ಸೋಮವಾರಪೇಟೆ, ಅ. ೨೩: ಬಾಡಿಗೆಗೆ ತೆರಳಿದ್ದ ಆಟೋ ಚಾಲಕನ ಮೇಲೆ ಅಸ್ಸಾಂ ಕಾರ್ಮಿಕರು ಬಾಡಿಗೆ ವಿಚಾರಕ್ಕೆ ಸಂಬAಧಿಸಿದAತೆ ಜಗಳ ತೆಗೆದು ಹಲ್ಲೆ ನಡೆಸಿರುವ ಘಟನೆ ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಅಭಿಮಠ ಬಾಚಳ್ಳಿ ಗ್ರಾಮದಲ್ಲಿ ನಡೆದಿದೆ.

ಯಡೂರು ಗ್ರಾಮ ನಿವಾಸಿ, ಪಟ್ಟಣದಲ್ಲಿ ಆಟೋ ಚಾಲಕನಾಗಿರುವ ಪ್ರಶಾಂತ್ ಎಂಬಾತ ನಿನ್ನೆ ಸಂಜೆ ಅಸ್ಸಾಂ ಮೂಲದ ಕಾರ್ಮಿಕರಾದ ನೂರಿ ಸಲಾಮ್, ಫೈಜಲ್ ಹಾಗೂ ಸೈನುದ್ದೀನ್ ಎಂಬವರುಗಳನ್ನು ಪಟ್ಟಣದಿಂದ ಅಭಿಮಠ ಬಾಚಳ್ಳಿಗೆ ತನ್ನ ಆಟೋದಲ್ಲಿ ಕರೆದೊಯ್ದಿದ್ದು, ಸ್ಥಳದಲ್ಲಿ ಬಾಡಿಗೆ ವಿಚಾರಕ್ಕೆ ಸಂಬAಧಿಸಿದAತೆ ಅಸ್ಸಾಮಿಗರು ಹಾಗೂ ಸ್ಥಳೀಯ ಆಟೋ ಚಾಲಕನ ನಡುವೆ ಮಾತಿಗೆ ಮಾತು ಬೆಳೆದಿದೆ.

ಈ ಸಂದರ್ಭ ಆಟೋ ಚಾಲಕನ ಮೇಲೆ ಮೂವರು ಅಸ್ಸಾಂ ಕಾರ್ಮಿಕರು ಹಲ್ಲೆ ನಡೆಸಿದ್ದು, ಮುಖ, ತಲೆ ಭಾಗಕ್ಕೆ ಪೆಟ್ಟಾಗಿದೆ. ಗಾಯಾಳು ಪ್ರಶಾಂತ್ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾನೆ.

ಅಭಿಮಠ ಬಾಚಳ್ಳಿ ಗ್ರಾಮದ ರಾಮಪ್ಪ ಎಂಬವರ ಕಾಫಿ ತೋಟದಲ್ಲಿ ಕಾರ್ಮಿಕರಾಗಿರುವ ನೂರಿ ಸಲಾಮ್, ಫೈಜಲ್ ಹಾಗೂ ಸೈನುದ್ದೀನ್ ಅವರುಗಳನ್ನು ನಿನ್ನೆ ರಾತ್ರಿಯೇ ಸೋಮವಾರಪೇಟೆ ಪೊಲೀಸರು ಬಂಧಿಸಿ ಮೊಕದ್ದಮೆ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.