*ಗೋಣಿಕೊಪ್ಪ: ಸ್ವಚ್ಛ ಕೊಡಗು- ಸುಂದರ ಕೊಡಗು ಅಭಿಯಾನಕ್ಕೆ ಉತ್ತಮ ಸ್ಪಂದÀನ ದೊರೆಯಿತು. ಸಂಘ-ಸAಸ್ಥೆ, ಕಾರ್ಯಕರ್ತರು, ಕೃಷಿಕರು, ಕಾರ್ಮಿಕ ವರ್ಗ ಸೇರಿದಂತೆ ಸಾರ್ವಜನಿಕರು ಒಟ್ಟಾಗಿ ಅಭಿಯಾನದಲ್ಲಿ ಪಾಲ್ಗೊಂಡರು.
ತಿತಿಮತಿ ಗ್ರಾಮ ಪಂಚಾಯಿತಿ, ಇಗ್ಗುತ್ತಪ್ಪ ಕೊಡವ ಕೂಟ, ರೈತ ಸಂಘ, ಆಶಾ ಕಾರ್ಯಕರ್ತೆಯರು ಅಭಿಯಾನದಲ್ಲಿ ಪಾಲ್ಗೊಂಡರು.
ತಿತಿಮತಿ ಗ್ರಾಮದಲ್ಲಿ ಸ್ವಚ್ಛತೆ ಮಾಡಲಾಯಿತು. ಪಾಲಿಬೆಟ್ಟ ಕೂರ್ಗ್ ಕ್ಲಿಫ್ಸ್ ರೆಸಾರ್ಟ್ ಹಾಗೂ ಪರ್ಕೂö್ಯಪೈನ್ ಕ್ಯಾಸ್ಟಲ್ ರೆಸಾರ್ಟ್ ಮೂಲಕ ಸ್ವಚ್ಛತೆ ನಡೆಸಲಾಯಿತು. ಅಮ್ಮತ್ತಿ-ಪಾಲಿಬೆಟ್ಟ ಮುಖ್ಯರಸ್ತೆಯಲ್ಲಿ ಕಸ ತೆಗೆದು ಶ್ರಮದಾನ ನೆರವೇರಿಸಲಾಯಿತು.
ತಿತಿಮತಿ ಬಾಳುಮಾನಿ ಎಸ್ಟೇಟ್ ದೇವರಕಾಡು ಡಿವಿಷನ್ ಗ್ರೂಪ್ ೩ ಮೂಲಕ ಸ್ವಚ್ಛತೆ ನಡೆಸಲಾಯಿತು. ಕಾರ್ಮಿಕರು ಕೂಡ ಅಭಿಯಾನದಲ್ಲಿ ಕೈಜೋಡಿಸಿದರು. ಆನೆಚೌಕೂರು ಚೆಕ್ ಪೋಸ್ಟ್ ಮೂಲಕ ಟಾಟಾ ಕಾಫಿ ಬಾಳುಮಾನಿ ತೋಟದವರೆಗೆ ಹಾಗೂ ಮತ್ತಿಗೋಡು ವನ್ಯಜೀವಿ ಸಿಬ್ಬಂದಿಗಳಿAದ ಶ್ರಮದಾನ ಮಾಡಲಾಯಿತು. ಹೆದ್ದಾರಿ ಬದಿಯಲ್ಲಿನ ಪ್ಲಾಸ್ಟಿಕ್, ಕಸ ಹೆಕ್ಕಿ ಜಾಗೃತಿ ಮೂಡಿಸಲಾಯಿತು.ಕುಶಾಲನಗÀರ: ಕುಶಾಲನಗರದಲ್ಲಿ ಸ್ವಚ್ಛ ಕೊಡಗು - ಸುಂದರ ಕೊಡಗು ಅಭಿಯಾನ ಹಿನ್ನೆಲೆ ಶ್ರಮದಾನ ನಡೆಯಿತು. ಜಿಲ್ಲೆಯ ಗಡಿಭಾಗ ಕೊಪ್ಪ ವಿಭಾಗದ ಅರಣ್ಯ ಅಧಿಕಾರಿ ಸಿಬ್ಬಂದಿಗಳು ಪಾಲ್ಗೊಂಡು ಕಾವೇರಿ ನದಿ ತಟದ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತೆರವುಗೊಳಿಸುವ ಕಾರ್ಯ ಕೈಗೊಂಡರು.ಮಡಿಕೇರಿ: ಜಿಲ್ಲಾ ಹೊಟೇಲ್ ಹಾಗೂ ರೆಸಾರ್ಟ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ಸ್ವಚ್ಛ ಕೊಡಗು ಅಭಿಯಾನದಲ್ಲಿ ಸುಂಟಿಕೊಪ್ಪ ಸ್ವಸ್ಥ ವಿಶೇಷ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾಸಂಸ್ಥೆಯ ಹೊರಭಾಗದಲ್ಲಿ ರಸ್ತೆಯ ಎರಡೂ ಬದಿಗಳಲ್ಲಿದ್ದ ತ್ಯಾಜ್ಯವನ್ನು ವಿದ್ಯಾರ್ಥಿಗಳು ತೆರವು ಮಾಡಿ ಸ್ವಚ್ಛಗೊಳಿಸಿದರು.ಕತ್ತಲೆಕಾಡು: ಸ್ವಚ್ಛ ಕೊಡಗು-ಸುಂದರ ಕೊಡಗು ಅಭಿಯಾನದ ಭಾಗವಾಗಿ ಕತ್ತಲೆಕಾಡಿನಲ್ಲಿ ಸ್ವಚ್ಛತಾ ಕಾರ್ಯಕ್ರಮ ನೆರವೇರಿತು. ಕತ್ತಲೆಕಾಡು-ಜೇನುಕೊಲ್ಲಿ ಶ್ರೀ ವಿನಾಯಕ ಸೇವಾ ಟ್ರಸ್ಟ್ ಮುಂದಾಳತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕತ್ತಲೆಕಾಡು ವ್ಯೂ ಪಾಯಿಂಟ್ ಮೇಲ್ಭಾಗದಿಂದ ಕ್ಲೋಸ್ಬರ್ನ್ ಶಾಲೆವರೆಗೆ ಮುಖ್ಯ ರಸ್ತೆ ಬದಿಯಲ್ಲಿನ ತ್ಯಾಜ್ಯಗಳನ್ನು ವಿಲೇವಾರಿ ಮಾಡಲಾಯಿತು. ಪ್ಲಾಸ್ಟಿಕ್ ತ್ಯಾಜ್ಯ, ಬಾಟಲ್ಗಳು, ಮದ್ಯ ಬಾಟಲಿಗಳು ಸೇರಿ ೨೦ ದೊಡ್ಡ ಚೀಲ ಕಸ ಸಂಗ್ರಹ ಮಾಡಲಾಯಿತು.
ಈ ಕಾರ್ಯದಲ್ಲಿ ಕಡಗದಾಳು ಪಂಚಾಯಿತಿಯ ಸ್ಥಳೀಯ ವಾರ್ಡ್ ಸದಸ್ಯರಾದ ಪುಷ್ಪಾವತಿ ರೈ ಬಿ.ಎನ್., ಪ್ರಭಾವತಿ ಕರ್ಪಸ್ವಾಮಿ, ವಿನಾಯಕ ಸೇವಾ ಟ್ರಸ್ಟ್ ಹಾಗೂ ಸೇವಾ ಸಮಿತಿಯ ರಮಣಿ ಶೇಷಪ್ಪ, ಬ್ರಿಜೇಶ್ ರೈ, ಚೈತನ್ಯ ರೈ, ಪ್ರಭಾವತಿ, ಪುಷ್ಪಾವತಿ ಜನಾರ್ದನ್, ರಾಜೇಶ್, ಹೊನ್ನಪ್ಪ, ಕಿಶೋರ್ ರೈ ಕತ್ತಲೆಕಾಡು, ಲೋಕೇಶ್ ರೈ, ಅಶೋಕ್ ಎಂ.ಎಸ್., ಚಂದ್ರಶೇಖರ್ ರೈ, ಜಯಪ್ರಕಾಶ್, ಪ್ರಜ್ಞಾ ರೈ, ಆರಾಧ್ಯ, ಸ್ಥಳೀಯರಾದ, ಶಿವ, ಪರಪ್ಪು ಕೃಷ್ಣಪ್ಪ, ರಮೇಶ್ ಎಂ., ಅನುಶ್ರೀ, ಹಮೀದ್(ಕೇಸರಿ), ನಾಸರ್, ಬಿ.ಆರ್. ಕೃಷ್ಣಪ್ಪ ಪೂಜಾರಿ, ದಿವಾಕರ್ ಪೂಜಾರಿ ಮತ್ತಿತರರಿದ್ದು ಸಹಕರಿಸಿದರು. ಸಂಗ್ರಹವಾದ ಕಸವನ್ನು ಬಂಟರ ಸಂಘದ ವತಿಯಿಂದ ಪ್ರಾಯೋಜಿಸಲಾಗಿದ್ದ ವಾಹನದಲ್ಲಿ ವಿಲೇವಾರಿಗೆ ಕಳುಹಿಸಲಾಯಿತು. ಸಿದ್ದಾಪುರ: ಸ್ವಚ್ಛ ಕೊಡಗು ಸುಂದರ ಕೊಡಗು ಅಭಿಯಾನದ ಅಂಗವಾಗಿ ಸಿದ್ದಾಪುರದ ಇವ್ವಾಲ್ ಬ್ಯಾಕ್ ರೆಸಾರ್ಟ್ ವತಿಯಿಂದ ರೆಸಾರ್ಟ್ ಪ್ರಧಾನ ವ್ಯವಸ್ಥಾಪಕ ಥೋಮಸ್ ಪೌಲ್ ನೇತೃತ್ವದಲ್ಲಿ ಸಿಬ್ಬಂದಿಗಳು ಸೇರಿ ಸ್ವಚ್ಛ ಕಾರ್ಯಕ್ರಮವನ್ನು ಹಮ್ಮಿಕೊಂಡರು.
ಕರಡಿಗೋಡು ವ್ಯಾಪ್ತಿಯಲ್ಲಿ ಕಸ ತ್ಯಾಜ್ಯಗಳನ್ನು ಹೆಕ್ಕಿ ಸ್ವಚ್ಛಗೊಳಿಸಿದರು. ಈ ಸಂದರ್ಭದಲ್ಲಿ ರೆಸಾರ್ಟ್ ಸಿಬ್ಬಂದಿಗಳಾದ ವಸಂತ್. ಜಸ್ಟಿನ್ ಟೋಮಿ, ಅನಿಲ್, ಶಶಿಕುಮಾರ್, ಜೆನ್ನಿ ಸುರೇಶ್, ಹೆಚ್.ಆರ್, ಆಶ್ರಫ್ ಇನ್ನಿತರರು ಹಾಜರಿದ್ದರು.ಶ್ರೀಮಂಗಲ: ಅಭಿಯಾನದ ಹಿನ್ನೆಲೆ ಬಿರುನಾಣಿ ಗ್ರಾಮದಲ್ಲಿ ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಯಿತು. ವಿಷ್ಣು ನಾಚಪ್ಪ, ಶ್ರೀ ಮಹಾ ಮೃತ್ಯುಂಜಯ ಸಂಘದ ಕುಪ್ಪುಡೀರ ಅಯ್ಯಣ್ಣ, ಮಚ್ಚಾಮಡ ಕಿಸ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಗ್ರಾಮದ ರಸ್ತೆ ಬದಿ, ಪ್ರಯಾಣಿಕರ ತಂಗುದಾಣ, ಸಾರ್ವಜನಿಕ ಪ್ರದೇಶಗಳಲ್ಲಿ ಸ್ವಚ್ಛತೆ ನಡೆಸಲಾಯಿತು. ಮಡಿಕೇರಿ: ನಿಟ್ಟೂರು - ಕಾರ್ಮಾಡು. ವೈಲ್ಡ್ ನೆಕ್ಟರ್ ಹೋಂಸ್ಟೇ ವತಿಯಿಂದ ನಿಟ್ಟೂರು ಗ್ರಾಮ ಪಂಚಾಯಿತಿಯ ಬೆಂಬಲದೊAದಿಗೆ ನಿಟ್ಟೂರು - ಕಾರ್ಮಾಡು ಅರಣ್ಯ ಇಲಾಖೆ ಚೆಕ್ಪೋಸ್ಟ್ನಿಂದ ಲಕ್ಷö್ಮಣತೀರ್ಥ ನದಿಯವರಗೆ ರಸ್ತೆ ಬದಿಯಲ್ಲಿ ಹಾಕಲಾದ ತ್ಯಾಜ್ಯಗಳನ್ನು ಹೆಕ್ಕಿ ವಿಲೇವಾರಿ ಮಾಡುವ ಕಾರ್ಯಕೈಗೊಳ್ಳಲಾಯಿತು.
ಹೊಂಸ್ಟೇ ವ್ಯವಸ್ಥಾಪಕ ಕಾಟಿಮಾಡ ಸಮನ್ ಪೊನ್ನಣ್ಣ ನೇತೃತ್ವದಲ್ಲಿ ಹೊಂಸ್ಟೇ ಸಿಬ್ಬಂದಿ ವರ್ಗದವರು ಶ್ರಮದಾನದಲ್ಲಿ ಪಾಲ್ಗೊಂಡರು.ಪೊನ್ನAಪೇಟೆ: ಪೊನ್ನಂಪೇಟೆ ಹಳ್ಳಿಗಟ್ಟು ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಪಿ.ಯು. ಕಾಲೇಜಿನ ವತಿಯಿಂದ ಸ್ವಚ್ಛ ಕೊಡಗು, ಸುಂದರ ಕೊಡಗು ಅಭಿಯಾನಕ್ಕೆ ಬೆಂಬಲವನ್ನು ನೀಡಲಾಯಿತು.
ಸಿ.ಐ.ಪಿ.ಯು. ಕಾಲೇಜಿನ ಆವರಣದಿಂದ ಹಳ್ಳಿಗಟ್ಟು ಮತ್ತು ಕುಂದ ರಸ್ತೆ ಸಂಪರ್ಕಿಸುವ ಮುಖ್ಯರಸ್ತೆಯವರೆಗೆ ಕಾಲೇಜಿನ ವಿದ್ಯಾರ್ಥಿಗಳು ರಸ್ತೆಯ ಎರಡು ಬದಿಯಲ್ಲಿರುವ ತ್ಯಾಜ್ಯವನ್ನು ಸಂಗ್ರಹಿಸಿ ಸ್ವಚ್ಛಗೊಳಿಸಿದರು
ಸಿ.ಐ.ಪಿ.ಯು. ಕಾಲೇಜಿನ ಪ್ರಾಂಶುಪಾಲೆ ಡಾ.ರೋಹಿಣಿ ತಿಮ್ಮಯ್ಯ, ಉಪನ್ಯಾಸಕವೃಂದದವರು ಹಾ ಮಡಿಕೇರಿ: ಸ್ವಚ್ಛ ಕೊಡಗು ಸುಂದರ ಕೊಡಗು ಅಭಿಯಾನದಡಿಯಲ್ಲಿ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ, ದುಬಾರೆ ರಿವರ್ ರ್ಯಾಫ್ಟಿಂಗ್ ಅಸೋಸಿಯೇಷನ್, ಗ್ರಾಮದ ಹಿರಿಯ ಮಹಿಳೆಯರು, ಯುವಕರ ವತಿಯಿಂದ ಕಬ್ಬಿಣಗದ್ದೆಯಿಂದ ದುಬಾರೆವರೆಗೂ ರಸ್ತೆ ಬದಿಯಲ್ಲಿ ಬಿದ್ದಿರುವ ಕಸವನ್ನು ಹೆಕ್ಕಿ ಶುಚಿಗೊಳಿಸಿದರು.