ದೀಪಾವಳಿ ಎಂದಾಕ್ಷಣ ಬಾಣಬಿರುಸು, ಪಟಾಕಿ ಸಿಡಿಮದ್ದು, ದೀಪದ ರಂಗು ರಂಗಲ್ಲಿ ದೀಪಗಳ ಹಬ್ಬ. ಕತ್ತಲನ್ನು ಹೊಡೆದೋಡಿಸುವ ಹಬ್ಬ. ಇದು ದೀಪಗಳ ಮಾಸ ಕಾರ್ತಿಕ ಮಾಸ. ದೀಪ ಬೆಳಗುವುದೇ ಸಂಭ್ರಮ. ನರಕ ಚತುರ್ದಶಿಯಿಂದ ಮೂರು ದಿನ ಹಬ್ಬಗಳಾಚರಣೆ. ಪುಟ್ಟ ಹಣತೆಯಿಂದ ಹಿಡಿದು ಹಲವಾರು ವೈವಿಧ್ಯಮಯವಾದ ಬೆಳ್ಳಿ, ತಾಮ್ರ, ಹಿತ್ತಾಳೆ, ಕಂಚು, ಮಣ್ಣಿನ ದೀಪದಿಂದ ದೀಪ ಬೆಳಗುವರು. ದೀಪದಿಂದ ದೀಪ ಬೆಳಗಿ ಅಂದಾಕಾರದಿAದ ಬೆಳಕಿನೆಡೆಗೆ ಕೊಂಡೊಯ್ಯುವರು. ಸಾಲು ಹಣತೆಗಳು ಮನೆ ಮನ ಬೆಳಗಿ ನರಕ ನಾಶವಾಗುವುದು.

ಹಿರಿಯರು, ಕಿರಿಯರೆನ್ನುವ ಭೇದವಿಲ್ಲದೆ ಪಟಾಕಿ ಸಿಡಿಸಿ ಹಬ್ಬ ಆಚರಿಸುವರು. ಹಿರಿಯರು ಸಂಪತ್ತಿಗಾಗಿ ಲಕ್ಷಿö್ಮÃ ಪೂಜೆ ಮಾಡುವರು. ದೀಪ ಲಕ್ಷಿö್ಮÃಯ ಪ್ರತಿರೂಪ. ದೀಪಾರಾಧನೆಗೆ ತುಪ್ಪದ ದೀಪ ವಿಶೇಷ. ಯಾವುದೇ ಎಣ್ಣೆ ಬಳಸಿದರು ಒಂದೆರಡು ಹನಿ ತುಪ್ಪ ಹಾಕಿ ದೀಪ ಬೆಳಗಿದರೆ ವಿಶೇಷ. ಮನೆಯ ದೀಪ ಗ್ರಹಿಣಿ ಎನ್ನುವರು. ಆಕೆ ಮನೆಯಲ್ಲಿ ಎಲ್ಲರ ರಕ್ಷಣೆ ಮಾಡುವಳು.

ನರಕಾಸುರನನ್ನು ಸಂಹರಿಸಿದ ದಿನ ನರಕಚತುರ್ದಶಿ, ನರಕಚತುರ್ದಶಿ, ದೀಪಾವಳಿ, ಬಲಿಪಾಡ್ಯಮಿ. ಮೂರು ದಿನದ ಹಬ್ಬ. ಶ್ರೀ ಕೃಷ್ಣ ನರಕಾಸುರನನ್ನು ಸಂಹರಿಸಿದರಿAದ ಲೋಕದಲ್ಲಿ ಶಾಂತಿ ನೆಲೆಸಿತು. ಆ ಸಂತೋಷವೇ ದೀಪಾವಳಿ.

ಬಲಿಚಕ್ರವರ್ತಿ ಗುರುವನ್ನು ಗೌರವಿಸುವನು. ಆದರೆ ಆತ ದುರಂಹಕಾರಿ ಆದರಿಂದ ಪಾತಾಳ ಸೇರಿದ. ಈ ಹಬ್ಬದ ಬಗ್ಗೆ ಅನೇಕ ಕಥೆಗಳಿವೆ.

ಶ್ರೀರಾಮ ಹದಿನಾಲ್ಕು ವರ್ಷ ವನವಾಸ ಮುಗಿಸಿ ರಾವಣನನ್ನು ಸಂಹರಿಸಿ ಅಯೋಧ್ಯೆಗೆ ಹಿಂದಿರುಗಿದಾಗ ಗೆಲುವಿನ ರೂಪದಲ್ಲಿ ದೀಪ ಬೆಳಗಿ ಹಬ್ಬ ಮಾಡುವರು.

ಹಳ್ಳಿಗಳಲ್ಲಿ ನೀರು ತುಂಬುವ ಹಬ್ಬ, ಎಣ್ಣೆ ಸ್ನಾನವೆಂದು ಸಂಭ್ರಮಿಸುವರು. ಇದರಿಂದ ರಕ್ತಪರಿಚಲನೆಯು ಆಗುವುದು. ಚರ್ಮರೋಗ ದೂರಾಗಿ ಚರ್ಮ ಹೊಳಪಿನಿಂದ ಕೂಡಿರುವುದು.

ಶ್ರೀ ಕೃಷ್ಣ ಗೋವರ್ಧನಗಿರಿ ಎತ್ತಿದ ದಿನವೂ ಹೌದೆನ್ನುವರು. ಹಬ್ಬದಲ್ಲಿ ಪಟಾಕಿಗಳದೇ ಸಂಭ್ರಮ. ಪಟಾಕಿಗಳಿಂದ ಆಗುತ್ತಿರುವ ಮಾಲಿನ್ಯವನ್ನು ತಪ್ಪಿಸಲು ಆಕಾಶಬುಟ್ಟಿ ಬಳಕೆ ಮಾಡುವರು. ಪರಿಸರವನ್ನು ರಕ್ಷಿಸಲು ಈ ರೀತಿ ಮಾಡುವರು. ಹಲವಾರು ದೇಶಗಳಲ್ಲಿ ದೀಪಾವಳಿ ಸಂಭ್ರಮದಿAದ ಆಚರಿಸುವರು.

ಇದು ಕೇವಲ ಹಬ್ಬಮಾತ್ರವಲ್ಲ ಪಿತೃರನ್ನು ತೃಪ್ತಿಪಡಿಸುವ ಪಿತೃಪಕ್ಷ. ಪೂರ್ವಿಕರ ಬಗ್ಗೆ ಇರುವ ಪ್ರೀತಿಯನ್ನು ತೋರಿಸುವುದು. ಪಿತೃತರ್ಪಣ, ಲಕ್ಷಿö್ಮ ಪೂಜೆ, ಕುಬೇರ ಪೂಜೆ ಮಾಡುವರು. ಅಮವಾಸ್ಯೆ ಇರುವಂದು ದೀಪಾವಳಿ.

ನರಕ ಚತುರ್ದಶಿ, ದೀಪಾವಳಿ, ಕಾರ್ತಿಕ ಶುದ್ಧ ಪಾಡ್ಯಮಿ ಈ ಮೂರು ದಿನ ದೀಪ ಬೆಳಗುವರು. ನರಕವನ್ನು ದೂರಗೊಳಿಸಿ ಸಂತೋಷ ನೀಡುವ ದೀಪದ ಬೆಳಕೇ ದೀಪಾವಳಿ. ಜ್ಞಾನವೆಂಬ ದೀಪದಿಂದ ಅಜ್ಞಾನದ ಕತ್ತಲೆಯನ್ನು ಹೊಡೆದೋಡಿಸುವುದೇ ದೀಪಾವಳಿ.

ಹಿರಣ್ಯಾಕ್ಷನನ್ನು ಸಂಹರಿಸಲು ವಿಷ್ಣು ವರಹಾರೂಪದಲ್ಲಿ ಬಂದಾಗ ಅವನ ದೇಹದಿಂದ ಬೆವರು ಬಿದ್ದು ಅಸುರಾಕೃತಿ ಹೊಂದಿ ನರಕಾಸುರನ ಜನನವಾಯಿತು. ಅವನು ದೇವತೆಗಳನ್ನು ಹಿಂಸಿಸುತ್ತಾ ಲೋಕಕಂಟಕನಾಗಿದ್ದ. ಇದನ್ನು ಸಹಿಸಲಾಗದ ದೇವೆಂದ್ರ ಕೃಷ್ಣನ ಮೊರೆಹೋದಾಗ ಶ್ರೀ ಕೃಷ್ಣ ನರಕಾಸುರನನ್ನು ಸಂಹರಿಸಿ ವಿಜಯದ ಸಂಕೇತವೆAದು ಪಟಾಕಿ ಸಿಡಿಸಿ ಹಬ್ಬ ಮಾಡುವರು.

ಬಂಗಾಳಿಗಳು ಕಾಳೀಪೂಜೆ ಮಾಡಿ ಅಗಲಿದ ಹಿರಿಯರಿಗೆ ದೀಪಹಚ್ಚಿ ನದಿಯಲ್ಲಿ ತೇಲಿಬಿಡುವರು. ದುಷ್ಟಶಕ್ತಿಯನ್ನು ದಹಿಸಿ ಶಿಷ್ಠರನ್ನು ರಕ್ಷಿಸಿ ಹಣತೆ ಹಚ್ಚುವರು.

ನರಕ ಚತುರ್ದಶಿ ನಂತರ ದೀಪಾವಳಿ. ಮಹಾವಿಷ್ಣುವಿನ ಪತ್ನಿ ಲಕ್ಷಿö್ಮಯನ್ನು ಆಹ್ವಾನಿಸುವ ಹಬ್ಬ. ಧನಲಕ್ಷಿö್ಮ ಪೂಜೆ ಸಮುದ್ರ ಮಂಥನದಿAದ ಲಕ್ಷಿö್ಮ ಉದಯಿಸಿದ ದಿನ. ಕಾರ್ತಿಕ ಮಾಸದ ಅಮವಾಸ್ಯೆಯಂದು ಮಹಾಲಕ್ಷಿö್ಮಪೂಜೆ. ದೀಪಾರಾಧನೆಯಿಂದ ಲಕ್ಷಿö್ಮಯನ್ನು ಪೂಜಿಸುವರು. ಹಬ್ಬದಂದು ಹೊಸಬಟ್ಟೆ ಧರಿಸಿ ಪೂಜೆ ಮಾಡಿ ಸಿಹಿ ಪೊಂಗಲ್, ಒಬ್ಬಟ್ಟು ಮುಂತಾದ ಖಾದ್ಯಗಳನ್ನು ತಯಾರಿಸಿ ಹಬ್ಬ ಆಚರಿಸುವರು. ಎಲ್ಲರೂ ಸಂಭ್ರಮದಿAದ ಹಬ್ಬ ಆಚರಿಸಿ ಸಂಭ್ರಮಿಸೋಣ.

- ಚೊಟ್ಟೆಯಂಡಮಾಡ ಲಲಿತಾ ಕಾರ್ಯಪ್ಪ, ಟಿ. ಶೆಟ್ಟಿಗೇರಿ.