"ದೀಪಾವಳಿ" ಹಬ್ಬ ಪದವೇ ಹೇಳುವಂತೆ ದೀಪಗಳ ಸಾಲು ಎನ್ನುವಂತೆ ಜನರ ಜೀವನಕ್ಕೆ ದಾರಿ ದೀಪವಾಗುವ ಹಬ್ಬ. ದೀಪಾವಳಿ ಪದವು ಹಿಂದಿ ಭಾಷೆಯ ಪದವಾಗಿದ್ದು ಶ್ರೀ ರಾಮಚಂದ್ರನ ಗೌರವಾರ್ಥವಾಗಿ ಆಚರಿಸಲಾಗುತ್ತದೆ. ಹಿಂದೂ ಪುರಾಣಗಳ ಪ್ರಕಾರ ಈ ದಿನದಂದು ಶ್ರೀ ರಾಮನು ೧೪ ವರ್ಷಗಳ ವನವಾಸದ ನಂತರ ಅಯೋಧ್ಯೆಗೆ ಮರಳಿದನು ಎಂದು ಹೇಳಲಾಗುತದೆ.
ಶ್ರೀರಾಮನು ಹಿಂದಿರುಗಿದಾಗ ಅಯೋಧ್ಯೆಯ ಜನರು ಅವನನ್ನು ಸ್ವಾಗತಿಸಲು ಮತ್ತು ಅವನ ವಿಜಯವನ್ನು ಆಚರಿಸಲು ದೀಪಗಳನ್ನು ಬೆಳಗಿಸಿದರು ಎನ್ನುತ್ತಾರೆ. ಅಂದಿನಿAದ ಕೆಟ್ಟದರ ಮೇಲೆ ಒಳಿತಿನ ವಿಜಯವನ್ನು ಸಾಂಕೇತಿಸಲು ದೀಪಾವಳಿಯನ್ನು ಆಚರಿಸಲಾಗುತ್ತದೆ.
ದೀಪಾವಳಿ ಹಬ್ಬದಲ್ಲಿ ಸಂಪತ್ತು ಮತ್ತು ಸಮೃದ್ಧಿಗಾಗಿ ಲಕ್ಷಿö್ಮ ದೇವಿಯನ್ನು ಪೂಜಿಸಲಾಗುತ್ತದೆ. ಲಕ್ಷಿö್ಮ ದೇವಿಯು ಸಂಪತ್ತು ಮತ್ತು ಸಮೃದ್ಧಿಯ ದೇವತೆಯಾಗಿದ್ದಾಳೆ ಈ ಪೂಜೆಯಿಂದ ದೇವತೆಗಳ ಆಶೀರ್ವಾದವನ್ನು ಪಡೆಯಲಾಗುತ್ತದೆ ಎಂದು ಹೇಳಲಾಗುತ್ತದೆ. ದುಷ್ಟಶಕ್ತಿಗಳನ್ನು ದೂರವಿಟ್ಟು ಜೀವನಕ್ಕೆ ಬೆಳಕು ನೀಡುತ್ತದೆ ಎಂಬ ನಂಬಿಕೆಯಿAದ ಅಂದು ಮನೆಗಳನ್ನು ದೀಪಗಳು, ರಂಗೋಲಿ ಮತ್ತು ಹೂವುಗಳಿಂದ ಅಲಂಕರಿಸಿ ಪೂಜೆ ನಂತರ ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಸಿಹಿ, ತಿಂಡಿಗಳನ್ನು ಹಂಚಿಕೊಳ್ಳಲಾಗುತ್ತದೆ
ಸAಜೆ ಪಟಾಕಿಗಳನ್ನು ಸಿಡಿಸುವ ಮೂಲಕ ಹಬ್ಬದ ಸಂಭ್ರಮವನ್ನು ಆಚರಿಸಲಾಗುತ್ತದೆ. ಎಲ್ಲರೂ ಆನಂದಿಸುವ ಹಬ್ಬಗಳ ನಡುವೆ, ಪಟಾಕಿಗಳನ್ನು ಸಿಡಿಸುವುದು ಶಬ್ದ ಮತ್ತು ವಾಯು ಮಾಲಿನ್ಯಕ್ಕೆ ಕಾರಣವಾಗುತ್ತದೆ ಎಂಬುದನ್ನು ನಾವುಗಳು ಮರೆತುಬಿಡುತ್ತೇವೆ. ಇತ್ತೀಚಿಗೆ ಪರಿಸರಕ್ಕೆ ಹಾನಿಯುಂಟುಮಾಡುವ ಪಟಾಕಿಗಳ ಬದಲು ಪರಿಸರ ಸ್ನೇಹಿ ಪಟಾಕಿಗಳನ್ನು ಬಳಸಲು ಪ್ರೋತ್ಸಾಹಿಸಲಾಗುತ್ತಿದೆ.
ಸುರಕ್ಷಿತ ದೀಪಾವಳಿ ಆಚರಣೆಗೆ ಅನುಸರಿಸಬೇಕಾದ ಸೂತ್ರಗಳು
ದೀಪಾವಳಿ ಬೆಳಕಿನ ಹಬ್ಬ ಅಂತರAಗದೊಳಗಿನ ಅಂಧಕಾರವನ್ನು ತೊಲಗಿಸಿ ಸುಜ್ಞಾನದ ಬೆಳಕಿನ ದಿವ್ಯ ಪಥದತ್ತ ನಮ್ಮನ್ನು ಕೊಂಡೊಯ್ಯುವುದು. ದೀಪಾವಳಿ ಸಾಂಪ್ರದಾಯಿಕ ಆಚರಣೆ. ಇಲ್ಲಿ ಹಣತೆಗಳನ್ನು ಬೆಳಗುವುದು ದೀಪಾಲಂಕಾರಕ್ಕೆ ಪ್ರಧಾನವಾದರೂ ಇತ್ತೀಚಿನ ದಶಕಗಳಲ್ಲಿ ಪಟಾಕಿ ಸಿಡಿಸುವುದು ದೀಪಾವಳಿ ಹಬ್ಬದ ಅವಿಭಾಜ್ಯ ಅಂಗ ಎನ್ನುವಂತಾಗಿದೆ.
ಇತರರನ್ನು ಬಿಂಬಿಸುವ ಸಲುವಾಗಿ ಬರಿಗೈಯಲ್ಲಿ ಪಟಾಕಿ ಸಿಡಿಸಿ ಅಪಾಯವನ್ನು ಮೈ ಮೇಲೆ ಎಳೆದುಕೊಳ್ಳದಿರಿ. ಸಾವಿರಾರು ರೂಪಾಯಿಗಳ ಸಿಡಿಮದ್ದುಗಳನ್ನು ತರುವುದು ಗಂಟೆಗಟ್ಟಲೆ ಸಿಡಿಸಿ ಸಂಭ್ರಮಿಸುವುದು ಪ್ರತಿಷ್ಠೆಯ ಸಂಕೇತವೆAದು ಭಾವಿಸುವುದು ತರವಲ್ಲ. ಪಟಾಕಿ ರಹಿತ ದೀಪಾವಳಿ ಆಚರಿಸುವ ಚಾಲೆಂಜ್ ತೆಗೆದುಕೊಳ್ಳೋಣ. ಪರಿಸರ ಮಾಲಿನ್ಯವನ್ನು ನಿಯಂತ್ರಿಸೋಣ. ಸಂಭವನೀಯ ದುರಂತಗಳನ್ನು ತಪ್ಪಿಸೋಣ. ಮಣ್ಣಿನ ಹಣತೆಗಳನ್ನು ಕೊಂಡು ತಂದು ಬೆಳಗಿಸುವ ಮೂಲಕ ನಾವು ಬೆಳಕಿನ ಹಬ್ಬ ದೀಪಾವಳಿಯನ್ನು ಸಾಂಪ್ರದಾಯಿಕವಾಗಿ ಆಚರಿಸೋಣ. ಇತರರಿಗೂ ಮಾದರಿಯಾಗೋಣ.
- ಈರಮಂಡ ಹರಿಣಿ ವಿಜಯ್, ಮೂರ್ನಾಡು. ದೂ. ೯೭೪೦೯೭೦೮೪೦