ಪೊನ್ನಂಪೇಟೆ, ಅ. ೨೩: ಚೊಚ್ಚಲ ಕೃತಿಯ ಮೂಲಕ ಅಂತರರಾಷ್ಟಿçÃಯ ಮಟ್ಟದಲ್ಲಿ ಗಮನ ಸೆಳೆದು ಸಾಧನೆಗೈದ ದುದ್ದಿಯಂಡ ಮುಸ್ಕಾನ್ ಸೂಫಿ ಅವರನ್ನು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ವತಿಯಿಂದ ಸನ್ಮಾನಿಸಲಾಯಿತು.
ಕೊಡವ ಮುಸ್ಲಿಂ ಅಸೋಸಿಯೇಷನ್ ವತಿಯಿಂದ ಕೊಡವ ಮುಸ್ಲಿಂ ಶಿಕ್ಷಣ ನಿಧಿಯ ಸಹಯೋಗದಲ್ಲಿ ವೀರಾಜಪೇಟೆಯ ಸಂತ ಅನ್ನಮ್ಮ ಪ್ಯಾರಿಸ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಕೆಎಂಎ ಪ್ರತಿಭಾ ಪುರಸ್ಕಾರ-೨೦೨೫ ವಿತರಣೆ ಮತ್ತು ಸನ್ಮಾನ ಸಮಾರಂಭದಲ್ಲಿ ಮುಸ್ಕಾನ್ ಸೂಫಿ ಅವರನ್ನು ಸಂಸ್ಥೆಯ ಪರವಾಗಿ ಸಾಂಪ್ರದಾಯಿಕ ಶೈಲಿಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಆರಂಭದಿAದಲೇ ಇಂಗ್ಲೀಷ್ ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ದುದ್ದಿಯಂಡ ಮುಸ್ಕಾನ್ ಸೂಫಿ ಅವರ ಮೊದಲ ಇಂಗ್ಲಿಷ್ ಕೃತಿ 'ದಿಸ್ ಟೂ ಶೆಲ್ ಪಾಸ್' ಅನ್ನು ಅಂತರರಾಷ್ಟಿçÃಯ ಖ್ಯಾತಿಯ ಬುಕ್ ಲಿಫ್ ಪಬ್ಲಿಕೇಶನ್ ಪ್ರಕಟಿಸಿತ್ತು. ನಂತರ ಈ ಕೃತಿ ಅಮೇರಿಕಾ ಮೂಲದ ಪ್ರಸಿದ್ಧ ಕವಿ ಎಮಿಲಿ ಡಿಕ್ಕಿನ್ಸನ್ ಸ್ಮರಣಾರ್ಥವಾಗಿ ನೀಡಲಾಗುವ ೨೧ನೇ ಶತಮಾನದ ಅಂತರರಾಷ್ಟಿçÃಯ ಮಟ್ಟದ ‘ಇಂಡಿ ಆಥರ್ಸ್ ಅವಾರ್ಡ್ ೨೦೨೫'ಕ್ಕೆ ನಾಮನಿರ್ದೇಶನಗೊಂಡಿತ್ತು.
ಇದಕ್ಕೂ ಮೊದಲು ಬುಕ್ ಲಿಫ್ ಪಬ್ಲಿಕೇಶನ್ ಜಾರಿಗೊಳಿಸಿದ್ದ ೨೧ ದಿನಗಳಲ್ಲಿ ೨೧ ಕವನ ರಚಿಸುವ ‘ಸವಾಲುಗಳ ಅಭಿಯಾನ'(ಅhಚಿಟಟeಟಿges ಅಚಿmಠಿಚಿigಟಿ)ದಲ್ಲಿ ಪಾಲ್ಗೊಂಡಿದ್ದ, ಮುಸ್ಕಾನ್ ಸೂಫಿ ಅವರು, ಸವಾಲುಗಳ ನಿರ್ದಿಷ್ಟ ಗುರಿ ಸಾಧಿಸಿ ಗಮನ ಸೆಳೆದಿದ್ದಾರೆ. ನಿಗದಿತ ೨೧ ದಿನಗಳಲ್ಲಿ ೨೮ಕ್ಕೂ ಹೆಚ್ಚು ಕವನಗಳನ್ನು ಸ್ವಯಂ ರಚಿಸಿದ ಮುಸ್ಕಾನ್ ಸೂಫಿ ೫೦ ಪುಟಗಳ ಕವನ ಸಂಗ್ರಹಕ್ಕೆ ರೂಪು ನೀಡಿದ್ದರು.
ಮುಸ್ಕಾನ್ ವೀರಾಜಪೇಟೆ ಸಮೀಪದ ನಲ್ವತ್ತೋಕ್ಲು ಮೂಲದವರಾದ ಕಾಫಿ ಉದ್ಯಮಿ ದುದ್ದಿಯಂಡ ಸೂಫಿ ಹಾಜಿ ಮತ್ತು ಮಸೂದ ಸೂಫಿ ದಂಪತಿಯ ಪುತ್ರಿ.