ಕಡಂಗ, ಅ. ೨೧ : ಉಮ್ರಾ ಯಾತ್ರೆ ಎನ್ನುವುದು ಮುಸ್ಲಿಂ ಸಮುದಾಯ ಬಾಂಧವರಿಗೆ ಪವಿತ್ರವಾಗಿದ್ದು ಯಾತ್ರೆಗೆ ತರಳುವ ಮಂದಿಗೆ ಸಹಾಯ ಹಸ್ತ ನೀಡಿ ಕನಸು ಸಾಕಾರಗೊಳಿಸುವ ಕಾರ್ಯ ಉನ್ನತವಾದದು ಎಂದು ಲಕ್ಷದೀಪ್ ಮಹದೀ ತಂಙಳ್ ಅಭಿಪ್ರಾಯ ವ್ಯಕ್ತಪಡಿಸಿದರು.

ಡೊನೇರ‍್ಸ್ ಚಾರಿಟೇಬಲ್ ಟ್ರಸ್ಟ್ ಎ.ಪಿ.ಜೆ ಅಬ್ದುಲ್ ಕಲಾಂ ರಸ್ತೆ ವೀರಾಜಪೇಟೆ ಆಶ್ರಯದಲ್ಲಿ ಸುಣ್ಣದ ಬೀದಿ ಈದ್ಗಾ ಮೈದಾನದ ಸಭಾಂಗಣದಲ್ಲಿ ಪ್ರವಾದಿ ಮಹಮ್ಮದ್ ಅವರ ೧೫೦೦ನೇ ವರ್ಷ ಜನ್ಮದಿನದ ಅಂಗವಾಗಿ ಉಮ್ರಾ ಯಾತ್ರೆಗೆ ತೆರಳಲು ಸಿದ್ದರಾಗಿರುವ ವ್ಯಕ್ತಿಗಳಿಗೆ ಬೀಳ್ಕೊಡುಗೆ ಮತ್ತು ಮೌಲೂದ್ ಪಾರಾಯಣ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಹದೀ ಅವರು ಮುಸ್ಲಿಂ ಧರ್ಮೀಯರಿಗೆ ಉಮ್ರಾ ಯಾತ್ರೆ ಅತ್ಯಂತ ಪವಿತ್ರವಾಗಿದೆ. ಜೀವನದಲ್ಲಿ ಒಂದು ಬಾರಿಯಾದರೂ ಪ್ರವಾದಿ ಮಹಮ್ಮದ್ ಅವರ ನೆಲೆಯನ್ನು ಕಾಣುವ ಹಂಬಲವಿರುತ್ತದೆ. ಜೀವನದ ಸಾರ್ಥಕತೆಯನ್ನು ಪಡೆಯುತ್ತದೆ ಎನ್ನುವ ವಿಶ್ವಾಸ. ವಿಶ್ವಾಸಗಳನ್ನು ಸಾಕಾರಗೊಳಿಸಲು ಆರ್ಥಿಕ ಮುಗ್ಗಟ್ಟು ಇರುವುದುರಿಂದ ಕಡುಬಡವರಿಗೆ ಯಾತ್ರೆ ಸುಗಮವಾಗುವುದಿಲ್ಲ. ಈ ನಿಟ್ಟಿನಲ್ಲಿ ನಿರ್ಗತಿಕ ಕುಟುಂಬಗಳ ವ್ಯಕ್ತಿಗಳನ್ನು ಗುರುತಿಸಿ ಅವರು ಕಂಡ ಕನಸನ್ನು ಸಾಕಾರಗೊಳಿಸುವ ಪ್ರಯತ್ನ ಮಾಡಿರುವ ಸಂಘಟನೆಯ ಕಾರ್ಯ ಶ್ಲಾಘನೀಯ ಎಂದು ಹೇಳಿದರು. ಶಾಫಿ ಜುಮಾ ಮಸೀದಿ ಖತಿಬ್‌ರಾದ ಹ್ಯಾರಿಸ್ ಬಖವಿ ಮಾತನಾಡಿ, ಮುಸ್ಲಿಂ ಸಮುದಾಯದ ಪವಿತ್ರ ಸ್ಥಳಕ್ಕೆ ಯಾತ್ರೆಗೆ ಹೋಗಬೇಕು ಮತ್ತು ಸಂದÀರ್ಶನ ಮಾಡಬೇಕು. ಮನೋಭಿಲಾಷೆ ಸಮುದಾಯ ಬಾಂಧÀವರ ಇಚ್ಚೆ ಎಂದರು.

ಡೊನೇರ‍್ಸ್ ಚಾರಿಟೇಬಲ್ ಟ್ರಸ್ಟ್ ವೀರಾಜಪೇಟೆ ಗೌ. ಅಧ್ಯಕ್ಷರಾದ ಮೊಹಮ್ಮದ್ ರಾಫಿ ಅವರು ಪ್ರಾಸ್ತಾವಿಕ ಭಾಷಣದಲ್ಲಿ ಸಂಸ್ಥೆಯು ವಿನೂತನ ಕಾರ್ಯಕ್ಕೆ ಅಣಿಯಾಗಿದ್ದು, ಪ್ರಥಮ ಬಾರಿಗೆ ಉಮ್ರಾ ಯಾತ್ರೆಗೆ ವ್ಯಕ್ತಿಗಳನ್ನು ಆಯ್ಕೆಗೊಳಿಸಿ ದಾನಿಗಳಿಂದ ಸಂಗ್ರಹಿಸಿದ ಆರ್ಥಿಕ ಧನ ಸಹಾಯದಿಂದ ಯಾತ್ರಾರ್ಥಿಗಳಿಗೆ ನೀಡಿ ಕಳುಹಿಸಿ ಕೊಡಲಾಗುತ್ತಿದೆ. ವೀರಾಜಪೇಟೆ ನಗರದಿಂದ ಮಹಿಳೆಯರು ೪ ಮಂದಿ ಮತ್ತು ೭ ಪುರುಷರು ಅರ್ಜಿ ಸಲ್ಲಿಸಿದ್ದರು. ಲಾಟರಿ ಎತ್ತುವ ಮೂಲಕ ಈರ್ವರು ಮಹಿಳೆಯರು ಸೇರಿದಂತೆ ಓರ್ವ ಪುರುಷ ಯಾತ್ರಿಕರನ್ನು ಆಯ್ಕೆಗೊಳಿಸಲಾಗಿದೆ ಎಂದರು.

ನಸ್ರತುಲ್ ಉಲಮಾ ಮದ್ರಸಾ ಶಾಲೆಯ ಶಿಕ್ಷಕ ಅಬ್ದುಲ್ ರೆಹಮಾನ್, ಮದೀನ ಮಸಿದಿಯ ಮುಜಮ್ಮಿಲ್ ಉಸ್ತಾದ್, ಪುರಸಭೆ ಸದಸ್ಯರಾದ ಹೆಚ್.ಎಸ್. ಮತೀನ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮ ದಫ್ ನುಡಿಸುವ ಮೂಲಕ ಆರಂಭವಾಯಿತು. ಯಾತ್ರಾರ್ಥಿಗಳನ್ನು ಸಂಘಟನೆಯ ವತಿಯಿಂದ ಸನ್ಮಾನಿಸಲಾಯಿತು. ಧರ್ಮಪಂಡಿತರ ಮೌಲೂದ್ ಪಾರಾಯಣದ ಮೂಲಕ ಅಂತಿಮಗೊAಡಿತು.

ಡೊನೇರ‍್ಸ್ ಚಾರಿಟೇಬಲ್ ಟ್ರಸ್ಟ್ ವೀರಾಜಪೇಟೆ ಅಧ್ಯಕ್ಷರಾದ ಆಲೀರ ಫವಿಲ್ ಉಸ್ಮಾನ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಚಾರಿಟೇಬಲ್ ಟ್ರಸ್ಟ್ ವೀರಾಜಪೇಟೆ ಪದಾಧಿಕಾರಿಗಳು, ಸದಸ್ಯರು ಡೊನೇರ‍್ಸ್ ಚಾರಿಟೇಬಲ್ ಟ್ರಸ್ಟ್ ಯೂತ್ ವಿಂಗ್ ಪದಾಧಿಕಾರಿಗಳು, ಸದಸ್ಯರು, ಮಹಿಳಾ ಘಟಕದ ಪದಾಧಿಕಾರಿಗಳು, ಸದಸ್ಯರು ಹಾಗೂ ಸಮುದಾಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.