ಮಂಜಿನನಗರಿ ಕೊಡಗು ಜಿಲ್ಲೆಯಲ್ಲಿ ೨೦೨೦ ರಿಂದ ೨೦೨೪ ರವರೆಗೆ ಐದು ವರ್ಷಗಳ ಅವಧಿಯಲ್ಲಿ ಆತ್ಮಹತ್ಯೆ ಪ್ರಮಾಣವು ನಿರಂತರವಾಗಿ ಏರುತ್ತಿರುವ ಆತಂಕಕಾರಿ ಮಟ್ಟದಲ್ಲೇ ಉಳಿದಿದೆ. ಕಳೆದ ಐದು ವರ್ಷಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಒಟ್ಟು ೧೪೬೨ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದು, ಇವರಲ್ಲಿ ೧೧೦೭ ಪುರುಷರು ಮತ್ತು ೩೫೫ ಮಹಿಳೆಯರು ಸೇರಿದ್ದಾರೆ. ಹೆಚ್ಚಾಗಿ ೩೦ ರಿಂದ ೪೫ ವರ್ಷದವರೇ ಆತ್ಮಹತ್ಯೆಗೆ ಬಲಿಯಾಗಿದ್ದಾರೆ. ಕಳೆದ ಐದು ವರ್ಷಗಳ ರಾಷ್ಟಿçÃಯ ಅಪರಾಧ ಬ್ಯೂರೋ ದಾಖಲೆಗಳ ಆಧರಿಸಿ ಮೈಸೂರು ವಿಶ್ವ ವಿದ್ಯಾಲಯದ ಸಾಮಾಜಿಕ ಒಳಗೊಳ್ಳುವಿಕೆ ಕೇಂದ್ರದ ಸಹ ಪ್ರಾಧ್ಯಾಪಕ ಡಾ. ಡಿ.ಸಿ. ನಂಜುAಡ ಮತ್ತು ಮೈಸೂರಿನ ಮಹಾರಾಜ ಕಾಲೇಜಿನ ಮನಶಾಸ್ತç ಪ್ರಾಧ್ಯಾಪಕ ಡಾ. ಲ್ಯಾನ್ಸಿ ಡಿ.ಸೋಜ್ಹಾ ಅವರ ನೇತೃತ್ವದ ತಂಡ ಇತ್ತೀಚೆಗೆ ನಡೆಸಿದ ಜಂಟಿ ಅಧ್ಯಯನದಿಂದ ಈ ಕಳವಳಕಾರಿ ಚಿತ್ರಣ ಕಂಡು ಬಂದಿದೆ.
೨೦೨೦ನೇ ವರ್ಷದಲ್ಲಿ ಒಟ್ಟು ೨೭೩ ಆತ್ಮಹತ್ಯೆ ಪ್ರಕರಣಗಳು ಕೊಡಗಿನಲ್ಲಿ ದಾಖಲಾಗಿದ್ದು, ಅದರಲ್ಲಿ ೨೦೨ ಪುರುಷರು ಮತ್ತು ೭೧ ಮಹಿಳೆಯರು ಸೇರಿದ್ದಾರೆ. ಕೌಟುಂಬಿಕ ಸಮಸ್ಯೆಯಿಂದ ೮೮, ಅನಾರೋಗ್ಯ ಕಾರಣದಿಂದ ೭೩, ಮಾದಕವಸ್ತು ದುರ್ಬಳಕೆಯಿಂದ ೬೨ ಮಂದಿ ಮತ್ತು ವಿವಾಹ ಸಂಬAಧಿತ ಕಾರಣದಿಂದ ೧೦ ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ೨೦೨೧ ರಲ್ಲಿ ಆತ್ಮಹತ್ಯೆಗಳ ಸಂಖ್ಯೆ ೨೮೩ಕ್ಕೆ ಏರಿಕೆಯಾಗಿದ್ದು ಇವರಲ್ಲಿ ೨೨೧ ಪುರುಷರು ಮತ್ತು ೬೨ ಮಹಿಳೆಯರು ಇದ್ದಾರೆ. ಈ ವರ್ಷದಲ್ಲಿ ಅನಾರೋಗ್ಯಕ್ಕೆ ಸಂಬAಧಿಸಿದ ೧೦೩ ಆತ್ಮಹತ್ಯೆಗಳು ನಡೆದಿದ್ದು ಇದು ಭಾರೀ ಪ್ರಮಾಣದ ಏರಿಕೆ ಎನ್ನಬಹುದು. ಅಲ್ಲದೆ ಕುಟುಂಬ ಸಮಸ್ಯೆಗಳಿಂದ ೧೪ ಮಂದಿ, ಮಾದಕವಸ್ತು ದುರ್ಬಳಕೆಯಿಂದ ೭೭ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ ಎನ್ನುತ್ತಾರೆ ಪ್ರೊ. ಲ್ಯಾನ್ಸಿ ಡಿ.ಸೋಜ್ಹಾ.
೨೦೨೨ ರಲ್ಲಿ ೩೩೧ ಆತ್ಮಹತ್ಯೆಗಳೊಂದಿಗೆ ಐದು ವರ್ಷದ ಅವಧಿಯಲ್ಲೇ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇವರಲ್ಲಿ ೨೪೪ ಪುರುಷರು ಮತ್ತು ೮೭ ಮಹಿಳೆಯರು ಇದ್ದಾರೆ. ಅನಾರೋಗ್ಯದಿಂದ ೯೫ ಮಂದಿ, ಮಾದಕವಸ್ತುಗಳ ದುರ್ಬಳಕೆಯಿಂದ ೬೦ ಮಂದಿ, ಕುಟುಂಬ ಸಮಸ್ಯೆಗಳ ಕಾರಣದಿಂದ ೭೧ ಮಂದಿ, ವೈವಾಹಿಕ ಸಮಸ್ಯೆಗಳಿಂದ ೨೬ ಮಂದಿ, ಆಸ್ತಿ ವಿವಾದದಿಂದ ೧೦ ಮಂದಿ ಮತ್ತು ಇತರೆ ಕಾರಣಗಳಿದ ೩೧ ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
೨೦೨೩ ರಲ್ಲಿ ಕೊಡಗಿನಲ್ಲಿ ಒಟ್ಟು ೨೯೨ ಆತ್ಮಹತ್ಯೆಗಳು ವರದಿ ಯಾಗಿದ್ದು, ಇವರಲ್ಲಿ ಪುರುಷರು ೨೨೯ ಮಹಿಳೆಯರು ೬೩ ಸೇರಿದ್ದಾರೆ. ಕುಟುಂಬ ಸಮಸ್ಯೆಗಳ ಕಾರಣದಿಂದ ೧೭೧ ಮಂದಿ, ಅನಾರೋಗ್ಯದಿಂದ ೧೧೧ ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬ್ಯಾಂಕ್ ಸಾಲ ಸಂಬAಧಿತ ೧೮ ಮಂದಿ ಆತ್ಮಹತ್ಯೆ ಮಾಡಿಕೊಂಡಿರುವುದು ಕೂಡ ಬೆಳಕಿಗೆ ಬಂದಿದೆ. ೨೦೨೪ನೇ ವರ್ಷದಲ್ಲಿ ಕೊಡಗಿನಲ್ಲಿ ಒಟ್ಟು ೨೮೩ ಆತ್ಮಹತ್ಯೆಗಳು ವರದಿಯಾಗಿದ್ದು ಇವರಲ್ಲಿ ೨೧೧ ಪುರುಷರು ಮತ್ತು ೭೨ ಮಹಿಳೆಯರು ಸೇರಿದ್ದಾರೆ. ಕುಟುಂಬ ಸಮಸ್ಯೆಗಳಿಂದ ೧೩೪ ಮಂದಿ ಮತ್ತು ಅನಾರೋಗ್ಯ ಕಾರಣದಿಂದ ೭೧ ಮಂದಿ, ಮಾದಕವಸ್ತು ಬಳಕೆಯಿಂದ ೫೪ ಮಂದಿ ಮತ್ತು ಇತರ ಕಾರಣಗಳಿಂದ ೧೮ ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೌಟುಂಬಿಕ ಸಮಸ್ಯೆಗಳಿಂದ ಮಾನಸಿಕ ವ್ಯಥೆ ಹೆಚ್ಚಾಗುತ್ತಿದ್ದು, ಇದು ಹೆಚ್ಚಿನವರಲ್ಲಿ ಮಾರಕವಾಗಿರುವ ಸ್ಥಿತಿಯನ್ನು ತೋರಿಸುತ್ತವೆ. ದೀರ್ಘಕಾಲದ ಮಾನಸಿಕ ಒತ್ತಡ ಆತ್ಮಹತ್ಯೆಯಲ್ಲಿ ಅಂತ್ಯವಾಗುತ್ತಿದೆ. ಕುಟುಂಬದ ಒತ್ತಡ, ಆರೋಗ್ಯ ಸಮಸ್ಯೆಗಳು, ಆಸ್ತಿ, ಕಲಹ ಹಾಗೂ ಆರ್ಥಿಕ ಸಮಸ್ಯೆಗಳು ಪರಸ್ಪರ ಸೇರಿಕೊಂಡು ಬದುಕಿನ ಮೇಲೆ ದುಷ್ಪರಿಣಾಮ ಬೀರುತ್ತಿವೆ. ಮುಖ್ಯವಾಗಿ ಕೊಡಗಿನಲ್ಲಿ ಮಾದಕವಸ್ತುಗಳ ಬಳಕೆ ಹೆಚ್ಚಾಗುತ್ತಿರುವುದು ಆತಂಕಕಾರಿ ಎನ್ನುತ್ತಾರೆ ಡಾ. ಡಿ.ಸಿ. ನಂಜುAಡ.