ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ನಡೆಯುತ್ತಿರುವ ೯ನೆ ವರ್ಷದ ಚಂಗ್ರಾAದಿ ಪತ್ತಲೋದಿ ೫ನೇ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಅಂದು ನಮ್ಮ ತಂದೆ ತಾಯಿಯರ ಕಾಲದಲ್ಲಿದ್ದ ಕಷ್ಟ ಈಗ ಇಲ್ಲ. ಇಂದು ಎಲ್ಲಾ ವಿಧದ ಸೌಕರ್ಯಗಳಿವೆ.
ನಮ್ಮ ಜನಾಂಗದವರು ಎಲ್ಲಾ ಕ್ಷೇತ್ರಗಳಲ್ಲೂ ಅತ್ಯುತ್ತಮ ಸಾಧನೆ ಮಾಡುತ್ತಿದ್ದಾರೆ. ಆದರೆ ಭವಿಷ್ಯದ ದಿನವೂ ಹೀಗೇ ಇರುತ್ತದೆ ಎಂಬ ನಂಬಿಕೆ ಇಲ್ಲ. ಆದ್ದರಿಂದ ನಮ್ಮ ಜನ ಬೇಡದ ಆಡಂಬರ ಬಿಟ್ಟು, ಮಕ್ಕಳಿಗೆ ಬದುಕಿನಲ್ಲಿ ಬರಬಹುದಾದ ಎಲ್ಲಾ ಕಷ್ಟ-ನಷ್ಟ, ಸೋಲು-ಗೆಲುವನ್ನು ಸಮಾನವಾಗಿ ಎದುರಿಸಿಕೊಂಡು ಬದುಕಲು ಕಲಿಸಬೇಕು. ಕೊಡವ ಪದ್ದತಿ-ಸಂಸ್ಕ್ರತಿ, ಹಬ್ಬ, ಜಾನಪದ ಕಲೆ, ಸಂಸ್ಕೃತಿ ಸೇರಿದಂತೆ ಎಲ್ಲವನ್ನೂ ಉಳಿಸಿ ಬೆಳೆಸಲು ಕಲಿಸಬೇಕೆಂದರು.
ಕುಟ್ಟ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಗೌರವ ಅಧ್ಯಕ್ಷೆ ಕಳ್ಳಿಚಂಡ ಶಾಲಿನಿ ಕಾರ್ಯಪ್ಪ ಮಾತನಾಡಿ ಟಿ.ಶೆಟ್ಟಿಗೇರಿ ಕೊಡವ ಸಮಾಜ ಮಾಡುತ್ತಿರುವ ಈ ಚಂಗ್ರಾAದಿ ಪತ್ತಲೋದಿ ಕಾರ್ಯಕ್ರಮದಿಂದ ಮಕ್ಕಳು ಸೇರಿದಂತೆ ಹಲವರ ಪ್ರತಿಭೆ ಹೊರಬೀಳುತ್ತಿದೆ. ಇದು ಕೊಡವ ಸಂಸ್ಕೃತಿಯ ಬೆಳವಣಿಗೆಗೆ ದಾರಿದೀಪವಾಗಿದೆ ಎಂದರು. ಕುಟ್ಟ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಮುಕ್ಕಾಟಿರ ಅರ್ಚನ ಮಾದಪ್ಪ ಮಾತನಾಡಿ ಕೊಡವ ಸಂಸ್ಕೃತಿಯ ಬೆಳವಣಿಗೆಯ ಕಾರ್ಯದಲ್ಲಿ ತೊಡಗಿರುವವರ ಕಾಲೆಳೆಯುವುದು ಬಿಟ್ಟು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ ಸಾಧಿಸುವ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ಅಧ್ಯಕ್ಷ ಕೈಬಿಲೀರ ಹರೀಶ್ ಅಪ್ಪಯ್ಯ ಮಾತನಾಡಿ ಕಳೆದ ಒಂಬತ್ತು ವರ್ಷಗಳಿಂದ ಟಿ.ಶೆಟ್ಟಿಗೇರಿ ಕೊಡವ ಸಮಾಜ ನಡೆಸುತ್ತಾ ಬಂದಿರುವ ಚಂಗ್ರಾAದಿ ಪತ್ತಲೋದಿ ಕಾರ್ಯಕ್ರಮದ ಮಾಹಿತಿಯನ್ನು ನೀಡಿದರು.
ವೇದಿಕೆಯಲ್ಲಿ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ಸಹಕಾರ್ಯದರ್ಶಿ ಆಂಡಮಾಡ ಸತೀಶ್ ವಿಶ್ವನಾಥ್, ಕ್ರೀಡಾ ಸಂಚಾಲಕ ತಡಿಯಂಗಡ ಶಮ್ಮಿ ಸುಬ್ಬಯ್ಯ, ಟಿ.ಶೆಟ್ಟಿಗೇರಿ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಕಾರ್ಯದರ್ಶಿ ಕಳ್ಳಿಚಂಡ ದೀನ ಉತ್ತಪ್ಪ ಉಪಸ್ಥಿತರಿದ್ದರು. ಈ ಸಂದರ್ಭ ದಾನಿಗಳಾದ ಟಿ.ಶೆಟ್ಟಿಗೇರಿ ಕೊಡವ ಸಮಾಜದ ನಿರ್ದೇಶಕ ಬಾದುಮಂಡ ವಿಷ್ಣು ಕಾರ್ಯಪ್ಪ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಕುಟ್ಟ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಸದಸ್ಯೆಯರಿಂದ “ಕೊಡವ ಚಿಂಗಾರ” ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿದವರೆಲ್ಲರು ಮೆಚ್ಚುಗೆ ಸೂಚಿಸಿದರು. ಇಂದು(ಶುಕ್ರವಾರ) ಸಂಜೆ ೬-೦೦ ಗಂಟೆಗೆ ತಿಂಗಕೊರ್ ಮೊಟ್ಟ್ ತಲಕಾವೇರಿಕ್ ಕೂಟದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಸಂಭ್ರಮ ಪೊಮ್ಮಕ್ಕಡ ಕೂಟದ ನಿರ್ದೇಶಕಿ ಅಜ್ಜಮಾಡ ಸಾವಿತ್ರಿ ಪ್ರಾರ್ಥಿಸಿ, ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಸ್ವಾಗತಿಸಿ, ಕೊಡವ ಸಮಾಜದ ಸಾಂಸ್ಕೃತಿಕ ಸಂಚಾಲಕ ಚೆಟ್ಟಂಗಡ ರವಿ ಸುಬ್ಬಯ್ಯ ನಿರೂಪಿಸಿ, ಸಮಾಜದ ಉಪಾಧ್ಯಕ್ಷ ಮಚ್ಚಮಾಡ ಸುಮಂತ್ ವಂದಿಸಿದರು.