ಗೋಣಿಕೊಪ್ಪ ವರದಿ : ಮಾಯಮುಡಿ ಕಂಗಳತ್ ನಾಡ್ ಮಂದ್ನಲ್ಲಿ ಕಾವೇರಿ ತೀರ್ಥಪೂಜೆ ನಡೆಯಿತು. ಕರ್ನಾಟಕ ರಾಜ್ಯ ಕ್ರೀಡಾ ಪ್ರಾಧಿಕಾರ ಉಪಾಧ್ಯಕ್ಷ ಚೆÀÀಪ್ಪುಡೀರ ಅರುಣ್ ಮಾಚಯ್ಯ ಮತ್ತು ಅವರ ಪತ್ನಿ ಚಾಂದಿನಿ ಮಾಚಯ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾವೇರಿ ತೀರ್ಥಕ್ಕೆ ಕೊಡಂದೆರ ಉತ್ತರೆ ತಿಮ್ಮಯ್ಯ ಮತ್ತು ಚಾಂದಿನಿ ಮಾಚಯ್ಯ ಪೂಜೆ ನೆರವೇರಿಸಿದರು. ಅರುಣ್ ಮಾಚಯ್ಯ ಅವರಿಗೆ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಸ ಸ್ಥಾನ ಸಿಕ್ಕಿದ್ದಕ್ಕೆ ಅಭಿನಂದಿಸಲಾಯಿತು.
ಕರಾಟೆಯಲ್ಲಿ ಸಾಧನೆ ಮಾಡಿ ೧೨ ಬಹುಮಾನ ಗಳಿಸಿದ ಸಣ್ಣುವಂಡ ಶೀಯನ್ ಬಿದ್ದಪ್ಪ ಅವರನ್ನು ಅರುಣ್ ಮಾಚಯ್ಯ ಸನ್ಮಾನಿಸಿ ಮಾತನಾಡಿ ಕ್ರೀಡೆಗೆ ಬೇಕಾದ ಸೌಕರ್ಯ ನೀಡಲು ತಾನು ಆಸಕ್ತನಾಗಿದ್ದು ಮಾಯಮುಡಿ ಶಾಲಾ ಮೈದಾನವನ್ನು ಉತ್ತಮ ದರ್ಜೆಗೇರಿಸುವ ಚಿಂತನೆ ಇದೆ ಎಂದರು. ವಿ ಬಾಡಗದಲ್ಲಿ ಕ್ರೀಡಾ ಅಕಾಡೆಮಿ ಸ್ಥಾಪನೆ ಆದಾಗ ಅಲ್ಲಿ ಕೋವಿ ಫೈರಿಂಗ್ ರೇಂಜ್ ಸ್ಥಾಪಿಸಲಾಗುವುದು ಎಂದರು. ಮಹಿಳಾ ಸಮಾಜದ ಅಧ್ಯಕ್ಷೆ ಚೆಪ್ಪುಡಿರ ರಾಧಾ ಅಚ್ಚಯ್ಯ, ಕಾರ್ಯದರ್ಶಿ ಬಲ್ಯಂಡ ಯಮುನಾ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆಪಟ್ಟಿರ ಬೋಪಣ್ಣ, ಮಾನಿಲ್ ಐಯ್ಯಪ್ಪ ಸೇವಾ ಸಮಿತಿಯ ಕಾರ್ಯದರ್ಶಿ ಬಲ್ಯಂಡ ರವಿ, ನಿರ್ದೇಶಕ ಚೆಪ್ಪುಡಿರ ಪೂವಯ್ಯ, ಚೆಪ್ಪುಡಿರ ಮಧು ಅಪ್ಪಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷ ಆಪಟ್ಟಿರ ಟಾಟೂ ಮೊಣ್ಣಪ್ಪ, ಸೇವಾಸಮಿತಿ ಅಧ್ಯಕ್ಷ ಸಣ್ಣುವಂಡ ವಿಶ್ವನಾಥ್, ಸ್ಥಳೀಯರಾದ ಸಣ್ಣುವಂಡ ವಿನಯ್ ಅಯ್ಯಪ್ಪ ಉಪಸ್ಥಿತರಿದ್ದರು.
ಕಂಗಳತ್ ನಾಡ್ ಸಮಿತಿಯ ಸಂಚಾಲಕರಾದ ಸಣ್ಣುವಂಡ ರಮೇಶ್ ಮಂದ್ನಲ್ಲಿ ಕಾರ್ಯಕ್ರಮ ನಡೆಸಲು ಒಂದು ವೇದಿಕೆಯ ಅವಶ್ಯಕತೆ ಇದ್ದು ಅದನ್ನು ನಿರ್ಮಿಸಲು ಎಲ್ಲರ ಸಹಕಾರ ಕೋರಿದರು. ನಾಪೋಕ್ಲು, ಅ. ೨೦: ಮೈಸೂರಿನ ಕೊಡಗು ಗೌಡ ಸಮಾಜದ ವತಿಯಿಂದ ಸಮುದಾಯದವರಿಗೆ ಮತ್ತು ಭಕ್ತರಿಗೆ ಕಾವೇರಿ ತೀರ್ಥವನ್ನು ವಿತರಣೆ ಮಾಡಲಾಯಿತು.
ಮೈಸೂರಿನ ಕೊಡಗು ಗೌಡ ಸಮುದಾಯ ಭವನದ ದೇವರ ಮಂಟಪದಲ್ಲಿ ತೀರ್ಥಪೂಜೆಯನ್ನು ನೆರವೇರಿಸಿದ ನಂತರ, ತೀರ್ಥ ವಿತರಣೆ ನಡೆಯಿತು.
ಈ ಸಂದರ್ಭ ಮೈಸೂರು ಕೊಡಗು ಗೌಡ ಸಮಾಜದ ಪದಾಧಿಕಾರಿಗಳಾದ ಪೊನ್ನೆಟಿ ನಂದ, ನಡುವಟ್ಟಿರ ಲಕ್ಷ್ಮಣ, ನಡುಮನೆ ಚೆಂಗಪ್ಪ, ನಿರ್ದೇಶಕರಾದ ಪಟ್ಟಡ ಶಿವಕುಮಾರ್, ಹೊಸೂರು ರಾಘವ, ಕುಂಟುಪುಣಿ ರಮೇಶ್, ಪಾಣತ್ತಲೆ ವಸಂತ, ಚಪ್ಪೆರ ಯಮುನಾ, ಕುಂಟುಪುಣಿ ಶೀಲಾ, ತೊಟಂಬೈಲು ಇಂದಿರಾ, ಮೈಸೂರು ಕೊಡಗು ಗೌಡ ಸಮಾಜದ ಮಾಜಿ ಅಧ್ಯಕ್ಷ ತೊಟಂಬೈಲು ಮನೋಹರ, ಕುದುಪಜೆ ಕುಶಾಲಪ್ಪ, ಕೊಡಗು ಮತ್ತು ದ. ಕನ್ನಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ನಡುವಟ್ಟಿರ ಗೀತಾ ಲಕ್ಷö್ಮಣ ಉಪಸ್ಥಿತರಿದ್ದರು.